ಅಪ್ಪು ಇಲ್ಲದೇ ಕಳೆಯಿತು 2 ತಿಂಗಳು; ನೇತ್ರದಾನದ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ರಾಘಣ್ಣ

8884018800 ಫೋನ್​ ನಂಬರ್​ಗೆ ಮಿಸ್​ ಕಾಲ್​ ಕೊಟ್ಟರೆ ಸಾಕು, ನೇತ್ರದಾನಕ್ಕೆ ಬೇಕಾದ ಫಾರ್ಮ್​ ಲಿಂಕ್​ ಸಿಗುತ್ತದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ರಾಜ್​ಕುಮಾರ್​ ಮಾಹಿತಿ ನೀಡಿದ್ದಾರೆ.

TV9kannada Web Team

| Edited By: Madan Kumar

Dec 29, 2021 | 10:04 AM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು 2 ತಿಂಗಳು ಆಗಿದೆ. ಈ ಸಂದರ್ಭದಲ್ಲಿ ಡಾ. ರಾಜ್​ಕುಮಾರ್​ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಅವರು ಒಂದು ವಿಶೇಷ ಮಾಹಿತಿ ಹಂಚಿಕೊಂಡರು. ಪುನೀತ್​ ನಿಧನದ ಬಳಿಕ ನೇತ್ರದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಹೆಚ್ಚಿದೆ. ನೇತ್ರದಾನಕ್ಕೆ (Eye Donation) ನೋಂದಣಿ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಈಗ ನೇತ್ರದಾನ ನೋಂದಣಿ ಮಾಡುವುದು ಇನ್ನಷ್ಟು ಸುಲಭ ಆಗಿದೆ. 8884018800 ಫೋನ್​ ನಂಬರ್​ಗೆ ಮಿಸ್​ ಕಾಲ್​ ಕೊಟ್ಟರೆ ಸಾಕು, ನೇತ್ರದಾನಕ್ಕೆ ಬೇಕಾದ ಫಾರ್ಮ್​ ಲಿಂಕ್​ ಸಿಗುತ್ತದೆ ಎಂದು ರಾಘಣ್ಣ ಹೇಳಿದ್ದಾರೆ. ಈ ಬಗ್ಗೆ ಡಾಕ್ಟರ್​ ಭುಜಂಗ ಶೆಟ್ಟಿ (Dr Bhujang Shetty) ಕೂಡ ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ:

‘ಚಿತ್ರರಂಗಕ್ಕೆ ಪುನೀತ್​ ರೀತಿಯ ನಟ ಬೇಕು; ನಿಖಿಲ್​ ಹೆಚ್ಚು ಸಿನಿಮಾ ಮಾಡಲಿ’: ಎಚ್​​.ಡಿ. ಕುಮಾರಸ್ವಾಮಿ

Year Ender 2021: ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆಯಾದ 2021; ಮರೆಯೋಕೆ ಆಗಲ್ಲ ಪುನೀತ್​ ನಿಧನದ ನೋವು

Follow us on

Click on your DTH Provider to Add TV9 Kannada