ಬಚ್​ಪನ್​ಕಾ ಪ್ಯಾರ್​ ಖ್ಯಾತಿಯ ಸಹದೇವ್ ದಿರ್ಡೋಗೆ ಅಪಘಾತ: ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡ ಬಾದ್​ ಶಾ

ಬಚ್​ಪನ್​ಕಾ ಪ್ಯಾರ್​ ಹಾಡಿನ ಮೂಲಕ ದೇಶದಲ್ಲಿ ಹೊಸ ಸಂಚಲನ ಮೂಡಿಸಿದ್ದ ಸಹದೇವ್​ ದಿರ್ಡೋಗೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಾಲಿವುಡ್​ ರಾಪ್​ ಸಿಂಗರ್​ ಬಾದ್​ ಶಾ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಬಚ್​ಪನ್​ಕಾ ಪ್ಯಾರ್​ ಖ್ಯಾತಿಯ ಸಹದೇವ್ ದಿರ್ಡೋಗೆ ಅಪಘಾತ: ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡ ಬಾದ್​ ಶಾ
ಸಹದೇವ್​, ಬಾದ್​ ಶಾ
Follow us
TV9 Web
| Updated By: Digi Tech Desk

Updated on:Dec 29, 2021 | 9:50 AM

ಬಚ್​ಪನ್​ಕಾ ಪ್ಯಾರ್​ ಹಾಡಿನ ಮೂಲಕ ದೇಶದಲ್ಲಿ ಹೊಸ ಸಂಚಲನ ಮೂಡಿಸಿದ್ದ ಸಹದೇವ್​ ದಿರ್ಡೋಗೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಾಲಿವುಡ್​ ರಾಪ್​ ಸಿಂಗರ್​ ಬಾದ್​ ಶಾ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಛತ್ತೀಸ್​ಘಡದ 10 ವರ್ಷದ ಬಾಲಕ ಸಹದೇವ್​ ತಂದೆಯೊಂದಿಗೆ  ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದ್ದು ಸಹದೇವ್​ ಬೈಕ್​ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೈಕ್​ನಿಂದ ಬಿದ್ದ ಸಹದೇವ್​ ಅವರ  ತಲೆಗೆ ಬಲವಾಗಿ ಏಟು ಬಿದ್ದಿದೆ ಎನ್ನಲಾಗಿದ್ದು, ಸಹದೇವ್​ ಅವರನ್ನು ಜಗದಲ್ಪುರ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾದ್​ ಶಾ, ಸಹದೇವ್​ ಕುಟುಂಬದೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಅವರಿಗೆ ಎಲ್ಲಾ ರೀತಿಯ ನೆರವನ್ನು ನೀಡುತ್ತೇನೆ ಎಂದಿದ್ದಾರೆ. ಈ ಬಗ್ಗೆ ನಿನ್ನೆ ರಾತ್ರಿ ಟ್ವೀಟ್​ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.  ತೀವ್ರವಾಗಿ ಗಾಯಗೊಂಡಿರುವ ಸಹದೇವ್​ ಅವರ ಮೇಲೆ ವೈದ್ಯರು ನಿಗಾ ವಹಿಸಿದ್ದು, ಸ್ಥಳೀಯ ಜಿಲ್ಲಾಧಿಕಾರಿ ಕೂಡ ಆಸ್ಪತ್ರೆಗೆ ತೆರಳಿ ಸಹದೇವ್​ ಆರೋಗ್ಯ ವಿಚಾರಿಸಿದ್ದಾರೆ.

2021ರಲ್ಲಿ ಬಚ್​ಪನ್​ಕಾ ಪ್ಯಾರ್​ ಹಾಡಿನ ಮೂಲಕ ಸಹದೇವ್ ಇಡೀ ದೇಶದಲ್ಲಿ ಹೊಸ ಟ್ರೆಂಡ್​ ಕ್ರಿಯೇಟ್ ಮಾಡಿದ್ದರು. ಛತ್ತೀಸ್​​ಘಡ ಮುಖ್ಯಮಂತ್ರಿಗಳು ಕೂಡ ಸಹದೇವ್​ ಅವರನ್ನು ಸನ್ಮಾನಿಸಿದ್ದರು. ಅಲ್ಲದೆ ಅಗಸ್ಟ್​ನಲ್ಲಿ ಬಾಲಿವುಡ್​ನ ರಾಪ್ ಸಿಂಗರ್​ ಬಾದ್​ ಶಾ ಸಹದೇವ್​ ಅವರನ್ನು ಭೇಟಿಯಾಗಿ ಅವರೊಂದಿಗೆ ಹಾಡನ್ನೂ ಹಾಡಿದ್ದರು. ಅವರಿಬ್ಬರ ರಿಮಿಕ್ಸ್​ ಎಲ್ಲೆಡೆ ವೈರಲ್​ ಆಗಿತ್ತು.

Published On - 9:35 am, Wed, 29 December 21

ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ