ಫ್ಲ್ಯಾಟ್ನಲ್ಲಿ ಬೆಂಕಿ ಹೊತ್ತಿಕೊಂಡ ವಿಷಯ ಅಕ್ಕಪಕ್ಕದ ಫ್ಲ್ಯಾಟ್ನವರಿಗೆ ಗೊತ್ತಾಗಿದ್ದು ನಾಯೊಂದು ಬೊಗಳುತ್ತಾ ಎಚ್ಚರಿಸಿದ ಬಳಿಕವಂತೆ!
ಅದೃಷ್ಟವಶಾತ್ ಸದರಿ ಬೆಂಕಿ ಆಕಸ್ಮಿಕದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಪಾರ್ಟ್ಮೆಂಟ್ ನಿವಾಸಿಗಳೆಲ್ಲ ನಾಯಿ ಎಚ್ಚರಿಸಿದ ಬಳಿಕವೇ ತಾವೆಲ್ಲ ಆಚೆ ಬಂದಿದ್ದು ಅಂತ ಹೇಳುತ್ತಿದ್ದಾರೆ.
ವಿಶ್ವಾಸಾರ್ಹತೆ ಮತ್ತು ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರೇ ನಾಯಿ ಅಂತ ಹೇಳುತ್ತಾರೆ. ಅದು ಸರಿ, ಅದರಲ್ಲೇನೂ ಸಂಶಯವಿಲ್ಲ, ಅದರೆ ಇಲ್ಲೊಂದು ನಾಯಿ ತನ್ನ ಕುಶಾಗ್ರಮತಿಯಿಂದ ಒಂದು ನಿರ್ದಿಷ್ಟ ಅಪಾಯದಿಂದ ಜನರನ್ನು ಪಾರು ಮಾಡಲು ಅವರನ್ನು ಬೊಗಳುತ್ತಾ ಎಚ್ಚರಿಸಿ ನಾಯಿಗಳು ಪ್ರಾಣ ರಕ್ಷಕರೂ ಹೌದು ಅನ್ನವುದನ್ನು ಸಾಬೀತು ಮಾಡಿದೆ. ಅಸಲಿಗೆ ಆಗಿದ್ದೇನೆಂದರೆ, ಎಲೆಕ್ಟ್ರಾನಿಕ್ ಸಿಟಿ ವಸುಂಧರಾ ಲೇಔಟ್ನಲ್ಲಿರುವ ವಿಮಾಕ್ಸ್ ಚಾಲೆಟ್ ಅಪಾರ್ಟ್ಮೆಂಟ್ನ 119 ನೇ ನಂಬರಿನ ಫ್ಲ್ಯಾಟೊಂದರಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಅಗ್ನಿಯು ಪಕ್ಕದ ಫ್ಲ್ಯಾಟ್ಗೂ ವ್ಯಾಪಿಸಿದೆ. ವಿಷಯವನ್ನು ಅಕ್ಕಪಕ್ಕದ ಫ್ಲ್ಯಾಟ್ ನವರ ಗಮನಕ್ಕೆ ತಂದಿದ್ದು, ಇಲ್ಲಿ ಕಾಣುತ್ತಿರುವ ಇದೇ ನಾಯಿ. ಫ್ಲ್ಯಾಟ್ನಿಂದ ಹೊಗೆ ಬರುತ್ತಿರುವುದನ್ನು ನೋಡಿದಾಕ್ಷಣ ಅದು ಜೋರಾಗಿ ಬೊಗಳಲಾರಂಭಿಸಿದೆ. ಬೊಗಳುತ್ತಲೇ ವಿಮಾಕ್ಸ್ ಅಪಾರ್ಟ್ಮೆಂಟ್ ನ ಎಲ್ಲ ಫ್ಲೋರ್ಗಳಿಗೆ ಹೋಗಿದೆ. ಜನ ಹೊರ ಬಂದು ನೋಡಿದಾಗ ಫ್ಲ್ಯಾಟ್ಗಳಲ್ಲಿ ಬೆಂಕಿ ಹೊತ್ತೊಕೊಂಡಿರುವುದು ಗೊತ್ತಾಗಿ ಎಲ್ಲರೂ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಕೆಳಗೋಡಿ ಬಂದಿದ್ದಾರೆ.
ಮಾಹಿತಿಯೊಂದರ ಪ್ರಕಾರ ಸುಮಾರು 150-160 ಜನ ಆಗ ಫ್ಲ್ಯಾಟ್ ಗಳಲ್ಲಿದ್ದರು. ಅಗ್ನಿ ಶಾಮಕ ದಳದವರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅದೃಷ್ಟವಶಾತ್ ಸದರಿ ಬೆಂಕಿ ಆಕಸ್ಮಿಕದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಪಾರ್ಟ್ಮೆಂಟ್ ನಿವಾಸಿಗಳೆಲ್ಲ ನಾಯಿ ಎಚ್ಚರಿಸಿದ ಬಳಿಕವೇ ತಾವೆಲ್ಲ ಆಚೆ ಬಂದಿದ್ದು ಅಂತ ಹೇಳುತ್ತಿದ್ದಾರೆ.
ಇಲ್ಲಿನ ವಾಚ್ಮನ್ ಸಹ ನಾಯಿಯ ಬಗ್ಗೆ ಹೇಳುತ್ತಿದ್ದಾನೆ. ಅದು ಬೊಗಳುತ್ತಾ ಮೇಲೆ ಕೆಳಗೆ ಓಡಾಡಿದ್ದನ್ನು ಅವನು ನೋಡಿದನಂತೆ.