ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆಯುಷ್ ಶರ್ಮಾ ಈ ಕುರಿತು ಮುಕ್ತವಾಗಿ ಮಾತನಾಡಿದ್ದು, ‘‘ಈ ಕುರಿತು ನಾನು ಬಹಳ ಯೋಚಿಸಿದ್ದೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ಸಲ್ಮಾನ್ಗೆ ಎದುರು ನಿಂತು ತೊಡೆ ತಟ್ಟುವುದು ಸುಲಭದ ಮಾತಲ್ಲ. ಆ ಪಾತ್ರದ ಮುಖಾಂತರ ಒಂದೇ ಬಾರಿಗೆ ನಾನು ಬಹಳ ದೂರ ಸಾಗಿ ಬಂದೆ. ಆದರೆ ಚಿತ್ರದ ಪ್ರಾರಂಭದ ಸಮಯದಲ್ಲಿ ನಾನು ಸಲ್ಮಾನ್ ನಟನೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕುರಿತು ಆತಂಕಿತನಾಗಿದ್ದೆ. ಇದಕ್ಕೆ ಮುಖ್ಯ ಕಾರಣ, ಸಲ್ಮಾನ್ ಮತ್ತು ನಾನು ಕುಟುಂಬದವರಾಗಿರುವುದರಿಂದ ನನಗೆ ಸಹಾಯ ಮಾಡುತ್ತಿದ್ದಾರೆ. ನನ್ನ ವೃತ್ತಿ ಜೀವನಕ್ಕೆ ಅವರು ಸಹಾಯ ಮಾಡುತ್ತಿದ್ದಾರೆ ಮೊದಲಾದ ಚರ್ಚೆ ಹುಟ್ಟಿಕೊಳ್ಳಬಹುದು ಎಂಬ ಆತಂಕ ಇತ್ತು. ಇದರೊಂದಿಗೆ ನೆಪೋಟಿಸಂ ಕುರಿತೂ ಕೂಡ ಚರ್ಚೆಯಾಗಬಹುದೆಂದು ಯೋಚಿಸಿದ್ದೆ’’ ಎಂದಿದ್ದಾರೆ.
‘ಅಂತಿಮ್’ ಚಿತ್ರವು ಪಕ್ಕಾ ಆಕ್ಷನ್ ಚಿತ್ರವಾಗಿದ್ದು, ಆಯುಷ್ ಶರ್ಮಾ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು, ತನಗೆ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬಹುದಾ ಎಂಬ ಯೋಚನೆಗಳಿದ್ದವು. ಕಾರಣ, ‘ಲವ್ ಯಾತ್ರಿ ಚಿತ್ರದ ಮೂಲಕ ಬೇರೆಯದೇ ಜಾನರ್ನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಇದು ಸಂಪೂರ್ಣ ಬೇರೆಯದೇ ರೀತಿಯ ಚಿತ್ರವಾಗಿದೆ ಎಂದಿದ್ದರು.
‘ಅಂತಿಮ್’ ಚಿತ್ರದ ಟ್ರೈಲರ್ ಇಲ್ಲಿದೆ:
ಅಂತಿಮ್ ಚಿತ್ರವನ್ನು ಮಹೇಶ್ ಮಾಂಜ್ರೇಕರ್ ನಿರ್ದೇಶಿಸಿದ್ದು, ಈಗಾಗಲೇ ಚಿತ್ರದ ಟ್ರೈಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಸಲ್ಮಾನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ನನ್ನ ಹೆಂಡತಿ ಕಣ್ಣೆದುರು ಬಂದಿದ್ದಳು ಎಂದ ಬಾಲಿವುಡ್ ನಟ