Crime Update: ಪೊಲೀಸರ ಎದುರೇ ಗುಂಪು ಘರ್ಷಣೆ, ಪೊಲೀಸರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದವ ಸೆರೆ, ನಾಲ್ಕು ಮನೆಗಳಲ್ಲಿ ಕಳ್ಳತನ
ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಂದು ಜನರನ್ನು ಪರಿಚಯಿಸಿಕೊಳ್ಳುತ್ತಿದ್ದ. ಪೊಲೀಸ್ ಕೆಲಸ ಕೂಡಿಸುವುದಾಗಿ ಯುವಕರಿಂದ ಹಣ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ವಂಚಿಸ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನಿಲ್ ನರಸಿಂಹರಾವ್ ಕುಲಕರ್ಣಿ (57) ಬಂಧಿತ ಆರೋಪಿ. ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಂದು ಜನರನ್ನು ಪರಿಚಯಿಸಿಕೊಳ್ಳುತ್ತಿದ್ದ. ಪೊಲೀಸ್ ಕೆಲಸ ಕೂಡಿಸುವುದಾಗಿ ಯುವಕರಿಂದ ಹಣ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್ ಕಳ್ಳರ ಬಂಧನ ಬೆಂಗಳೂರಿನ ಜೆ.ಜೆ.ನಗರ ಪೊಲೀಸರು ಬೈಕ್ ಕಳ್ಳತನ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಮೊಹಮದ್ ಅರ್ಬಾಜ್, ಸೈಯದ್ ಹಯಾತ್, ಶಾಹಬಾಜ್, ಮೊಹಮದ್ ಜೈನ್, ಮುಬಾರಕ್, ವರುಣ್ ಕುಮಾರ್ ಬಂಧಿತರು. ಆರೋಪಿಗಳಿಂದ 18 ಬೈಕ್ ಸೇರಿದಂತೆ ಒಟ್ಟು ₹ 10.50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದರೋಡೆ ಆರೋಪಿಗಳ ಸೆರೆ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ, ಸುನಿಲ್, ಮಂಜು, ಶಿವರಾಜ್, ಜಗದೀಶ ಬಂಧಿತರು. ನ 26ರಂದು ಚಿತ್ರಾ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪಿಗಳು ಚಿನ್ನದ ಸರ, ಉಂಗುರ, ಹಣ, ಮೊಬೈಲ್ ಕಸಿದು ಪರಾರಿಯಾಗಿದ್ದರು. ಬಂಧಿತರಿಂದ ಚಿನ್ನದ ಆಭರಣಗಳು ಸೇರಿದಂತೆ ₹ 77,000 ಮೌಲ್ಯದ ಕಳವು ಮಾಲು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ಆಟೊ, ದ್ವಿಚಕ್ರ ವಾಹನ, ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಧಾರವಾಡ: ಪೊಲೀಸರ ಎದುರೇ ಹಲ್ಲೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಮೀಪ ಹಣಕಾಸು ವಿಚಾರವಾಗಿ 2 ಗುಂಪುಗಳ ನಡುವೆ ಮಂಗಳವಾರ ಮಾರಾಮಾರಿ ನಡೆದಿದೆ. ಯುವಕನ ಬಟ್ಟೆ ಹರಿದ ಪುಂಡರು ಬೆಲ್ಟ್ನಿಂದ ಹಲ್ಲೆ ನಡೆಸಿದ್ದಾರೆ. ತಮ್ಮ ಕಣ್ಣೆದುರೇ ಹಲ್ಲೆ ನಡೆಯುತ್ತಿದ್ದರೂ ಡಿಸಿ ಕಚೇರಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಸಾರ್ವಜನಿಕರ ಜೊತೆ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ರಾಯಚೂರು: ಹಳ್ಳಿಯಲ್ಲಿ ಸರಣಿ ಕಳ್ಳತನ ಲಿಂಗಸುಗೂರು ತಾಲ್ಲೂಕಿನ ಗ್ರಾಮದ ನಾಲ್ಕು ಮನೆಗಳಲ್ಲಿ ಒಂದೇ ದಿನ ಕಳ್ಳತನ ನಡೆದಿದೆ. ವೀರಭದ್ರಪ್ಪ ಮನೆಯಲ್ಲಿ 25 ಗ್ರಾಂ ಚಿನ್ನಾಭರಣ, ಶರಣಪ್ಪ ಮನೆಯಲ್ಲಿ 50 ಸಾವಿರ ನಗದು ಕಳುವಾಗಿದೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೆರೆಡು ಮನೆಗಳ ಕಳುವಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಎಸಿಬಿ ದಾಳಿ: ಜಾಮೀನು ಅರ್ಜಿಗೆ ಸರ್ಕಾರಿ ವಕೀಲರ ತಕರಾರು ಕೃಷಿ ಇಲಾಖೆ ನಿರ್ದೇಶಕ ರುದ್ರೇಶಪ್ಪ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau – ACB) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ತಕರಾರು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ಶಿವಮೊಗ್ಗದ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರಕ್ಕೆ ಮುಂದೂಡಿತು. ಗದಗದಲ್ಲಿ ಕೃಷಿ ಇಲಾಖೆ ನಿರ್ದೇಶಕನಾಗಿದ್ದ ಆರೋಪಿ ರುದ್ರೇಶಪ್ಪ ನ.25ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಸಿಬಿ ದಾಳಿ ವೇಳೆ ರುದ್ರೇಶಪ್ಪ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಆಸ್ತಿ ಪತ್ತೆಯಾಗಿತ್ತು.
ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಸೂಪರಿಂಟೆಂಡೆಂಟ್ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯನಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸೂಪರಿಂಟೆಂಡೆಂಟ್ ಸೋಮಶೇಖರಯ್ಯ ಟೈಪ್ರೈಟರ್ ಮೂಲಕ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದರು. ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಲು ₹ 1 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಕೋವಿಡ್ನಿಂದಾಗಿ ಚುನಾವಣೆಯನ್ನು ಮುಂದೂಡಲಾಗಿತ್ತು.
ಇದನ್ನೂ ಓದಿ: Crime News: ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನ ಬೆನ್ನತ್ತಿದ ಯುವಕರು, ಲಾರಿ ಚಾಲಕನ ಅಜಾಗ್ರತೆಯಿಂದ ಉರುಳಿದ 9 ಕಂಬ ಇದನ್ನೂ ಓದಿ: Crime News: 2.5 ಲಕ್ಷಕ್ಕೆ ಗಂಡು ಮಗುವನ್ನು ಮಾರಿದ ತಾಯಿ ಮರುಕ್ಷಣವೇ ಹಣ ಕಳೆದುಕೊಂಡ ಕತೆಯಿದು!