‘ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತಿದ್ದೇವೆ’; ಪಿಆರ್ಕೆ ಪ್ರೊಡಕ್ಷನ್ನಿಂದ ಭಾವುಕ ಪೋಸ್ಟ್
2017ರ ಜುಲೈ 20ರಂದು ಪಿಆರ್ಕೆ ಪ್ರೊಡಕ್ಷನ್ ಸ್ಥಾಪನೆ ಆಯಿತು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿದೆ. ‘ಕವಲುದಾರಿ’ ಈ ಪ್ರೊಡಕ್ಷನ್ ಹೌಸ್ನಿಂದ ಹೊರ ಬಂದ ಮೊದಲ ಸಿನಿಮಾ.
ಪುನೀತ್ ರಾಜ್‌ಕುಮಾರ್ (Puneeth Rajkumar) ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಭೇಷ್ ಎನಿಸಿಕೊಂಡಿದ್ದಾರೆ. ಅವರು ಪಿಆರ್ಕೆ ಪ್ರೊಡಕ್ಷನ್ (PRK Production) ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಅವರು ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದರು. ಆದರೆ, ಅವರಿಲ್ಲದೆ ಪಿಆರ್ಕೆ ಪ್ರೊಡಕ್ಷನ್ ಬಡವಾಗಿದೆ. ಆದರೆ, ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು ಮುಂದೆ ಸಾಗಲೇಬೇಕಿದೆ. ಇದೇ ಮಾತನ್ನು ಪಿಆರ್ಕೆ ಸ್ಟುಡಿಯೋಸ್ ಕಡೆಯಿಂದಲೂ ಬಂದಿದೆ.
2017ರ ಜುಲೈ 20ರಂದು ಪಿಆರ್ಕೆ ಪ್ರೊಡಕ್ಷನ್ ಸ್ಥಾಪನೆ ಆಯಿತು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿದೆ. ‘ಕವಲುದಾರಿ’ ಈ ಪ್ರೊಡಕ್ಷನ್ ಹೌಸ್ನಿಂದ ಹೊರ ಬಂದ ಮೊದಲ ಸಿನಿಮಾ. 2019ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ನಂತರ ‘ಮಾಯಾಭಜಾರ್ 2016’, ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳು ಈ ಪ್ರೊಡಕ್ಷನ್ ಹೌಸ್ನಿಂದ ಮೂಡಿ ಬಂದಿವೆ. ಇದಲ್ಲದೆ, ಫ್ಯಾಮಿಲಿ ಪ್ಯಾಕ್, ಮ್ಯಾನ್ ಆಫ್ ದಿ ಮ್ಯಾಚ್, ಓ2 ಸಿನಿಮಾಗಳನ್ನು ಈ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದೆ.
ಪುನೀತ್ ಬಗ್ಗೆ ಸಾಲುಗಳನ್ನು ಬರೆದುಕೊಂಡಿರುವ ಪಿಆರ್ಕೆ, ‘ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯ. ಆದರೆ ಪುನೀತ್ ರಾಜ್‌ಕುಮಾರ್ ಅವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿ.ಆರ್.ಕೆ ಪ್ರೊಡಕ್ಷನ್ಸ್ ಮತ್ತು ಪಿ.ಆರ್.ಕೆ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ’ ಎಂದಿದೆ.
— PRK Productions (@PRK_Productions) November 19, 2021
ಪಿಆರ್ಕೆ ಪ್ರೊಡಕ್ಷನ್ ಆರಂಭಿಸಿದ್ದು ಪುನೀತ್ ರಾಜ್‌ಕುಮಾರ್ ಅವರೇ ಆದರೂ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಹಿಸಿಕೊಂಡಿದ್ದರು. ಹೀಗಾಗಿ, ಅಶ್ವನಿ ಅವರೇ ಪಿಆರ್ಕೆ ಪ್ರೊಡಕ್ಷನ್ ಹೌಸ್ಅನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ ಹೌಸ್ ಜತೆ ಪಿಆರ್ಕೆ ಆಡಿಯೋ ಕೂಡ ಇದೆ. ಇವೆರಡ ಸಂಪೂರ್ಣ ಜವಾಬ್ದಾರಿ ಅಶ್ವಿನಿ ಅವರ ಹೆಗಲು ಏರಿದೆ.
ಇದನ್ನೂ ಓದಿ: ‘ಅಪ್ಪು ಸರ್ ಜತೆ ನಾನು ವರ್ಕೌಟ್ ಮಾಡ್ತಿದ್ದೆ’; ಪುನೀತ್ ಜತೆಗಿನ ನೆನಪು ಹಂಚಿಕೊಂಡ ಮನುರಂಜನ್
ಕ್ರೌರ್ಯದಲ್ಲಿ ಶಾಂತಿ ಇಷ್ಟಪಡುವ ‘ಮದಗಜ’: ಭರ್ಜರಿ ಸೌಂಡ್ ಮಾಡುತ್ತಿದೆ ಶ್ರೀಮುರಳಿ ಸಿನಿಮಾ ಟ್ರೇಲರ್