ಮೈತುಂಬ ಅಪ್ಪು ಚಿತ್ರ, 300 ಕಿಮೀ ಸೈಕಲ್ ಸವಾರಿ; ಪುನೀತ್ ಸಮಾಧಿಗೆ ಅಪರೂಪದ ಅಭಿಮಾನಿ ಭೇಟಿ
Puneeth Rajkumar: ರಾಣೇಬೆನ್ನೂರಿನಿಂದ ಮಳೆ, ಚಳಿಯನ್ನೂ ಲೆಕ್ಕಿಸದೇ 300 ಕಿ.ಮೀ. ಸೈಕಲ್ ಸವಾರಿ ಮಾಡಿಕೊಂಡು ಬಂದಿರುವ ಸಿದ್ದೇಶ್ ಅವರು ಪುನೀತ್ ರಾಜ್ಕುಮಾರ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಪ್ರತಿಯೊಬ್ಬ ಅಭಿಮಾನಿಯ (Puneeth Rajkumar Fans) ಪ್ರೀತಿಯೂ ಭಿನ್ನ. ರಾಣೇಬೆನ್ನೂರಿನ ಸಿದ್ದೇಶ ಎಂಬ ಅಭಿಮಾನಿಯನ್ನು ನೋಡಿದಾಗ ಆ ಮಾತು ಎಷ್ಟು ನಿಜ ಎಂಬುದು ತಿಳಿಯುತ್ತದೆ. ಅಪ್ಪು ಅವರನ್ನು ನೋಡಲು ಪ್ರತಿ ವರ್ಷ ಬೆಂಗಳೂರಿಗೆ ಬರುತ್ತಿದ್ದರು ಸಿದ್ದೇಶ್. ಮೈ ಮೇಲೆ ಪುನೀತ್ ಚಿತ್ರ ಬಿಡಿಸಿಕೊಂಡು, ಬರಿ ಮೈಯಲ್ಲಿ ಸೈಕಲ್ ಸವಾರಿ ಮಾಡಿಕೊಂಡು ಬರುತ್ತಿದ್ದ ಸಿದ್ದೇಶ್ ಅವರನ್ನು ಪುನೀತ್ ಗುರುತಿಸಿ ಮಾತನಾಡಿಸುತ್ತಿದ್ದರು. ಈ ವರ್ಷ ಕೂಡ ಸಿದ್ದೇಶ್ ಬಂದಿದ್ದಾರೆ. ಆದರೆ ಅವರನ್ನು ಮಾತನಾಡಿಸಲು ಅಪ್ಪು ಇಲ್ಲ. ಆ ನೋವಿನಲ್ಲೇ ಟಿವಿ9 ಕನ್ನಡದ ಜೊತೆಗೆ ಸಿದ್ದೇಶ್ ಮಾತನಾಡಿದ್ದಾರೆ. ಪುನೀತ್ ಬಗೆಗಿನ ತಮ್ಮ ಅಭಿಮಾನ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ.
ರಾಣೇಬೆನ್ನೂರಿನಿಂದ ಮಳೆ, ಚಳಿಯನ್ನೂ ಲೆಕ್ಕಿಸದೇ 300 ಕಿ.ಮೀ ಸೈಕಲ್ ಸವಾರಿ ಮಾಡಿಕೊಂಡು ಬಂದಿರುವ ಸಿದ್ದೇಶ್ ಅವರು ಪುನೀತ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ‘ಪುನೀತ್ ಅವರನ್ನು ನಮ್ಮ ಮನೆಗೆ ಕರೆದು ಊಟ ಹಾಕಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಅದು ನೆರವೇರಲೇ ಇಲ್ಲ’ ಎಂದು ಸಿದ್ದೇಶ್ ಹೇಳಿದ್ದಾರೆ.
ಇದನ್ನೂ ಓದಿ:
ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ ಜತೆ ವಿಶಾಲ್ ಚರ್ಚೆ; ಪುನೀತ್ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?
‘ಶಿವಣ್ಣ ಮತ್ತು ನಾನು ಮುಖ ನೋಡಿಕೊಂಡ್ರೆ ನಾಚಿಕೆ ಆಗತ್ತೆ’: ನೋವಿನಲ್ಲಿ ಕಣ್ಣೀರು ಹಾಕಿದ ರಾಘಣ್ಣ
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

