ಅಪ್ಪಟ ಭಾರತೀಯ ಉತ್ಪಾದನೆ ಐಎನ್ಎಸ್ ವಿಶಾಖಪಟ್ನಂ ನೌಕೆ ರವಿವಾರ ದೇಶಕ್ಕೆ ಸಮರ್ಪಣೆಯಾಗಲಿದೆ

ನಾಲ್ಕು ವಿಶಾಖಪಟ್ಟಣಂ ವರ್ಗದ ವಿಧ್ವಂಸಕಗಳನ್ನು ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆ, ನೌಕಾ ವಿನ್ಯಾಸ ನಿರ್ದೇಶನಾಲಯವು ಸ್ಥಳೀಯವಾಗಿ ವಿನ್ಯಾಸಗೊಳಿಸಿದ್ದರೆ ಅವುಗಳ ನಿರ್ಮಾಣ ಕಾರ್ಯ ಮುಂಬೈನ ಮಜಗಾನ್ ಡಾಕ್ ಲಿಮಿಟೆಡ್‌ನಿಂದ ಅಗಿದೆ.

ನೆರೆಹೊರೆಯ ಶತ್ರು ರಾಷ್ಟ್ರಗಳ ಅತಿಕ್ರಮಣವನ್ನು ಹತ್ತಿಕ್ಕಿ ಸದೆಬಡಿಯಲು ಭಾರತೀಯ ಸೇನೆಗಳ ತಯಾರಿಗೆ ಮತ್ತೊಂದು ಬಲವಾದ ಆಯುಧದ ರೂಪದಲ್ಲಿ ಯುದ್ಧನೌಕೆ ಐ ಎನ್ ಎಸ್ ವಿಶಾಖಪಟ್ನಂ ದೊರಕಿದೆ. ಇದು ನೀರಿನ ಮೇಲೆ ಮತ್ತು ನೀರಿನೊಳಗೆ ಎದುರಾಳಿಗಳ ಅಸ್ತ್ರಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಭಾರತೀಯ ನೌಕಾಪಡೆಯ ಆರು ಜಲಾಂತರಗಾಮಿ (ಸಬ್ಮೆರೀನ್) ಸ್ಕಾರ್ಪೀನ್ ನೌಕೆಗಳ ಪೈಕಿ ವೆಲಾ ಜೊತೆ ಈ ತಿಂಗಳು ದೇಶಕ್ಕೆ ಸಮಪರ್ಣೆಯಾಗಲಿರುವ ಐ ಎನ್ ಎಸ್ ವಿಶಾಖಪಟ್ನಂ ನೌಕೆಯನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಮೇಕ್ ಇನ್ ಇಂಡಿಯಾ ದ್ಯೇಯಕ್ಕೆ ಐ ಎನ್ ಎಸ್ ವಿಶಾಖಪಟ್ನಂ ನೌಕೆಗಳು ಉಜ್ವಲ ಮತ್ತು ಹೆಮ್ಮೆಯ ಮಾದರಿಯಾಗಿ ನಿಲ್ಲುತ್ತವೆ.

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರವಿವಾರದಂದು ಐ ಎನ್ ಎಸ್ ವಿಶಾಖಪಟ್ನಂ ನೌಕೆಯನ್ನು ಮುಂಬೈನ ನೌಕಾನೆಲೆಯಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರೆ, ಭಾರತೀಯ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ನವೆಂಬರ್ 25 ರಂದು ಅದೇ ಸ್ಥಳದಿಂದ ನಾಲ್ಕನೇ ಸ್ಕಾರ್ಪೀನ್ ಸಬ್ಮೆರೀನ್ ವೆಲಾವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

ಪ್ರಾಜೆಕ್ಟ್ 15B ಭಾರತೀಯ ನೌಕಾಪಡೆಯ ರೂ 35,000-ಕೋಟಿ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಕೋಲ್ಕತ್ತಾ ವರ್ಗದ ವಿಧ್ವಂಸಕಗಳ ನಾಲ್ಕು ಅನುಸರಣೆಗಳನ್ನು ನಿರ್ಮಿಸಲಾಗುತ್ತಿದೆ.

ನಾಲ್ಕು ವಿಶಾಖಪಟ್ಟಣಂ ವರ್ಗದ ವಿಧ್ವಂಸಕಗಳನ್ನು ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆ, ನೌಕಾ ವಿನ್ಯಾಸ ನಿರ್ದೇಶನಾಲಯವು ಸ್ಥಳೀಯವಾಗಿ ವಿನ್ಯಾಸಗೊಳಿಸಿದ್ದರೆ ಅವುಗಳ ನಿರ್ಮಾಣ ಕಾರ್ಯ ಮುಂಬೈನ ಮಜಗಾನ್ ಡಾಕ್ ಲಿಮಿಟೆಡ್‌ನಿಂದ ಅಗಿದೆ.

ಪ್ರತಿಯೊಂದು ಐ ಎನ್ ಎಸ್ ವಿಶಾಖಪಟ್ನಂ ನೌಕೆಯ ಎತ್ತರ 163 ಮೀಟರ್ ಮತ್ತು ಅಗಲ 17 ಮೀಟರ್ ಆಗಿದೆ. ನೀರಿನಲ್ಲಿ ಸರಿದಾಡುವಾಗ ಇದರ ತೂಕ 7,400 ಟನ್ ಆಗಿರುತ್ತದೆ.

ಐ ಎನ್ ಎಸ್ ವಿಶಾಖಪಟ್ನಂ ಭಾರತದಲ್ಲಿ ನಿರ್ಮಿತವಾಗಿರುವ ಅತ್ಯಂತ ಸದೃಢ ಮತ್ತು ಬಲಶಾಲಿ ಯದ್ಧನೌಕೆಯಾಗಿದೆ. ನಾಲ್ಕು ಶಕ್ತಿಶಾಲಿ ಗ್ಯಾಸ್ ಟರ್ಬೈನ್ ಗಳ ಮೂಲಕ ಇದು ಚಲಿಸುತ್ತದೆ ಮತ್ತು 30 ನಾಟ್ಸ್ ಕ್ಕಿಂತ ಹೆಚ್ಚಿನ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:  Shocking Video: ದೆಹಲಿ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಗೆ ಥಳಿಸಿದ ಮಹಿಳೆ; ವಿಡಿಯೋ ವೈರಲ್

Click on your DTH Provider to Add TV9 Kannada