Crime News: ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪ್ರೇಮಿ!

Crime News: ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪ್ರೇಮಿ!
ಸಾಂಕೇತಿಕ ಚಿತ್ರ

ತನ್ನ ಪ್ರೀತಿಯನ್ನು ಒಪ್ಪದ ಯುವತಿಗೆ ಬೆಂಕಿ ಹಚ್ಚಿದ ಯುವಕ ತಾನು ಕೂಡ ಬೆಂಕಿ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿದ್ದಾನೆ. ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

TV9kannada Web Team

| Edited By: Sushma Chakre

Nov 15, 2021 | 2:34 PM

ವಿಶಾಖಪಟ್ಟಣಂ: ತಾನು ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿದ ಘಟನೆ ಆಂಧ್ರಪ್ರದೇಶದ (Andhra Pradesh) ವೈಜಾಗ್‌ನ ಖಾಸಗಿ ಲಾಡ್ಜ್‌ನಲ್ಲಿ ನಡೆದಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವರದಿಗಳ ಪ್ರಕಾರ, ಯುವಕನ ಪ್ರಪೋಸಲ್ ಅನ್ನು ಯುವತಿ ತಿರಸ್ಕರಿಸಿದ ನಂತರ ಈ ಘಟನೆ ನಡೆದಿದೆ. ತಾನೂ ಬೆಂಕಿ ಹಚ್ಚಿಕೊಂಡು, ಯುವತಿಗೆ ಬೆಂಕಿ ಹಚ್ಚಿದ ಯುವಕನನ್ನು ತೆಲಂಗಾಣದ ಭೂಪಾಲಪಲ್ಲೆ ಮೂಲದ ಪಿ. ಹರ್ಷವರ್ಧನ್ ಎಂದು ಗುರುತಿಸಲಾಗಿದೆ. ಆ ಯುವತಿ ವಿಶಾಖಪಟ್ಟಣಂ ಮೂಲದವರು. ಇಬ್ಬರೂ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದರಿಂದ ಅವರು ತಮ್ಮ ತಮ್ಮ ಮನೆಗಳಲ್ಲಿಯೇ ವಾಸವಾಗಿದ್ದರು.

ಹರ್ಷವರ್ಧನ್ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಪ್ರಪೋಸಲ್ ಮಾಡಿದ ಮೇಲೆ ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆತ ಕೋಪಗೊಂಡಿದ್ದ. ಇದರಿಂದ ವೈಜಾಗ್‌ನ ಲಾಡ್ಜ್​ಗೆ ಆಕೆಯನ್ನು ಕರೆದುಕೊಂಡು ಹೋದ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಜೋರಾಗಿ ಹೊತ್ತಿಕೊಂಡ ನಂತರ ಅವರಿಬ್ಬರೂ ಸಹಾಯಕ್ಕಾಗಿ ಹೊರಗೆ ಓಡಿಬಂದಿದ್ದಾರೆ.

ಅವರಿಬ್ಬರನ್ನೂ ಲಾಡ್ಜ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಯುವತಿ ತಾನು ಆ ಯುವಕನನ್ನು ಮದುವೆಯಾಗಲು ಒಪ್ಪದ ಕಾರಣದಿಂದ ಈ ರೀತಿ ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಆದರೆ, ಆ ಯುವಕ ತಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದೇವೆ. ಹೀಗಾಗಿಯೇ ಒಟ್ಟಿಗೇ ಸಾಯಲು ಪ್ರಯತ್ನಿಸಿದೆವು ಎಂದಿದ್ದಾನೆ. ಇಬ್ಬರ ಹೇಳಿಕೆಯೂ ಒಂದಕ್ಕೊಂದು ಸಂಬಂಧವಿಲ್ಲದಂತೆ ಇರುವುದರಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ, ಆ ಯುವತಿಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದು, ಆಕೆಗೆ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನಿಗೆ ಹೆಚ್ಚೇನೂ ಗಾಯಗಳಾಗದ ಕಾರಣ ಆತನಿಗೆ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಡೆದ ಲಾಡ್ಜ್​ನಲ್ಲಿಯೇ ಸೆಪ್ಟೆಂಬರ್ 8ರಂದು ಕೂಡ ಆ ಯುವಕ ಮತ್ತು ಯುವತಿ ಭೇಟಿಯಾಗಿದ್ದರು ಎಂದು ಪೊಲೀಸರಿಗೆ ಲಾಡ್ಜ್ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಹೋಂ ವರ್ಕ್ ಮಾಡದ 7ನೇ ಕ್ಲಾಸ್​ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ!

Murder: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ; ಬೆಳ್ಳಿ ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

Follow us on

Related Stories

Most Read Stories

Click on your DTH Provider to Add TV9 Kannada