‘ಗೆಹರಾಯಿಯಾ’ ಚಿತ್ರದಲ್ಲಿ ಸಂಬಂಧಗಳ ಬಗ್ಗೆ ಹೇಳಲಾಗಿದೆ ಎಂಬುದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಆಲಿಶಾ (ದೀಪಿಕಾ ಪಡುಕೋಣೆ) ಹಾಗೂ ಕರಣ್ (ಧೈರ್ಯ ಕರ್ವ) ಪ್ರೇಮಿಗಳು. ಆದರೆ, ಇವರ ನಡುವೆ ಯಾವುದೂ ಸರಿ ಇಲ್ಲ. ಇವರ ಸಂಬಂಧ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಆಗ ಆಲಿಶಾಗೆ ಪರಿಚಯ ಆಗೋದು, ಝೈನ್ (ಸಿದ್ಧಾಂತ್ ಚತುರ್ವೇದಿ). ಆಲಿಶಾ ಕಸಿನ್ ಟಿಯಾ (ಅನನ್ಯಾ ಪಾಂಡೆ) ಹಾಗೂ ಝೈನ್ ಮದುವೆ ನಿಗದಿ ಆಗಿದೆ. ಆದರೆ, ಝೈನ್ ಹಾಗೂ ಆಲಿಶಾ ನಡುವೆ ಅಫೇರ್ ಬೆಳೆಯುತ್ತದೆ. ಇದಿಷ್ಟು ವಿಚಾರವನ್ನು ಟ್ರೇಲರ್ನಲ್ಲಿ ಹೇಳಲಾಗಿದೆ. ಈ ಸಿನಿಮಾದ ಕಥೆ ಹೇಗೆ ಸಾಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಈ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ಧಾಂತ್ ಚತುರ್ವೇದಿ ನಡುವೆ ಸಾಕಷ್ಟು ಕಿಸ್ಸಿಂಗ್ ದೃಶ್ಯಗಳಿವೆ. ದೀಪಿಕಾ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ಟ್ರೇಲರ್ ಸಾಕಷ್ಟು ವೈರಲ್ ಆಗುತ್ತಿದೆ. ದೀಪಿಕಾ ನಟನೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಗೆಹರಾಯಿಯಾ’ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ನೇರವಾಗಿ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಈ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾ ತುಂಬ ರೊಮ್ಯಾಂಟಿಕ್ ಆದಂತಹ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ. ‘ಗೆಹರಾಯಿಯಾ’ ಬಗ್ಗೆ ದೀಪಿಕಾ ಪಡುಕೋಣೆ ಅವರಿಗೆ ವಿಶೇಷ ಪ್ರೀತಿ ಇದೆ. ನಟಿ ಅನನ್ಯಾ ಪಾಂಡೆ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರ ಫೆಬ್ರವರಿ 11ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Deepika Padukone: ಆ ಸಂದರ್ಭದಲ್ಲಿ ನನ್ನ ಗುರುತೇ ಸಿಗುತ್ತಿರಲಿಲ್ಲ; ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದ ದೀಪಿಕಾ
Deepika Padukone: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಾಲ್ಯ ಹೇಗಿತ್ತು? ಇಲ್ಲಿವೆ ಫೋಟೋಗಳು