Year Ender 2021: ಈ ವರ್ಷ ಭಾರೀ ಸುದ್ದಿ ಮಾಡಿದ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ
Year Ender 2021: ಈ ಜೋಡಿ ಮದುವೆ ಆಗುತ್ತಿರುವ ಸುದ್ದಿಯ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಆದರೆ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು.
ಸೆಲೆಬ್ರಿಟಿಗಳ ಮದುವೆ ಎಂದರೆ ಅದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಈ ವರ್ಷ ಹಲವು ಸೆಲೆಬ್ರಿಟಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಆ ಪೈಕಿ ಹೆಚ್ಚು ಸುದ್ದಿ ಆಗಿದ್ದು ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಮದುವೆ ಸಮಾರಂಭ. ಬಾಲಿವುಡ್ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಕೇವಲ, ಕುಟುಂಬದವರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು. ಇವರ ಮದುವೆ ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ಕೋಟ್ಯಂತರ ಲೈಕ್ಸ್ ಪಡೆದುಕೊಂಡಿದೆ. ಹೇಗಿತ್ತು ಈ ಮದುವೆ ಎನ್ನುವ ಸಣ್ಣ ರೀ ಕ್ಯಾಪ್ ಇಲ್ಲಿದೆ.
ಗುಟ್ಟು ಬಿಟ್ಟುಕೊಡದ ಜೋಡಿ
ದೊಡ್ಡ ಸೆಲೆಬ್ರಿಟಿಗಳು ತಮ್ಮ ಮದುವೆ ವಿಚಾರವನ್ನು ಸಾಮಾನ್ಯವಾಗಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಮಾಧ್ಯಮಗಳಲ್ಲಿ ಸುಖಾಸುಮ್ಮನೆ ವಿವಾಹ ವಿಚಾರ ಹೈಪ್ ಪಡೆದುಕೊಳ್ಳುತ್ತದೆ ಎನ್ನುವ ಕಾರಣಕ್ಕೆ ಅವರು ರಹಸ್ಯ ಕಾಪಾಡಿಕೊಳ್ಳುತ್ತಾರೆ. ಈ ಬಾರಿ ಕತ್ರಿನಾ ಮದುವೆ ವಿಚಾರ ಕೂಡ ಇದೇ ರೀತಿ ಆಗಿದೆ. ಈ ಜೋಡಿ ಎಲ್ಲಿಯೂ ತಾವು ಮದುವೆ ಆಗುತ್ತಿರುವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಈ ಜೋಡಿ ಮದುವೆ ಆಗುತ್ತಿರುವ ಸುದ್ದಿಯ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಆದರೆ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಈ ಜೋಡಿ ಮದುವೆ ಆಗುತ್ತಿರುವ ಸ್ಥಳದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿ ಆಗಿತ್ತು.
ಐಷಾರಾಮಿ ಹೋಟೆಲ್ನಲ್ಲಿ ಮದುವೆ
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಕತ್ರಿನಾ ಕೈಫ್ ಮದುವೆ ನೆರವೇರಿತ್ತು. ಡಿಸೆಂಬರ್ 7-10ರವರೆಗೆ ಮದುವೆ ಕಾರ್ಯಕ್ರಮಗಳು ಜರುಗಿದವು. ಈ ಜೋಡಿ ಡಿಸೆಂಬರ್ 9ರಂದು ಹಸೆಮಣೆ ಏರಿತ್ತು. ಸಂಜೆ ವೇಳೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಮದುವೆ ವಿಚಾರವನ್ನು ಇಬ್ಬರೂ ಅಧಿಕೃತ ಮಾಡಿದ್ದರು. ಡಿಸೆಂಬರ್ 10ರಂದು ಹೆಲಿಕ್ಯಾಪ್ಟರ್ ಮೂಲಕ ಈ ಜೋಡಿ ಜೈಪುರಕ್ಕೆ ಬಂದು, ಆ ಬಳಿಕ ಅಲ್ಲಿಂದ ಮುಂಬೈಗೆ ತೆರಳಿತ್ತು.
ಮಾಲ್ಡೀವ್ಸ್ಗೆ ತೆರಳಿದ್ದ ಜೋಡಿ
ಮದುವೆ ಆಗಿ ಕೆಲವೇ ದಿನಕ್ಕೆ ಈ ಜೋಡಿ ಹನಿಮೂನ್ಗೆ ತೆರಳಿತ್ತು. ಇಬ್ಬರೂ ಮಾಲ್ಡೀವ್ಸ್ನಲ್ಲಿ ಹನಿಮೂನ್ ಮುಗಿಸಿ ಬಂದಿದ್ದರು. ಈ ವಿಚಾರದ ಬಗ್ಗೆಯೂ ಚರ್ಚೆ ಆಗಿತ್ತು. ಖಾಸಗಿ ಜೆಟ್ನಲ್ಲಿ ಇಬ್ಬರೂ ಮಾಲ್ಡೀವ್ಸ್ಗೆ ತೆರಳಿದ್ದರು ಎನ್ನಲಾಗಿತ್ತು.
ಒಟ್ಟಾಗಿ ನಟಿಸಲಿರುವ ಜೋಡಿ
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರನ್ನು ತೆರೆಮೇಲೆ ಜೊತೆಯಾಗಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಅದನ್ನೇ ಎನ್ಕ್ಯಾಶ್ ಮಾಡಿಕೊಳ್ಳಲು ಕೆಲವು ಪ್ರತಿಷ್ಠಿತ ಬ್ರ್ಯಾಂಡ್ಗಳು ಮುಂದೆ ಬಂದಿವೆ. ಜಾಹೀರಾತೊಂದರಲ್ಲಿ ಈ ಜೋಡಿಯನ್ನು ಒಂದಾಗಿಸಲು ಪ್ಲ್ಯಾನ್ ನಡೆದಿದೆ. ಆ ಮೂಲಕ ಅವರಿಬ್ಬರು ಮೊದಲ ಬಾರಿಗೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿದೆ.
ಇದನ್ನೂ ಓದಿ: ವಿಶೇಷ ಫೋಟೊ ಹಂಚಿಕೊಂಡ ಕತ್ರಿನಾ ಕೈಫ್; ಅಭಿಮಾನಿಗಳು ಪತ್ತೆ ಹಚ್ಚಲು ಹೋಗಿದ್ದು ಏನು?