AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ಪುರ ರೇಡ್​ ಮೇಲೆ ಸಿದ್ಧವಾಗುತ್ತಿದೆ ಸಿನಿಮಾ; 250 ಕೋಟಿ ರೂಪಾಯಿ ಕಥೆ ಹೇಳಲಿದ್ದಾರೆ ಅಜಯ್​ ದೇವಗನ್​

ಸುಗಂಧ ದ್ರವ್ಯ​ ಉದ್ಯಮಿ ಪೀಯುಷ್​ ಜೈನ್​ ಎಂಬುವರ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿ ಬಂದಿತ್ತು. ಈ ಉದ್ಯಮಿಯ ಮನೆ ಮೇಲೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಸುಮಾರು 40 ಗಂಟೆಗಳ ಕಾಲ ಶೋಧ ನಡೆಸಿದ್ದರು.

ಕಾನ್ಪುರ ರೇಡ್​ ಮೇಲೆ ಸಿದ್ಧವಾಗುತ್ತಿದೆ ಸಿನಿಮಾ; 250 ಕೋಟಿ ರೂಪಾಯಿ ಕಥೆ ಹೇಳಲಿದ್ದಾರೆ ಅಜಯ್​ ದೇವಗನ್​
ಅಜಯ್​ ದೇವಗನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 29, 2021 | 2:35 PM

Share

ನಟ ಅಜಯ್​ ದೇವಗನ್​ ಅಭಿನಯದ ‘ರೇಡ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಅಕ್ರಮ ಹಣ ಸಂಪಾದನೆ ಮಾಡಿದವರ ಮನೆ ಮೇಲೆ ರೇಡ್​ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿತ್ತು. ಈ ಚಿತ್ರದ ಸೀಕ್ವೆಲ್​ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಇದಕ್ಕೆ ಈಗ ಕಥೆ ಸಿಕ್ಕಿದೆ. ಇತ್ತೀಚೆಗೆ ಕಾನ್ಪುರದಲ್ಲಿ ನಡೆದ ರೇಡ್​ ಕಥೆಯನ್ನು ಆಧರಿಸಿ ‘ರೇಡ್​ 2’ ತೆರೆಗೆ ಬರುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

ಸುಗಂಧ ದ್ರವ್ಯ​ ಉದ್ಯಮಿ ಪೀಯುಷ್​ ಜೈನ್​ ಎಂಬುವರ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿ ಬಂದಿತ್ತು. ಈ ಉದ್ಯಮಿಯ ಮನೆ ಮೇಲೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಸುಮಾರು 40 ಗಂಟೆಗಳ ಕಾಲ ಶೋಧ ನಡೆಸಿದ್ದರು. ಈ ವೇಳೆ 250 ಕೋಟಿ ರೂಪಾಯಿಗೂ ಅಧಿಕ ನಗದು, 250 ಕೆಜಿ ಬೆಳ್ಳಿ, 25 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಪೀಯುಷ್​ ಬರೋಬ್ಬರಿ 40 ಕಂಪನಿಗಳಿಗೆ ಮಾಲೀಕರಾಗಿದ್ದಾರೆ. ಇದರಲ್ಲಿ ಹಲವು ಕಂಪನಿಗಳು ಬೇನಾಮಿ ಕಂಪನಿಗಳಾಗಿವೆ. ಈ ಉದ್ಯಮಿಯ ಬಳಿ ಡ್ರಮ್​ಗಟ್ಟಲೆ ಶ್ರೀಗಂಧದ ಎಣ್ಣೆಯೂ ಸಿಕ್ಕಿದೆ. ರಟ್ಟಿನ ಬಾಕ್ಸ್​ಗಳಲ್ಲೂ 2000 ರೂಪಾಯಿ ನೋಟಿನ ಬಂಡಲ್​​ಗಳು ಪತ್ತೆಯಾಗಿವೆ.

ಈ ಘಟನೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಲ್ಲದೆ, ಸಾಕಷ್ಟು ಕುತೂಹಲ ಮೂಡಿಸಿದೆ. 250 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಪೀಯುಷ್​ ಕೂಡಿಟ್ಟಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದವು. ಈ ಕಾರಣಕ್ಕೆ ‘ರೇಡ್​ 2’ ಸಿನಿಮಾದಲ್ಲಿ ಉತ್ತರ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಚಾರದ ಬಗ್ಗೆ  ‘ರೇಡ್’ ಚಿತ್ರದ​ ನಿರ್ಮಾಪಕ ಕುಮಾರ್​ ಪಾಠಕ್​ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ವಾರಾಣಸಿಯಲ್ಲಿ ನಡೆದ ‘ಕಾಶಿ ಫಿಲ್ಮ್ ಫೆಸ್ಟಿವಲ್’ನಲ್ಲಿ ಮಾತನಾಡಿದ ಕುಮಾರ್​ ಪಾಠಕ್, ‘ರೈಡ್ 2’ ನಿರ್ಮಿಸುವುದಾಗಿ ಹೇಳಿದರು. ಈ ಚಿತ್ರವು ಪೀಯುಷ್​ ಜೈನ್ ಅವರ ಮನೆ ಮತ್ತು ಕಾರ್ಖಾನೆಯ ಮೇಲಿನ ದಾಳಿಯನ್ನು ಆಧರಿಸಿ ಸಿದ್ಧಗೊಳ್ಳಲಿದೆ. ಈ ಸಿನಿಮಾದಲ್ಲಿ ಇನ್ನೂ ಯಾವೆಲ್ಲ ವಿಚಾರ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ಕಾನ್ಪುರದ ಉದ್ಯಮಿ ಮನೆ ಮೇಲೆ ಜಿಎಸ್​ಟಿ ಅಧಿಕಾರಿಗಳಿಂದ ದಾಳಿ; ನಗದು ಎಣಿಕೆಯೇ ಮುಗಿಯುತ್ತಿಲ್ಲ, ಬೀಗ ತೆಗೆಯಲೂ ಸಾಧ್ಯವಾಗುತ್ತಿಲ್ಲ !

ಹಿಂದಿಯಲ್ಲಿ ‘ಕೆಜಿಎಫ್​’ ವರ್ಸಸ್​ ‘ಪುಷ್ಪ’; ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಗೆದ್ದಿದ್ದು ಯಾರು?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ