ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ

‘ಪರಮಾತ್ಮ’ ಸಿನಿಮಾದಲ್ಲಿ ಪುನೀತ್​ ಜೊತೆ ಕೆಲಸ ಮಾಡುವ ಅವಕಾಶ ಗೌರಿಶ್ರೀ ಅವರಿಗೆ ಸಿಕ್ಕಿತ್ತು. ಆ ದಿನಗಳ ನೆನಪನ್ನು ಅವರೀಗ ಮೆಲುಕು ಹಾಕಿದ್ದಾರೆ.

ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ
‘ಜನರಕ್ಷಕ’ ಪೋಸ್ಟರ್​ ಲಾಂಚ್​, ಪುನೀತ್​ ರಾಜ್​ಕುಮಾರ್​
Follow us
| Updated By: ಮದನ್​ ಕುಮಾರ್​

Updated on: Jan 27, 2022 | 4:17 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕನ್ನಡ ಚಿತ್ರರಂಗ ಮರೆಯಲು ಸಾಧ್ಯವಿಲ್ಲ. ಬಾಲನಟ ಆಗಿದ್ದಾಗಿನಿಂದಲೂ ಚಂದನವನಕ್ಕೆ (Sandalwood) ಅವರ ಕಲಾಸೇವೆ ಸಂದಿದೆ. ಚಿತ್ರರಂಗದಲ್ಲಿರುವ ಎಷ್ಟೋ ಜನರಿಗೆ ಅವರು ನೇರವಾಗಿ ಸಹಾಯ ಮಾಡಿದ್ದರು. ಆ ರೀತಿ ಸಹಾಯ ಪಡೆದವರು ನಂತರ ಒಳ್ಳೊಳ್ಳೆಯ ಸಾಧನೆ ಮಾಡಿದ್ದುಂಟು. ಅದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಕೆಲವು ವರ್ಷಗಳ ಹಿಂದೆ ನೃತ್ಯ ಶಿಕ್ಷಕಿ ಗೌರಿಶ್ರೀ ಅವರು ಪುನೀತ್​ ರಾಜ್​ಕುಮಾರ್​ ಅವರಿಂದ 30 ಸಾವಿರ ರೂಪಾಯಿ ಸಹಾಯ ಪಡೆದುಕೊಂಡಿದ್ದರು. ಇಂದು ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಒಂದು ಸಿನಿಮಾ ತಯಾರಿಸುವಷ್ಟು ಶಕ್ತಿ ಪಡೆದುಕೊಂಡಿದ್ದಾರೆ. ತಮ್ಮದೇ ತಂಡವನ್ನು ಕಟ್ಟಿಕೊಂಡು ‘ಜನರಕ್ಷಕ’ ಸಿನಿಮಾ (Janarakshaka Movie) ಮಾಡಿದ್ದಾರೆ. ‘ನಾ ಭಕ್ಷಕ’ ಎಂಬ ಟ್ಯಾಗ್​ಲೈನ್​ ಕೂಡ ಈ ಚಿತ್ರಕ್ಕಿದೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್​ ಲಾಂಚ್​ ಮಾಡಲಾಯಿತು. ಆ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಪು ಮಾಡಿಕೊಳ್ಳಲಾಯಿತು. 

‘ಪರಮಾತ್ಮ’ ಸಿನಿಮಾದಲ್ಲಿ ಪುನೀತ್​ ಜೊತೆ ಕೆಲಸ ಮಾಡುವ ಅವಕಾಶ ಗೌರಿಶ್ರೀ ಅವರಿಗೆ ಸಿಕ್ಕಿತ್ತು. ಆ ದಿನಗಳ ನೆನಪನ್ನು ಅವರೀಗ ಮೆಲುಕು ಹಾಕಿದ್ದಾರೆ. ‘ನಾನು ಒಂದು ಡ್ಯಾನ್ಸ್​ ಸ್ಕೂಲ್​ ಶುರು ಮಾಡಬೇಕು ಎಂದುಕೊಂಡಾಗ ಪುನೀತ್​ ಅವರು ಬೆನ್ನುತಟ್ಟಿದ್ದರು. ಅಂದು ನನಗೆ 30 ಸಾವಿರ ರೂಪಾಯಿ ಕೊರತೆ ಆಗಿತ್ತು. ಕೇಳಿದಾಗ ನಿಂತ ಜಾಗದಲ್ಲೇ ಪುನೀತ್​ ರಾಜ್​ಕುಮಾರ್​ ಅವರು 30 ಸಾವಿರ ರೂಪಾಯಿ ನೀಡಿದ್ದರು. ಇಂದು ಅವರ ಆಶೀರ್ವಾದದಿಂದ ನಮ್ಮ ಸ್ಕೂಲ್​ ಚೆನ್ನಾಗಿ ನಡೆಯುತ್ತಿದೆ’ ಎನ್ನುವ ಗೌರಿಶ್ರೀ ಅವರು ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

‘ಜನರಕ್ಷಕ’ ಸಿನಿಮಾಗೆ ಕಥೆ-ಚಿತ್ರಕಥೆ ಬರೆದು, ನಿರ್ದೇಶನ ಮಾಡಿ, ಬಂಡವಾಳ ಹೂಡಿ, ನೃತ್ಯ ನಿರ್ದೇಶನವನ್ನೂ ಮಾಡಿರುವುದು ಗೌರಿಶ್ರೀ ಅವರ ಹೆಚ್ಚುಗಾರಿಕೆ. ಅಲ್ಲದೇ, ಮುಖ್ಯಭೂಮಿಕೆಯಲ್ಲೂ ಅವರೇ ನಟಿಸಿದ್ದಾರೆ. ಹಾಗಾಗಿ ಅವರ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ. ಪೋಸ್ಟರ್​ ರಿಲೀಸ್​ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದು ಅವರು ಶುಭ ಹಾರೈಸಿದ್ದಾರೆ. ‘ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯರ ಸಂಖ್ಯೆ ಕಡಿಮೆ. ಡಾ. ಪಾರ್ವತಮ್ಮ ರಾಜ್​ಕುಮಾರ್​ ಅವರು ಯಶಸ್ವಿ ನಿರ್ಮಾಪಕಿ ಆಗಿದ್ದರು. ಎಷ್ಟೋ ಕಲಾವಿದರಿಗೆ, ತಂತ್ರಜ್ಞರಿಗೆ ಅವರು ಅವಕಾಶ ಕೊಟ್ಟಿದ್ದರು. ಅದೇ ರೀತಿ ಗೌರಿಶ್ರೀ ಬೆಳೆಯಲಿ’ ಎಂದು ಚಿನ್ನೇಗೌಡ ಹಾರೈಸಿದರು. ಗೌರಿಶ್ರೀ ಕಾರ್ಯಕ್ಕೆ ಹಿರಿಯ ಕಲಾವಿದ ಕರಿಸುಬ್ಬು ಕೂಡ ಪ್ರೋತ್ಸಾಹ ನೀಡಿದ್ದಾರೆ.

‘ವಿ2 ಪ್ರೊಡಕ್ಷನ್ಸ್​’ ಮೂಲಕ ‘ಜನರಕ್ಷಕ’ ಸಿನಿಮಾ ತಯಾರಾಗುತ್ತಿದೆ. ಚಿತ್ರೀಕರಣ ಮುಕ್ತಾಯ ಆಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅನುಭವಿ ಛಾಯಾಗ್ರಾಹಕ ಪಿಕೆಎಚ್ ದಾಸ್​​ ಅವರು ಈ ಚಿತ್ರಕ್ಕೆ ಕ್ಯಾಮೆರಾಮ್ಯಾನ್​ ಆಗಿ ಕೆಲಸ ಮಾಡಿದ್ದಾರೆ. ಒಂದು ಹಾಡಿಗೆ ಫೈವ್​ ಸ್ಟಾರ್​ ಗಣೇಶ್​ ಕೊರಿಯೋಗ್ರಫಿ ಮಾಡಿದ್ದಾರೆ. ಸುಪ್ರೀಮ್​ ಸುಬ್ಬು ಸಾಹಸ ನಿರ್ದೇಶನ, ದೇವದಾಸ್​ ಸಂಗೀತ ನಿರ್ದೇಶಕ ಈ ಚಿತ್ರಕ್ಕಿದೆ.

‘ಜನರಕ್ಷಕ’ ಸಿನಿಮಾದಲ್ಲಿ ಗೌರಿಶ್ರೀ, ರಘು, ಸೋಮ ಸುಂದರ್​, ಪ್ರಿಯಾ, ತ್ರಿಶೂಲ್​, ರತ್ನಮಾಲಾ, ನಾಗೇಂದ್ರ, ಭಾಗ್ಯಶ್ರೀ ಮುಂತಾದವರು ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ತೆರೆಕಾಣಿಸಬೇಕು ಎಂಬ ಗುರಿ ಇಟ್ಟುಕೊಂಡು ‘ಜನರಕ್ಷಕ’ ಸಿನಿಮಾ ತಂಡ ಕಾರ್ಯಮಗ್ನವಾಗಿದೆ. ಕುಡಿತದ ಚಟದಿಂದ ಜೀವನ ಹೇಗೆ ಹಾಳಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ವಿವರಿಸುವುದರ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವುದಾಗಿ ಗೌರಿಶ್ರೀ ಹೇಳಿದ್ದಾರೆ.

ಇದನ್ನೂ ಓದಿ:

ಕಡು ಬಡತನದಲ್ಲೂ ಅಪ್ಪುಗಾಗಿ ಅದ್ದೂರಿ ಕಾರ್ಯಕ್ರಮ; ಮಗನಿಗೆ ಪುನೀತ್​ ಎಂದು ನಾಮಕರಣ

James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ