ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಕ್ಕಿಕೊಂಡಿದ್ದ ವ್ಯಕ್ತಿ ತನ್ನ ಸಾಹಸವನ್ನು ಮಕ್ಕಳು-ಮೊಮ್ಮಕ್ಕಳಿಗೆ ಹೇಳಲು ಸುರಕ್ಷಿತವಾಗಿ ದಡಕ್ಕೆ ಬರುತ್ತಾನೆ!
ಅಗ್ನಿಶಾಮಕ ದಳದ ಒಬ್ಬ ಸಿಬ್ಬಂದಿ ಒಂದು ರಿಂಗ್ ಬೋಯ್ ಮತ್ತು ಹಗ್ಗದೊಂದಿಗೆ ಏಳುಮಲೈ ಇದ್ದ ಸ್ಥಳವನ್ನು ತಲುಪಿದ್ದಾರೆ. ಅವರ ಜೊತೆ ಆದಷ್ಟು ಬೇಗ ಸುರಕ್ಷಿತವಾಗಿ ದಡ ಸೇರಲು ಏಳುಮಲೈ ಆತುರವೇನೂ ತೋರುತ್ತಿಲ್ಲ.
ಈ ವ್ಯಕ್ತಿಯ ಧೈರ್ಯವನ್ನು ಮೆಚ್ಚಲೇಬೇಕು. ಉಕ್ಕಿ ಹರಿವ ನದಿಯ ನಡುವೆ ಅವನು ನಿಂತಿದ್ದಾನೆ. ಮದ್ದೂರಿನ ಮೂಲಕ ಹರಿದು ಹೋಗುವ ಶಿಂಷಾ ನದಿಯಲ್ಲಿ ಅವನು ಸಿಕ್ಕಿಹಾಕಿಕೊಂಡಿದ್ದಾನೆ. ನದಿಯೊಳಗಿನ ಒಂದು ಕಟ್ಟೆಯ ಮೇಲೆ ಅವನು ಕೂತಿದ್ದರೆ ಸೇತುವೆ ಮೇಲೆ ಜನ ಅವನನ್ನು ನೋಡುತ್ತಾ ನಿಂತಿದ್ದಾರೆ. ಅವನಿಗೆ ರಕ್ಷಣೆ ಬೇಕಾಗಿದೆ. ಮಂಗಳವಾರ ಸಾಯಂಕಾಲ ಬಟ್ಟೆ ತೊಳೆದುಕೊಳ್ಳಲು ಅವನೀಗ ನಿಂತಿರುವ ಜಾಗಕ್ಕೆ ಹೋಗಿದ್ದಾನೆ. ಆಗ ನದಿ ಪ್ರಶಾಂತವಾಗಿ ಹರಿಯುತಿತ್ತಂತೆ. ಆದರೆ ಅವನು ಇನ್ನೂ ಬಟ್ಟೆ ತೊಳೆಯುತ್ತಿವಾಗಲೇ ನದಿ ಉಕ್ಕಲಾರಂಭಿಸಿದೆ, ನೋಡುನೋಡುತ್ತಿದ್ದಂತೆ ಅವನ ಸುತ್ತಲೂ ನೀರು ಮತ್ತು ಅವನಿಗೆ ನಡುಗಡ್ಡೆಯೊಂದರಲ್ಲಿ ಸಿಕ್ಕಿಹಾಕಿಕೊಂಡ ಸ್ಥಿತಿ. ವಿಡಿಯೋನಲ್ಲಿ ನೀವು ನೋಡುತ್ತಿರುವ ಹಾಗೆ ಸುತ್ತಲೂ ನೀರು, ಯಾವ ಕಡೆಯಿಂದಲೂ ದಡ ಸೇರುವುದು ಸಾಧ್ಯವಿಲ್ಲ. ಈಜು ಬಂದರೂ ಹರಿಯುವ ನೀರಿಗೆ ಎದುರಾಗಿ ಈಜುವುದು ಕೇವಲ ನುರಿತ ಈಜುಗಾರರಿಗೆ ಮಾತ್ರ ಸಾಧ್ಯ.
ಅಂದಹಾಗೆ, ಈ ವ್ಯಕ್ತಿಯ ಹೆಸರು ಏಳುಮಲೈ ಮತ್ತು ತಮಿಳುನಾಡು ಮೂಲದವನು. ಅವನು ಸಹಾಯ ಮಾಡಿ ಎಂದು ಕೂಗಿಕೊಂಡಾಗ ಸೇತುವೆ ಮೇಲಿಂದ ಹೋಗುತ್ತಿದ್ದವಱರೋ ಕೇಳಿಸಿಕೊಂಡಿದ್ದಾರೆ. ಅವರೊಂದಿಗೆ ಬೇರೆ ದಾರಿಹೋಕರು ಸಹ ಜಮಾ ಆಗಿದ್ದಾರೆ. ಅವರಲ್ಲಿ ಒಬ್ಬರು ಅಗ್ನಿಶಾಮಕ ದಳದವರಿಗೆ ಪೋನ್ ಮಾಡಿದ ನಂತರ ರಕ್ಷಣಾ ಕಾರ್ಯಾಚರಣೆ ಅರಂಭಗೊಂಡಿದೆ.
ಅಗ್ನಿಶಾಮಕ ದಳದ ಒಬ್ಬ ಸಿಬ್ಬಂದಿ ಒಂದು ರಿಂಗ್ ಬೋಯ್ ಮತ್ತು ಹಗ್ಗದೊಂದಿಗೆ ಏಳುಮಲೈ ಇದ್ದ ಸ್ಥಳವನ್ನು ತಲುಪಿದ್ದಾರೆ. ಅವರ ಜೊತೆ ಆದಷ್ಟು ಬೇಗ ಸುರಕ್ಷಿತವಾಗಿ ದಡ ಸೇರಲು ಏಳುಮಲೈ ಆತುರವೇನೂ ತೋರುತ್ತಿಲ್ಲ. ನಿಧಾನವಾಗಿ ತನ್ನ ಸಾಮಾನು ಸರಂಜಾಮುಗಳನ್ನು ಜೋಡಿಸಿಕೊಳ್ಳುತ್ತಾನೆ. ಪಾಪ, ಫೈರ್ ಬ್ರಿಗೇಡ್ ಸಿಬ್ಬಂದಿ ತಾಳ್ಳೆಯಿಂದ ಅವನಿಗಾಗಿ ಕಾಯುತ್ತಾರೆ.
ಅಂತಿಮವಾಗಿ ಏಳುಮಲೈಯನ್ನು ದಡಕ್ಕೆ ತಂದು ಏಣಿಯ ಮೂಲಕ ಸೇತುವೆ ಮೇಲೆ ಹತ್ತಿಸಲಾಗುತ್ತದೆ. ನಿಶ್ಚಿತ ಸಾವಿನಿಂದ ಬಚಾವಾದ ಅವನು ತನ್ನ ಸಾಹಸಗಾಥೆಯನ್ನು ಮಕ್ಕಳು ಮೊಮ್ಮಕ್ಕಳಿಗೆ ಹೇಳಲು ವಾಪಸ್ಸು ಬರುತ್ತಾನೆ.
ಇದನ್ನೂ ಓದಿ: ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್ ಧ್ವನಿಯಲ್ಲಿ ಮೂಡಿಬಂದ ಪುನೀತ್ ವಿಡಿಯೋ