‘ಅಪ್ಪು ಸರ್​ ಜತೆ ನಾನು ವರ್ಕೌಟ್​ ಮಾಡ್ತಿದ್ದೆ’; ಪುನೀತ್​ ಜತೆಗಿನ ನೆನಪು ಹಂಚಿಕೊಂಡ ಮನುರಂಜನ್​

Manuranjan Ravichandran: ಪುನೀತ್​ ರಾಜ್​ಕುಮಾರ್​ ಬಗ್ಗೆ ಮನುರಂಜನ್​ ರವಿಚಂದ್ರನ್​ ಮಾತನಾಡಿದ್ದಾರೆ. ‘ಇಂದು ಪುನೀತ್​ ಅವರು ನಮ್ಮೊಂದಿಗಿಲ್ಲ. ಆದರೆ ಅವರು ಎಲ್ಲರ ಎದೆಯಲ್ಲೂ ಶಾಶ್ವತವಾಗಿ ಇರುತ್ತಾರೆ’ ಎಂದಿದ್ದಾರೆ ಮನುರಂಜನ್.

ಎಲ್ಲರಿಗೂ ಪ್ರೀತಿ ಹಂಚುತ್ತಿದ್ದ ವ್ಯಕ್ತಿ ಆಗಿದ್ದರು ನಟ ಪುನೀತ್​ ರಾಜ್​ಕುಮಾರ್​. ಅವರ ಜತೆ ಕಳೆದ ದಿನಗಳನ್ನು ರವಿಚಂದ್ರನ್​ ಪುತ್ರ ಮನುರಂಜನ್​ ರವಿಚಂದ್ರನ್​ (Manuranjan Ravichandran) ಅವರು ಮೆಲುಕು ಹಾಕಿದ್ದಾರೆ. ವಿಶೇಷ ಏನೆಂದರೆ, ಮೂರು ವರ್ಷಗಳ ಹಿಂದೆ ಪುನೀತ್​ ರಾಜ್​ಕುಮಾರ್​ (Puneeth Rajkumar) ಮತ್ತು ಮನುರಂಜನ್​ ಅವರು ಒಂದೇ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದರು. ಆಗ ಪುನೀತ್​ ಮಾಡುತ್ತಿದ್ದ ಕಸರತ್ತುಗಳನ್ನು ನೋಡಿ ಮನುರಂಜನ್​ ಅಚ್ಚರಿಪಟ್ಟಿದ್ದರು. ‘ಅಪ್ಪು ಸರ್​ ಜೊತೆ ನಾನು ಒಂದೇ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದೆ. ಅವರ ರೀತಿ ವರ್ಕೌಟ್​ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಇಂದು ಪುನೀತ್​ ಅವರು ನಮ್ಮೊಂದಿಗಿಲ್ಲ. ಆದರೆ ಅವರು ಎಲ್ಲರ ಎದೆಯಲ್ಲೂ ಶಾಶ್ವತವಾಗಿ ಇರುತ್ತಾರೆ’ ಎಂದಿದ್ದಾರೆ ಮನುರಂಜನ್​. ಅವರ ನಟನೆಯ ‘ಮುಗಿಲ್​ ಪೇಟೆ’ (Mugilpete Kannada movie) ಸಿನಿಮಾ ನ.19ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ.

ಇದನ್ನೂ ಓದಿ:

ಮೈತುಂಬ ಅಪ್ಪು ಚಿತ್ರ, 300 ಕಿಮೀ ಸೈಕಲ್​ ಸವಾರಿ; ಪುನೀತ್​ ಸಮಾಧಿಗೆ ಅಪರೂಪದ ಅಭಿಮಾನಿ ಭೇಟಿ

ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?

Click on your DTH Provider to Add TV9 Kannada