James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್

Puneeth Rajkumar: ಬಹುನಿರೀಕ್ಷಿತ ‘ಜೇಮ್ಸ್’​ ಸಿನಿಮಾದಿಂದ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಈ ಪೋಸ್ಟರ್​ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್
ಜೇಮ್ಸ್​ ಸಿನಿಮಾ ಹೊಸ ಪೋಸ್ಟರ್
Follow us
TV9 Web
| Updated By: Digi Tech Desk

Updated on:Jan 26, 2022 | 2:17 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಇಂದು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ.​ ಅವರು ಅಭಿನಯಿಸಿರುವ ‘ಜೇಮ್ಸ್​’ (James Kannada Movie) ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ ರಿಲೀಸ್​ ಆಗಿರುವ ಈ ಪೋಸ್ಟರ್​ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತ, ಈ ಸಿನಿಮಾ ಬಗ್ಗೆ ತಮಗಿರುವ ನಿರೀಕ್ಷೆ ಯಾವ ಮಟ್ಟದ್ದು ಎಂಬುದನ್ನು ತೋರಿಸುತ್ತಿದ್ದಾರೆ ಅಪ್ಪು ಫ್ಯಾನ್ಸ್​. ಈ ಚಿತ್ರಕ್ಕೆ ಚೇತನ್​ ಕುಮಾರ್​ (Chethan Kumar) ನಿರ್ದೇಶನ ಮಾಡುತ್ತಿದ್ದಾರೆ. ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಪುನೀತ್ ರಾಜ್​ಕುಮಾರ್​ ಅವರು ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿದ್ದರು. ಅವರ ನಿಧನದ ಬಳಿಕ ಇನ್ನುಳಿದ ದೃಶ್ಯಗಳ ಶೂಟಿಂಗ್​ ಅನ್ನು ಪೂರ್ಣಗೊಳಿಸಲಾಯಿತು. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಕೂಡ ಬಣ್ಣ ಹಚ್ಚಿರುವುದು ವಿಶೇಷ. ‘ಜೇಮ್ಸ್​’ನಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್​ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಚರಣ್​ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇಂದು (ಜ.26) ಬಿಡುಗಡೆ ಆಗಿರುವ ಹೊಸ ಪೋಸ್ಟರ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಆ್ಯಕ್ಷನ್​ ಸಿನಿಮಾಗಳ ಮೂಲಕ ಫೇಮಸ್​ ಆಗಿರುವವರು ನಿರ್ದೇಶಕ ಚೇತನ್​ ಕುಮಾರ್​. ಅದೇ ರೀತಿ, ಪುನೀತ್​ ರಾಜ್​ಕುಮಾರ್​ ಸಿನಿಮಾಗಳಲ್ಲೂ ಭರ್ಜರಿ ಆ್ಯಕ್ಷನ್​ ಇದ್ದೇ ಇರುತ್ತದೆ. ಇದೇ ಮೊದಲ ಬಾರಿಗೆ ಇವರಿಬ್ಬರ ಕಾಂಬಿನೇಷನ್​ನಲ್ಲಿ ‘ಜೇಮ್ಸ್​’ ಮೂಡಿಬರುತ್ತಿದೆ. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ಸಿನಿಮಾದ ಮೇಕಿಂಗ್​ ಗುಣಮಟ್ಟ ಕೂಡ ಅದ್ದೂರಿಯಾಗಿ ಇರಲಿದೆ. ಈಗ ಗಣರಾಜ್ಯೋತ್ಸವದ ಪ್ರಯುಕ್ತ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ‘ಜೇಮ್ಸ್​’ ಚಿತ್ರತಂಡ ಖುಷಿ ನೀಡಿದೆ.

ಸೈನಿಕನ ಗೆಟಪ್​ನಲ್ಲಿ ಪುನೀತ್​ ರಾಜ್​ಕುಮಾರ್​:

ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಆಗಿರುವ ಹೊಸ ಪೋಸ್ಟರ್​ನಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್​ ಧರಿಸಿದ್ದಾರೆ. ಗನ್​ ಹಿಡಿದು ಯುದ್ಧಕ್ಕೆ ಸಜ್ಜಾದ ಯೋಧನಾಗಿ ಅವರು ಕಾಣಿಸಿಕೊಂಡಿದ್ದಾರೆ. ‘ಸಲಾಂ ಸೋಲ್ಜರ್​, ದೇಶಕ್ಕೆ ನೀನೇ ಪವರ್​’ ಎಂಬ ಸ್ಲೋಗನ್​ ಈ ಪೋಸ್ಟರ್​ನಲ್ಲಿ ಗಮನ ಸೆಳೆಯುತ್ತಿದೆ. ಯಾಗಾದರೆ ಈ ಸಿನಿಮಾದಲ್ಲಿ ಪುನೀತ್​ ಅವರು ಸೈನಿಕನ ಪಾತ್ರ ಮಾಡಿದ್ದಾರಾ ಎಂಬ ಕೌತುಕ ಮೂಡಿದೆ.

ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರು ಈ ಪೋಸ್ಟರ್​ ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ, ಎಲ್ಲ ಸೆಲೆಬ್ರಿಟಿಗಳು ಕೂಡ ‘ಜೇಮ್ಸ್​’ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಅನೇಕ ನಟ-ನಟಿಯರು ಮತ್ತು ತಂತ್ರಜ್ಞರು ಈ ಚಿತ್ರದ ಹೊಸ ಪೋಸ್ಟರ್​ ಹಂಚಿಕೊಂಡಿದ್ದಾರೆ. ಆ ಮೂಲಕ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

‘ಜೇಮ್ಸ್’​ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡದಿಂದ ಈವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಬರ್ತ್​ಡೇ. ಅದೇ ದಿನ ‘ಜೇಮ್ಸ್​’ ಬಿಡುಗಡೆ ಆಗಬೇಕು ಎಂದು ಅಪ್ಪು ಅಭಿಮಾನಿಗಳು ಬಯಸುತ್ತಿದ್ದಾರೆ.

ಇದನ್ನೂ ಓದಿ:

ಪುನೀತ್​ ನಟನೆಯ ‘ಜೇಮ್ಸ್​’ ಶೂಟಿಂಗ್​ ಮುಕ್ತಾಯ; ರಿಲೀಸ್​ ಡೇಟ್​ ತಿಳಿಯಲು ಕಾದಿರುವ ಅಭಿಮಾನಿಗಳು

ಅಮೇಜಾನ್​ ಪ್ರೈಮ್​​ನಲ್ಲಿ ರಿಲೀಸ್​ ಆಗುತ್ತಿದೆ ಪುನೀತ್​ ನಿರ್ಮಾಣದ ಮೂರು ಸಿನಿಮಾಗಳು

Published On - 11:15 am, Wed, 26 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ