ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿದೆ ಪುನೀತ್ ನಿರ್ಮಾಣದ ಮೂರು ಸಿನಿಮಾಗಳು
ಪುನೀತ್ ರಾಜ್ಕುಮಾರ್ ನಟನೆ ಜತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಪಿಆರ್ಕೆ ಸಂಸ್ಥೆ ಸ್ಥಾಪಿಸಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗ ಮೂರು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ.
ಕೊವಿಡ್ ಮೂರನೇ ಅಲೆ ಕಾಣಿಸಿಕೊಂಡಿರುವುದರಿಂದ ಚಿತ್ರರಂಗದಲ್ಲಿ ಮತ್ತೆ ಅನಿಶ್ಚಿತತೆ ಎದುರಾಗಿದೆ. ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದ್ದರೂ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟಿಟಿ ಮೇಲೆ ಕಣ್ಣಿಟ್ಟಿದ್ದಾರೆ. ಹಲವು ಸಿನಿಮಾಗಳು ನೇರವಾಗಿ ಒಟಿಟಿ ಹಾದಿ ಹಿಡಿಯುತ್ತಿವೆ. ಈಗ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಅವರ ನಿರ್ಮಾಣದ ಮೂರು ಚಿತ್ರಗಳು ನೇರವಾಗಿ ಒಟಿಟಿ (OTT) ಹಾದಿ ಹಿಡಿದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ ನಟನೆ ಜತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಪಿಆರ್ಕೆ ಸಂಸ್ಥೆ ಸ್ಥಾಪಿಸಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗ ಮೂರು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಈ ಮೂರು ಚಿತ್ರಗಳು ಈಗ ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿವೆ. ವಾರಕ್ಕೆ ಒಂದರಂತೆ ಮೂರು ಚಿತ್ರಗಳು ಪ್ರೀಮಿಯರ್ ಆಗುತ್ತಿವೆ ಎನ್ನಲಾಗಿದೆ.
ಪುನೀತ್ ರಾಜ್ಕುಮಾರ್ ಅವರು ಅಕ್ಟೋಬರ್ 29ರಂದು ನಿಧನ ಹೊಂದಿದ್ದರು. ಅವರ ಅಕಾಲಿಕ ಮರಣ ಸಾಕಷ್ಟು ಜನರಿಗೆ ಶಾಕ್ ನೀಡಿದೆ. ಅವರು ಸಾಕಷ್ಟು ಸಿನಿಮಾ ಕೆಲಸಗಳನ್ನು ಅರ್ಧಕ್ಕೆ ತೊರೆದು ಹೋಗಿದ್ದಾರೆ. ‘ಜೇಮ್ಸ್’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈ ಚಿತ್ರ ಈ ವರ್ಷ ಬಿಡುಗಡೆ ಆಗಲಿದೆ. ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಅಪ್ಪು ಅತಿಥಿ ಪಾತ್ರ ಮಾಡಿದ್ದಾರೆ. ಪಿಆರ್ಕೆ ನಿರ್ಮಾಣದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತಿದೆ. ಇದರ ಜತೆಗೆ ಅವರ ನಿರ್ಮಾಣದ ಮೂರು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.
ಪಿಆರ್ಕೆ ಪ್ರೊಡಕ್ಷನ್ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅರ್ಜುನ್ ಕುಮಾರ್ ಅವರು ‘ಫ್ಯಾಮಿಲಿ ಪ್ಯಾಕ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಮ್ಯಾನ್ ಆಫ್ ದಿ ಮ್ಯಾಚ್’ಗೆ ‘ರಾಮಾ ರಾಮಾ ರೇ’ ಖ್ಯಾತಿ ಡಿ. ಸತ್ಯ ಪ್ರಕಾಶ್ ನಿರ್ದೇಶನವಿದೆ. ‘ಒನ್ ಕಟ್ ಟೂ ಕಟ್’ ಚಿತ್ರದಲ್ಲಿ ದ್ಯಾನಿಶ್ ಸೇಠ್ ನಟಿಸುತ್ತಿದ್ದಾರೆ.
with all the love and respect for power star puneeth rajkumar sir, we bring you 3 beautiful stories that will stay with you forever ?@PRK_Productions @ashwinipuneet @PRKAudio@VamBho @nakulabhyankar @danishsait @samyuktahornad #PrakashBelawadi pic.twitter.com/FEAQwwVVch
— amazon prime video IN (@PrimeVideoIN) January 21, 2022
ಈ ಮೊದಲು ಪಿಆರ್ಕೆ ಅಡಿಯಲ್ಲಿ ಸಿದ್ಧವಾದ ‘ಕವಲುದಾರಿ’, ‘ಮಾಯಾಬಜಾರ್ 2016’, ‘ಲಾ’ ಹಾಗೂ ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ಅಮೇಜಾನ್ ಪ್ರೈಮ್ ವಿಡಿಯೋದಲ್ಲೇ ವೀಕ್ಷಣೆ ಲಭ್ಯವಾಗಿತ್ತು. ಈಗ ಅವರ ಮುಂದಿನ ಮೂರು ಚಿತ್ರಗಳಿಗೆ ಅಮೇಜಾನ್ ಪ್ರೈಮ್ ವೇದಿಕೆ ಆಗಿದೆ.
ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ಅಶ್ವಿನಿ ಮತ್ತು ಮಕ್ಕಳ ಕಣ್ಣೀರು; ಪುನೀತ್ ನಿಧನರಾಗಿ ಇಂದಿಗೆ 2 ತಿಂಗಳು
‘ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತಿದ್ದೇವೆ’; ಪಿಆರ್ಕೆ ಪ್ರೊಡಕ್ಷನ್ನಿಂದ ಭಾವುಕ ಪೋಸ್ಟ್