ಅಪ್ಪು ಸಮಾಧಿ ಬಳಿ ಅಶ್ವಿನಿ ಮತ್ತು ಮಕ್ಕಳ ಕಣ್ಣೀರು; ಪುನೀತ್​ ನಿಧನರಾಗಿ ಇಂದಿಗೆ 2 ತಿಂಗಳು

Ashwini Puneeth Rajkumar: ಪುನೀತ್​ ರಾಜ್​ಕುಮಾರ್​ ವಿಧಿವಶರಾಗಿ 2 ತಿಂಗಳು ಕಳೆದ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲಾಗಿದೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮತ್ತು ಅವರ ಮಕ್ಕಳು ಸಮಾಧಿ ಎದುರು ನಿಂತು ಕಂಬನಿ ಸುರಿಸಿದ್ದಾರೆ.

TV9kannada Web Team

| Edited By: Madan Kumar

Dec 29, 2021 | 12:58 PM

ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಮರೆಯುವುದು ಸಾಧ್ಯವೇ ಇಲ್ಲ. ಇನ್ನು, ಅವರ ಕುಟುಂಬದವರಂತೂ ಅಪ್ಪು ಇಲ್ಲ ಎಂಬ ನೋವಿನಿಂದ ಹೊರಬರುವುದು ಅಸಾಧ್ಯ. ಅಪ್ಪು ನಿಧನರಾಗಿ ಇಂದಿಗೆ (ಡಿ.29) ಎರಡು ತಿಂಗಳು ಪೂರೈಸಿದೆ. ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ ಅವರ ನೆನಪುಗಳೇ ಕಾಡುತ್ತಿವೆ. ಡಾ. ರಾಜ್​ಕುಮಾರ್​ ಕುಟುಂಬದವರು ಅಪ್ಪು ಸಮಾಧಿ (Puneeth Rajkumar Samadhi) ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪುನೀತ್​ಗೆ ಇಷ್ಟವಾದ ತಿನಿಸುಗಳ ಎಡೆ ಇಡಲಾಗಿದೆ. ಅನೇಕ ಅಭಿಮಾನಿಗಳು ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಮತ್ತು ಅವರ ಮಕ್ಕಳು ಸಮಾಧಿ ಎದುರು ನಿಂತು ಕಂಬನಿ ಸುರಿಸಿದ್ದಾರೆ. ಪುನೀತ್​ ಅವರು ಅರ್ಧಕ್ಕೆ ಬಿಟ್ಟುಹೋದ ಎಲ್ಲ ಕೆಲಸಗಳ ಹೊಣೆಯನ್ನು ಅಶ್ವಿನಿ ಅವರು ಹೊತ್ತುಕೊಂಡಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್ಸ್​, ಪಿಆರ್​ಕೆ ಆಡಿಯೋ, ಶಕ್ತಿಧಾಮ ಮುಂತಾದ ಸಂಸ್ಥೆಗಳ ಜವಾಬ್ದಾರಿ ಈಗ ಅಶ್ವಿನಿಯವರ ಹೆಗಲ ಮೇಲಿದೆ. ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಇನ್ನುಳಿದ ಕೆಲಸಗಳನ್ನು ಅವರು ಪೂರ್ಣಗೊಳಿಸಲಿದ್ದಾರೆ.

ಇದನ್ನೂ ಓದಿ:

‘ಶಿವಣ್ಣ, ನಾನು ದೇಹದಾನ ಮಾಡಿದ್ದೇವೆ’: ಅಪ್ಪು ನೆನಪಲ್ಲಿ ರಾಘಣ್ಣ ಹೇಳಿದ ಮಹತ್ವದ ವಿಚಾರಗಳು ಇಲ್ಲಿವೆ

Year Ender 2021: ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆಯಾದ 2021; ಮರೆಯೋಕೆ ಆಗಲ್ಲ ಪುನೀತ್​ ನಿಧನದ ನೋವು

Follow us on

Click on your DTH Provider to Add TV9 Kannada