‘83’ ಚಿತ್ರದ ಆಡಿಷನ್​ನಲ್ಲಿ ಆಯ್ಕೆ ಆಗಿದ್ದ ವಿಕ್ಕಿ ಕೌಶಲ್​; ನಂತರ ಚಿತ್ರತಂಡದಿಂದ ಹೊರಹೋಗಿದ್ದು ಯಾಕೆ?

Vicky Kaushal: ‘83’ ಚಿತ್ರಕ್ಕೆ ವಿಕ್ಕಿ ಕೌಶಲ್​ ಆಡಿಷನ್​ ನೀಡಿದ್ದು ಬಹಳ ಹಿಂದೆ. ಆಗ ಅವರು ನಟಿಸಿದ ‘ರಾಜಿ’ ಸಿನಿಮಾ ಇನ್ನೂ ತೆರೆಕಂಡಿರಲಿಲ್ಲ.

‘83’ ಚಿತ್ರದ ಆಡಿಷನ್​ನಲ್ಲಿ ಆಯ್ಕೆ ಆಗಿದ್ದ ವಿಕ್ಕಿ ಕೌಶಲ್​; ನಂತರ ಚಿತ್ರತಂಡದಿಂದ ಹೊರಹೋಗಿದ್ದು ಯಾಕೆ?
ವಿಕ್ಕಿ ಕೌಶಲ್​, ರಣವೀರ್​ ಸಿಂಗ್​
Follow us
| Updated By: ಮದನ್​ ಕುಮಾರ್​

Updated on: Dec 29, 2021 | 4:15 PM

ಭಾರತ ಕ್ರಿಕೆಟ್​ ತಂಡ 1983ರಲ್ಲಿ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ (83 Movie) ಮೂಡಿಬಂದಿದೆ. ಡಿ.24ರಂದು ಈ ಸಿನಿಮಾ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ರಣವೀರ್ ಸಿಂಗ್​ (Ranveer Singh) ಅವರು ಈ ಸಿನಿಮಾದಲ್ಲಿ ಕಪಿಲ್​ ದೇವ್​ (Kapil Dev) ಪಾತ್ರವನ್ನು ನಿಭಾಯಿಸಿದ್ದಾರೆ. ಅದೇ ರೀತಿ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್​ (Vicky Kaushal) ಅವರು ಕಾಣಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಅವರು ಆಡಿಷನ್​ ಕೂಡ ನೀಡಿದ್ದರು. ಆದರೆ ಆಡಿಷನ್​ನಲ್ಲಿ ಆಯ್ಕೆಯಾದ ನಂತರ ಅವರು ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದರು ಎಂಬ ಮಾಹಿತಿ ಈಗ ಹೊರಬಿದ್ದಿದೆ. ನಿರ್ದೇಶಕ ಕಬೀರ್​ ಖಾನ್​ (Kabir Khan) ಅವರು ಆ್ಯಕ್ಷನ್​-ಕಟ್​ ಹೇಳಿರುವ ಈ ಚಿತ್ರದಲ್ಲಿ ವಿಕ್ಕಿ ಕೌಶಲ್​ ನಟಿಸದೇ ಇರಲು ಕಾರಣ ಏನು ಎಂಬುದು ಕೂಡ ತಿಳಿದುಬಂದಿದೆ.

‘83’ ಚಿತ್ರಕ್ಕೆ ವಿಕ್ಕಿ ಕೌಶಲ್​ ಆಡಿಷನ್​ ನೀಡಿದ್ದು ಬಹಳ ಹಿಂದೆ. ಆಗ ಅವರು ನಟಿಸಿದ ‘ರಾಜಿ’ ಸಿನಿಮಾ ಇನ್ನೂ ತೆರೆಕಂಡಿರಲಿಲ್ಲ. ‘ರಾಜಿ’ ಬಿಡುಗಡೆಯಾದ ಬಳಿಕ ದೊಡ್ಡಮಟ್ಟದಲ್ಲಿ ಪ್ರಶಂಸೆ ಪಡೆದುಕೊಂಡಿತು. ಆ ನಂತರ ‘83’ ಸಿನಿಮಾದಲ್ಲಿ ಎರಡನೇ ಹೀರೋ ಆಗಿ ನಟಿಸಲು ವಿಕ್ಕಿ ಕೌಶಲ್​ ಮನಸ್ಸು ಒಪ್ಪಲಿಲ್ಲ. ಹಾಗಾಗಿ ಅವರು ಆ ಚಿತ್ರತಂಡದಿಂದ ಹೊರನಡೆದರು. ಇಲ್ಲದಿದ್ದರೆ ಅವರು ಕ್ರಿಕೆಟರ್​ ಮೊಹಿಂದರ್​ ಅಮರನಾಥ್​​ ಪಾತ್ರಕ್ಕೆ ಬಣ್ಣ ಹಚ್ಚಬೇಕಿತ್ತು.

ಸುನಿಲ್​ ಗವಾಸ್ಕರ್​ ಪಾತ್ರದಲ್ಲಿ ತಾಹಿರ್​ ರಾಜ್​ ಭಸಿನ್​, ಕೃಷ್ಣಮಚಾರಿ ಶ್ರೀಕಾಂತ್​ ಪಾತ್ರದಲ್ಲಿ ಜೀವ, ಮೊಹಿಂದರ್​ ಅಮರ್​ನಾಥ್​ ಪಾತ್ರದಲ್ಲಿ ಸಾಖಿಬ್​ ಸಲೀಮ್​, ಯಶ್​ಪಾಲ್​ ಶರ್ಮಾ ಪಾತ್ರದಲ್ಲಿ ಜತಿನ್​ ಸರ್ನಾ, ಸಂದೀಪ್​ ಪಾಟಿಲ್​ ಪಾತ್ರದಲ್ಲಿ ಚಿರಾಗ್​ ಪಾಟಿಲ್​, ಕೀರ್ತಿ ಆಜಾದ್​ ಪಾತ್ರದಲ್ಲಿ ದಿನಕರ್​ ಶರ್ಮಾ, ರೋಜರ್​ ಬಿನ್ನಿ ಪಾತ್ರದಲ್ಲಿ ನಿಶಾಂತ್​ ದಹಿಯಾ, ಮದನ್​ ಲಾಲ್​ ಪಾತ್ರದಲ್ಲಿ ಹಾರ್ಡಿ ಸಂಧು, ಸೈಯದ್​ ಕಿರ್ಮಾನಿ ಪಾತ್ರದಲ್ಲಿ ಸಾಹಿಲ್​ ಕಟ್ಟರ್​, ಬಲ್ವಿಂದರ್​ ಸಂಧು ಪಾತ್ರದಲ್ಲಿ ಎಮಿ ವಿರ್ಕ್​, ರವಿ ಶಾಸ್ತ್ರಿ ಪಾತ್ರದಲ್ಲಿ ಧೈರ್ಯ ಕರ್ವ ನಟಿಸಿದ್ದಾರೆ. 1983ರ ಭಾರತ ವಿಶ್ವಕಪ್​ ತಂಡದ ಮ್ಯಾನೇಜರ್​ ಆಗಿದ್ದ ಪಿಆರ್ ಮಾನ್​ ಸಿಂಗ್​ ಪಾತ್ರದಲ್ಲಿ ಪಂಕಜ್​ ತ್ರಿಪಾಠಿ ಅಭಿನಯಿಸಿದ್ದಾರೆ. ಕಪಿಲ್​ ದೇವ್​ ಅವರ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ನಟಿ ದೀಪಿಕಾ ಪಡುಕೋಣೆ ನಿಭಾಯಿಸಿದ್ದಾರೆ.

ಉತ್ತಮ ವಿಮರ್ಶೆ ಸಿಕ್ಕರೂ ಸಹ, ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡುವಲ್ಲಿ ‘83’ ಸಿನಿಮಾಗೆ ಸಾಧ್ಯವಾಗಿಲ್ಲ. ಬೇರೆ ಸಿನಿಮಾಗಳ ಪೈಪೋಟಿಯೇ ಈ ಹಿನ್ನಡೆಗೆ ಕಾರಣ ಆಗಿದೆ.

ಇದನ್ನೂ ಓದಿ:

ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ವಾಪಸ್​ ಬಂದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​; ಕಾರಣ ಏನು?

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ