AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: 2.5 ಲಕ್ಷಕ್ಕೆ ಗಂಡು ಮಗುವನ್ನು ಮಾರಿದ ತಾಯಿ ಮರುಕ್ಷಣವೇ ಹಣ ಕಳೆದುಕೊಂಡ ಕತೆಯಿದು!

Chennai News: ನನ್ನ ಗಂಡ ನನ್ನನ್ನು ಬಿಟ್ಟು ಹೋಗಿದ್ದರಿಂದ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ನಾನು ಎರಡನೇ ಮಗುವಿಗೆ ಗರ್ಭಪಾತ ಮಾಡಿಸಲು ಅಲ್ಲಿಗೆ ಹೋಗಿದ್ದೆ. ಆಗ ತನಗೆ ತಿಳಿದಿರುವ ವ್ಯಕ್ತಿಗೆ ಮಗುವನ್ನು ಮಾರಾಟ ಮಾಡಲು ಸಿದ್ಧರಿದ್ದರೆ ಉತ್ತಮ ಮೊತ್ತವನ್ನು ನೀಡುವುದಾಗಿ ಜಯಗೀತಾ ಹೇಳಿದ್ದಳು ಎಂದು ಸಂತ್ರಸ್ತೆ ಹೇಳಿದ್ದಾರೆ.

Crime News: 2.5 ಲಕ್ಷಕ್ಕೆ ಗಂಡು ಮಗುವನ್ನು ಮಾರಿದ ತಾಯಿ ಮರುಕ್ಷಣವೇ ಹಣ ಕಳೆದುಕೊಂಡ ಕತೆಯಿದು!
ಸಾಂಕೇತಿಕ ಚಿತ್ರ
TV9 Web
| Edited By: |

Updated on: Nov 29, 2021 | 9:22 PM

Share

ಮಹಿಳೆಯೊಬ್ಬರು ತನ್ನ ಒಂದು ವಾರದ ಮಗುವನ್ನು 2.5 ಲಕ್ಷಕ್ಕೆ ಮಾರಾಟ ಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ಪುರಸಾವಲ್ಕಮ್‌ನಲ್ಲಿ ಇಬ್ಬರು ವ್ಯಕ್ತಿಗಳು ಆಕೆಯ ಬಳಿಯಿದ್ದ ಹಣವನ್ನು ದರೋಡೆ ಮಾಡಿದ್ದಾರೆ. ಮಗು ಮತ್ತು ಹಣ ಎರಡನ್ನೂ ಕಳೆದುಕೊಂಡು ಆಕೆ ಕಂಗಾಲಾಗಿದ್ದಾಳೆ. ಈ ಬಗ್ಗೆ ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಮಿಳುನಾಡಿನಲ್ಲಿ ಭಾನುವಾರ ಈ ಘಟನೆ ನಡೆದಿದೆ.

28 ವರ್ಷದ ಯಾಸ್ಮಿನ್ ವೆಪೇರಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ತಾನು ಯಾರಿಗೆ ಮಗುವನ್ನು ಮಾರಾಟ ಮಾಡಿದ್ದೇನೋ ಅದೇ ಮಹಿಳೆಯ ಕೈವಾಡ ಈ ದರೋಡೆಯ ಹಿಂದೆ ಇರಬಹುದು ಎಂದು ಆಕೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಈ ಬಗ್ಗೆ ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದ್ದು, ನಾನು ಜಯಗೀತಾ ಎಂಬ ಮಹಿಳೆಗೆ ನನ್ನ 1 ವಾರದ ಮಗುವನ್ನು ಮಾರಾಟ ಮಾಡಿದ್ದೆ. ಆಕೆಯೇ ಈ ದರೋಡೆಗೆ ಕುಮ್ಮಕ್ಕು ಕೊಟ್ಟಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.

ಯಾಸ್ಮಿನ್ ಅವರು ಕೆಲ್ಲಿಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎನ್ನೂರಿನ ನಿವಾಸಿ ಜಯಗೀತಾ ಅವರನ್ನು ಭೇಟಿಯಾಗಿದ್ದರು. ನನ್ನ ಗಂಡ ನನ್ನನ್ನು ಬಿಟ್ಟು ಹೋಗಿದ್ದರಿಂದ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ನಾನು ಎರಡನೇ ಮಗುವಿಗೆ ಗರ್ಭಪಾತ ಮಾಡಿಸಲು ಅಲ್ಲಿಗೆ ಹೋಗಿದ್ದೆ. ಆಗ ತನಗೆ ತಿಳಿದಿರುವ ವ್ಯಕ್ತಿಗೆ ಮಗುವನ್ನು ಮಾರಾಟ ಮಾಡಲು ಸಿದ್ಧರಿದ್ದರೆ ಉತ್ತಮ ಮೊತ್ತವನ್ನು ನೀಡುವುದಾಗಿ ಜಯಗೀತಾ ಹೇಳಿದ್ದಳು ಎಂದು ಸಂತ್ರಸ್ತೆ ಹೇಳಿದ್ದಾರೆ.

ನವೆಂಬರ್ 21ರಂದು ಯಾಸ್ಮಿನ್ ಗಂಡು ಮಗುವಿಗೆ ಜನ್ಮ ನೀಡಿದ ನಂತರ, ಜಯಗೀತಾ ಮಗುವನ್ನು ಪುರಸಾವಲ್ಕಮ್ ಹೈ ರೋಡ್‌ಗೆ ಕರೆತರುವಂತೆ ಕೇಳಿದಳು. ಯಾಸ್ಮಿನ್ ನಿಗದಿತ ಸ್ಥಳಕ್ಕೆ ತಲುಪಿದಾಗ, ಜಯಗೀತಾ ಅವರಿಗೆ ಧನಮ್ ಎಂಬ ಮಹಿಳೆ ಮತ್ತು ಇಬ್ಬರು ಪುರುಷರನ್ನು ಪರಿಚಯಿಸಿದರು.

ವರದಿಗಳ ಪ್ರಕಾರ, ಯಾಸ್ಮಿನ್ ತನ್ನ ಗಂಡು ಮಗುವನ್ನು ಧನಮ್‌ಗೆ ಒಪ್ಪಿಸಿ 2.5 ಲಕ್ಷ ರೂ. ಪಡೆದುಕೊಂಡಳು. ಅವಳು ಒಪ್ಪಂದದ ಅಡಿಯಲ್ಲಿ ‘ಬಾಂಡ್’ ಎಂದು ಹೇಳಲಾದ ಖಾಲಿ ಪೇಪರ್‌ಗೆ ಸಹಿ ಹಾಕುವಂತೆ ಕೇಳಿಕೊಂಡಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಕೆಲವು ನಿಮಿಷಗಳ ನಂತರ, ಅವಳು ತನ್ನ ಹಿರಿಯ ಮಗಳು ಶರ್ಮಿಳಾಳೊಂದಿಗೆ ಆಟೋ-ರಿಕ್ಷಾವನ್ನು ತೆಗೆದುಕೊಂಡಾಗ, ಇಬ್ಬರು ಪುರುಷರು ಅವಳನ್ನು ಬೈಕ್​ನಲ್ಲಿ ಹಿಂಬಾಲಿಸಲು ಪ್ರಾರಂಭಿಸಿದರು.

ಚಾಲಕನ ಬಳಿ ವಿಳಾಸ ಕೇಳುವ ನೆಪದಲ್ಲಿ ಇಬ್ಬರು ಪುಲಿಯನ್‌ತೋಪ್ ಬಳಿ ಆಟೋ ನಿಲ್ಲಿಸಿದ್ದರು ಎಂದು ಯಾಸ್ಮಿನ್ ಹೇಳಿದ್ದಾರೆ. ಆಕೆಯನ್ನು ಬೆದರಿಸಿ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಯಗೀತಾ ಹಾಗೂ ಇಬ್ಬರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದಾರೆ.

ಇದನ್ನೂ ಓದಿ: Crime News: ಗನ್​ ಜೊತೆ ಸೆಲ್ಫೀ ಕ್ಲಿಕ್ಕಿಸುವಾಗ ಹಣೆಗೆ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಸಾವು!

Crime News: ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪ್ರೇಮಿ!

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ