ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಪೈರಸಿ ಸಮಸ್ಯೆ ಹೆಚ್ಚಾಗಿದ್ದು, ಸ್ಟಾರ್ ನಟರ ಚಿತ್ರಗಳನ್ನೂ ಸೇರಿದಂತೆ ಎಲ್ಲರನ್ನೂ ಬಾಧಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ‘ಸಲಗ’, ಕೋಟಿಗೊಬ್ಬ 3’ ಮೊದಲಾದ ಚಿತ್ರಗಳಿಗೂ ಕೂಡ ಪೈರಸಿ ಸಮಸ್ಯೆ ಎದುರಾಗಿತ್ತು. ಚಿತ್ರತಂಡಗಳು ಗೃಹ ಸಚಿವರನ್ನು ಭೇಟಿಯಾಗಿ ಸಮಸ್ಯೆಯ ಕುರಿತು ಚರ್ಚಿಸಿ, ಪರಿಹಾರಕ್ಕೆ ಮನವಿ ಮಾಡಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಯಾವುದೇ ಚಿತ್ರಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದಂತಿದ್ದು, ಇತ್ತೀಚೆಗೆ ನಡೆದ ‘ಮುಗಿಲ್ಪೇಟೆ’ ಚಿತ್ರ ತಂಡದ ಸುದ್ದಿಗೋಷ್ಠಿಯಲ್ಲೂ ಚರ್ಚೆಯಾಗಿದೆ.
ಚಿತ್ರದ ಬಿಡುಗಡೆಗೂ ಮುನ್ನವೇ ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್ಪೇಟೆ’ ಚಿತ್ರಕ್ಕೆ ಪೈರಸಿ ಆತಂಕ ಎದುರಾಗಿದೆ. ಈಗಾಗಲೇ ಚಿತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ಮೊದಲಾದವುಗಳು ಶೇರ್ ಆಗುತ್ತಿರುವ ಕುರಿತಂತೆ ವಿಕ್ರಮ್ ರವಿಚಂದ್ರನ್ ಮಾತನಾಡಿದ್ದಾರೆ. ಅದರ ಕುರಿತು ಮಾಹಿತಿ ಇದೆ. ನಮ್ಮ ಕಡೆಯಿಂದ ತಡೆಯಲು ಏನೇನು ಪ್ರಯತ್ನ ಬೇಕೋ ಅದೆಲ್ಲವನ್ನೂ ಮಾಡಲಾಗುತ್ತಿದೆ ಎಂದಿದ್ದಾರೆ. ‘ಮುಗಿಲ್ಪೇಟೆ’ ಚಿತ್ರವು ನವೆಂಬರ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:
OTT: ಒಟಿಟಿ ಪ್ರಿಯರಿಗೆ ಸಂತಸದ ಸುದ್ದಿ; ಈ ವಾರ ಬಿಡುಗಡೆಯಾಗಲಿವೆ ಬಹುನಿರೀಕ್ಷಿತ ಸೀರೀಸ್, ಚಿತ್ರಗಳು!
ಸಲ್ಮಾನ್ ಜೊತೆ ನಟಿಸಲು ಬಹಳ ಆತಂಕಿತರಾಗಿದ್ದ ಆಯುಷ್ ಶರ್ಮಾ; ಇದಕ್ಕೆ ನೆಪೋಟಿಸಂ ಅಪವಾದವೂ ಕಾರಣವಂತೆ!