AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amir Khan: ಸೆಟ್ಟೇರಲಿದೆ ವಿಶ್ವನಾಥನ್ ಆನಂದ್ ಬಯೋಪಿಕ್; ನಾಯಕನಾಗಿ ಕಾಣಿಸಿಕೊಳ್ಳಿದ್ದಾರಾ ಅಮೀರ್ ಖಾನ್?

Vishwanathan Anand: ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಬಯೋಪಿಕ್​ಗೆ ತಯಾರಿ ನಡೆದಿದೆ. ಯಾರು ಅವರ ಪಾತ್ರ ನಿರ್ವಹಿಸಬಹುದು ಎಂಬ ಪ್ರಶ್ನೆಗೆ ಆನಂದ್, ಕುತೂಹಲಕರ ಉತ್ತರ ನೀಡಿದ್ದಾರೆ.

Amir Khan: ಸೆಟ್ಟೇರಲಿದೆ ವಿಶ್ವನಾಥನ್ ಆನಂದ್ ಬಯೋಪಿಕ್; ನಾಯಕನಾಗಿ ಕಾಣಿಸಿಕೊಳ್ಳಿದ್ದಾರಾ ಅಮೀರ್ ಖಾನ್?
ಚೆಸ್ ಪಂದ್ಯಾವಳಿಯೊಂದರಲ್ಲಿ ವಿಶ್ವನಾಥನ್ ಆನಂದ್ ಹಾಗೂ ಅಮೀರ್ ಖಾನ್ (ಸಂಗ್ರಹ ಚಿತ್ರ)
TV9 Web
| Updated By: shivaprasad.hs|

Updated on: Nov 17, 2021 | 4:19 PM

Share

ಬಾಲಿವುಡ್​​ನಲ್ಲಿ ಸದ್ಯ ಬಯೋಪಿಕ್ ಚಿತ್ರಗಳು ಟ್ರೆಂಡ್ ಆಗಿದ್ದು, ಹಲವು ಖ್ಯಾತ ಕಲಾವಿದರು ಇದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಕ್ರೀಡಾ ಲೋಕದ ತಾರೆಯರ ಕುರಿತು ಬಯೋಪಿಕ್ ಮಾಡಲು ನಿರ್ದೇಶಕ, ನಿರ್ಮಾಪಕರು ಮುಂದಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಸೌರವ್ ಗಂಗೂಲಿ ಬಯೋಪಿಕ್ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಕೆಲ ಕಾಲದಿಂದ ವಿಶ್ವ ವಿಜೇತ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಬಯೋಪಿಕ್ ಕುರಿತೂ ಸುದ್ದಿಯಾಗಿತ್ತು. ಇದೀಗ ವಿಶ್ವನಾಥನ್ ಆನಂದ್ ಸ್ವತಃ ಇದರ ಕುರಿತು ಮಾತನಾಡಿದ್ದು, ಹಲವು ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಕಿರೀಟ ತೊಟ್ಟಿರುವ ವಿಶ್ವನಾಥನ್ ಆನಂದ್, ಸುಮಾರು ಎರಡು ವರ್ಷಗಳ ನಂತರ ಕೋಲ್ಕತ್ತಾಗೆ ಆಗಮಿಸಿದ್ದು, ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇಂದಿನಿಂದ (ನವೆಂಬರ್ 17) ಅಲ್ಲಿ ವಿಶ್ವ ಮಟ್ಟದ ಚೆಸ್ ಸ್ಪರ್ಧೆ ನಡೆಯುತ್ತಿದ್ದು, ವಿಶ್ವನಾಥನ್ ಆನಂದ್ ಸಲಹೆಗಾರರಾಗಿ ಭಾಗವಹಿಸಿದ್ಧಾರೆ.

ಆನಂದ್ ಚೆಸ್ ಚಾಂಪಿಯನ್ ಆಗಿದ್ದರೂ ಕೂಡ ಅವರ ವೈಯಕ್ತಿಕ ಜೀವನದ ವಿವರಗಳು ಹೆಚ್ಚಿನವರಿಗೆ ತಿಳಿದಿಲ್ಲ. ಒಂದು ವೇಳೆ ಬಯೋಪಿಕ್ ತಯಾರಾದರೆ ಅದರಿಂದಾಗಿ ಅವರ ಪ್ರೇರಣಾದಾಯಿ ಜೀವನ ಎಲ್ಲರಿಗೂ ಪರಿಚಯವಾಗಬಹುದು ಎಂದು ಅಭಿಮಾನಿಗಳ ಅಶಯ. ಇದಕ್ಕೆ ಸಂಬಂಧಪಟ್ಟಂತೆ ಆನಂದ್ ಮಾತನಾಡಿ, ‘‘ಬಯೋಪಿಕ್ ಮಾಡಲು ಅನುಮತಿ ನೀಡಿದ್ದೇನೆ. ಈಗಾಗಲೇ ನಿರ್ಮಾಪಕರೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಸ್ಕ್ರಿಪ್ಟ್ ಕೆಲಸಗಳು ಸದ್ಯದಲ್ಲೇ ಆರಂಭವಾಗಲಿದ್ದು, ಬದುಕಿನ ಕತೆಗಳನ್ನು ಅವರಿಗೆ ಹೇಳುತ್ತಿದ್ದೇನೆ. ಕೊರೊನಾದಿಂದಾಗಿ ಕೆಲಸಗಳು ನಿಧಾನಗೊಂಡಿವೆ’’ ಎಂದು ಹೇಳಿದ್ದಾರೆ. ಇದರೊಂದಿಗೆ ಅವರು ಬಯೋಪಿಕ್ ಕುರಿತು ಹೆಚ್ಚಿನ ವಿಚಾರಗಳನ್ನು ಬಿಟ್ಟುಕೊಡುವ ಹಾಗಿಲ್ಲ. ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂಬುದೂ ಅಂತಿಮವಾಗಿಲ್ಲ. ಕೆಲ ದಿನಗಳಲ್ಲೇ ಹೆಚ್ಚಿನ ಮಾಹಿತಿ ತಿಳಿಸುವುದಾಗಿ ತಿಳಿಸಿದ್ದಾರೆ.

ಚಿತ್ರಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಆನಂದ್ ಜಾಣತನದಿಂದ ಉತ್ತರಿಸಿದ್ದು, ‘ಕೆಲಸಗಳು ನಡೆಯುತ್ತಿದೆ ಎಂದಷ್ಟೇ ಹೇಳಬಲ್ಲೆ. ಅದಕ್ಕಿಂತ ಹೆಚ್ಚೇನೂ ಈಗ ಹೇಳುವುದಿಲ್ಲ’ ಎಂದಿದ್ಧಾರೆ. ಕೆಲ ವರದಿಗಳ ಪ್ರಕಾರ, ‘ತನು ವೆಡ್ಸ್ ಮನು’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಆನಂದ್ ಎಲ್ ರೈ ನಿರ್ದೇಶಿಸಬಹುದು ಎನ್ನಲಾಗಿದೆ.

ಇದೇ ವೇಳೆ ಆನಂದ್ ಕುತೂಹಲಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರಿಗೆ, ‘ನಿಮ್ಮ ಪಾತ್ರವನ್ನು ಯಾರು ನಿರ್ವಹಿಸಬಹುದು?’ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, ‘‘ಇಂಥವರೇ ಪಾತ್ರ ನಿರ್ವಹಿಸಲಿದ್ದಾರೆ ಎಂದು ನಾನು ಹೇಳಲಾಗುವುದಿಲ್ಲ. ಆದರೆ ನನ್ನ ಆಯ್ಕೆಯ ನಟನ ಹೆಸರನ್ನು ನಾನು ಸೂಚಿಸಬಹುದಷ್ಟೇ. ಆ ನಿಟ್ಟಿನಲ್ಲಿ ಹೇಳುವುದಾದರೆ, ಒಂದು ವೇಳೆ ಅಮೀರ್ ಖಾನ್ ನನ್ನ ಪಾತ್ರ ನಿರ್ವಹಿಸಿದರೆ ಚೆನ್ನಾಗಿರುತ್ತದೆ’’ ಎಂದು ನುಡಿದಿದ್ದಾರೆ. ಅಮೀರ್ ಖಾನ್ ಹಾಗೂ ನನಗೆ ಬಹಳ ಸಾಮ್ಯತೆಗಳಿವೆ. ಆದ್ದರಿಂದ ಅವರು ಮಾಡಿದ್ದರೆ ಚೆನ್ನಾಗಿರುತ್ತದೆ ಎಂದು ವಿಶ್ವನಾಥನ್ ಆನಂದ್ ಹೇಳಿದ್ದಾರೆ.

ರಾಜಕೀಯಕ್ಕೆ ಪ್ರವೇಶಿಸುತ್ತೀರಾ ಎಂಬ ಪ್ರಶ್ನೆ ಕೇಳುತ್ತಿರುವಾಗ, ಮಧ್ಯದಲ್ಲೇ ತಡೆದ ಅವರು, ‘ಇಲ್ಲ. ನಾನು ಕೇವಲ ಚೆಸ್ ಆಡುವುದನ್ನಷ್ಟೇ ಮುಂದುವರೆಸುತ್ತೇನೆ’ ಎಂದು ಉತ್ತರಿಸಿದ್ದಾರೆ. ಇದೇ ವೇಳೆ ಅವರು ನಿವೃತ್ತಿಯ ಕುರಿತು ತಾನಿನ್ನೂ ಯೋಚಿಸಿಲ್ಲ ಎಂದಿದ್ಧಾರೆ.

ಇದನ್ನೂ ಓದಿ:

ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?

‘ಮನಿಕೆ ಮಗೆ ಹಿತೆ’ ರೀಲ್ಸ್ ಮಾಡುವಂತೆ ದುಂಬಾಲು ಬಿದ್ದ ಅಭಿಮಾನಿಗಳ ಆಸೆ ನೆರವೇರಿಸಿದ ನಟಿ; ವಿಡಿಯೋ ನೋಡಿ