ನೆಲಮಂಗಲ ಪಟ್ಟಣದಲ್ಲಿ ಹೆಚ್ಚಾದ ಪುಂಡ ಹಾವಳಿ; ಕಾಲೇಜು ವಿದ್ಯಾರ್ಥಿನಿಯ ಮೇಲೆ ಯುವಕನಿಂದ ಹಲ್ಲೆ

ನೆಲಮಂಗಲ ಪಟ್ಟಣದಲ್ಲಿ ಹೆಚ್ಚಾದ ಪುಂಡ ಹಾವಳಿ; ಕಾಲೇಜು ವಿದ್ಯಾರ್ಥಿನಿಯ ಮೇಲೆ ಯುವಕನಿಂದ ಹಲ್ಲೆ
ನೆಲಮಂಗಲ ಪಟ್ಟಣದಲ್ಲಿ ಹೆಚ್ಚಾದ ಪುಂಡ ಹಾವಳಿ; ಕಾಲೇಜು ವಿದ್ಯಾರ್ಥಿನಿಯ ಮೇಲೆ ಯುವಕನಿಂದ ಹಲ್ಲೆ

ನೆಲಮಂಗಲದ ಪ್ರತಿಷ್ಠಿತ ಕಾಲೇಜು ಮುಂದೆಯೇ ಈ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಯುವತಿಯು ನೆಲಮಂಗಲ ಟೌನ್ ಕಾಲೇಜಿನ ಸಮವಸ್ತ್ರ ಧರಿಸಿರುವುದು ಕಾಣುತ್ತದೆ. ರಸ್ತೆಯಲ್ಲಿ ನಡೆದು ಬರುತ್ತಿದ್ದ ಯುವತಿಯ ಕಪಾಳಕ್ಕೆ ಬಾರಿಸಿದ ಆ ಹಲ್ಲೆಕೋರ ಪುಂಡ ಬಳಿಕ, ಯುವತಿಯ ಕುತ್ತಿಗೆಗೆ ಕೈ ಹಾಕಿ ಕರೆದೊಯ್ದಿದ್ದಾನೆ.

TV9kannada Web Team

| Edited By: sadhu srinath

Nov 15, 2021 | 7:50 AM

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ಪುಂಡರು ಪೋಕರಿಗಳ ಹಾವಳಿ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿನಿಯ ಮೇಲೆ ಯುವಕನಿಂದ ಹಲ್ಲೆ ನಡೆದಿರುವ ಪ್ರಕರಣ ವರದಿಯಾಗಿದೆ. ನೆಲಮಂಗಲದ ಪ್ರತಿಷ್ಠಿತ ಕಾಲೇಜು ಮುಂದೆಯೇ ಈ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಯುವತಿಯು ನೆಲಮಂಗಲ ಟೌನ್ ಕಾಲೇಜಿನ ಸಮವಸ್ತ್ರ ಧರಿಸಿರುವುದು ಕಾಣುತ್ತದೆ. ರಸ್ತೆಯಲ್ಲಿ ನಡೆದು ಬರುತ್ತಿದ್ದ ಯುವತಿಯ ಕಪಾಳಕ್ಕೆ ಬಾರಿಸಿದ ಆ ಹಲ್ಲೆಕೋರ ಪುಂಡ ಬಳಿಕ, ಯುವತಿಯ ಕುತ್ತಿಗೆಗೆ ಕೈ ಹಾಕಿ ಕರೆದೊಯ್ದಿದ್ದಾನೆ. ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿದೆ. ಅಕ್ಟೋಬರ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಸ್ಥಳೀಯರು ದೂರು ನೀಡಿದರೂ ಪೊಲೀಸರು ಕ್ರಮಕೈಗೊಂಡಿಲ್ಲ. ನೆಲಮಂಗಲ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

Also Read:

ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕೊರೊನಾ ಕಂಟಕ; ಕೊವಿಡ್ ಮಾರ್ಗಸೂಚಿಗಳಿಂದ ಮಾನಸಿಕ ಒತ್ತಡ ಹೆಚ್ಚಳ

(youth attacks college girl in nelamangala bangalore rural district)

Follow us on

Related Stories

Most Read Stories

Click on your DTH Provider to Add TV9 Kannada