ವರ್ಷಾಂತ್ಯಕ್ಕೆ ಹಾಸಿಗೆ ಹಿಡಿದ ಖ್ಯಾತ ನಟಿ ನೋರಾ ಫತೇಹಿ; ಅಭಿಮಾನಿಗಳಲ್ಲಿ ಆತಂಕ

ಡಿಸೆಂಬರ್​ 28ರಂದು ನೋರಾ ಅವರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್​ ಪಾಸಿಟಿವ್​ ಬಂದಿದ್ದು, ಹಾಸಿಗೆ ಹಿಡಿದಿದ್ದಾರೆ.

ವರ್ಷಾಂತ್ಯಕ್ಕೆ ಹಾಸಿಗೆ ಹಿಡಿದ ಖ್ಯಾತ ನಟಿ ನೋರಾ ಫತೇಹಿ; ಅಭಿಮಾನಿಗಳಲ್ಲಿ ಆತಂಕ
ನೋರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 30, 2021 | 5:13 PM

ಬಾಲಿವುಡ್​ನಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಕೊವಿಡ್ ಕಾಣಿಸಿಕೊಳ್ಳುತ್ತಿದೆ. ಹಿಂದಿಯ ಖ್ಯಾತ ನಟಿ ನೋರಾ ಫತೇಹಿ ಅವರಿಗೂ ಈಗ ಕೊವಿಡ್​ ಅಂಟಿದೆ. ಇತ್ತೀಚೆಗೆ ಅವರು ಸಾಂಗ್​ ಪ್ರಚಾರಕ್ಕಾಗಿ ಸುತ್ತಾಟ ನಡೆಸಿದ್ದರು. ಈ ಬೆನ್ನಲ್ಲೇ ಅವರಿಗೆ ಕೊವಿಡ್​ ಅಂಟಿದೆ. ಉದ್ಯಮಿಗಳಿಗೆ 200 ಕೋಟಿ ವಂಚನೆ ಮಾಡಿದ ಪ್ರಕರಣದ ಕಿಂಗ್​ ಪಿನ್​ ಸುಕೇಶ್​ ಚಂದ್ರಶೇಖರ್​ ಜತೆ ನೋರಾ ಫತೇಹಿಗೆ ಲಿಂಕ್​ ಇದೆ ಎನ್ನಲಾಗಿದೆ. ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಈ ತಲೆನೋವಿನ ಜತೆ ಕೊವಿಡ್ ಪಾಸಿಟಿವ್​ ಬಂದಿದ್ದು, ನಟಿಯ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಡಿಸೆಂಬರ್​ 28ರಂದು ನೋರಾ ಅವರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್​ ಪಾಸಿಟಿವ್​ ಬಂದಿದ್ದು, ಹಾಸಿಗೆ ಹಿಡಿದಿದ್ದಾರೆ. ಸದ್ಯ, ವಿಶೇಷ ವೈದ್ಯರ ನಿಗಾದಲ್ಲಿ ನೋರಾ ಇದ್ದಾರೆ.

ನೋರಾ ಅವರು ಗುರು ರಾಂಧವ ಅವರ ‘ಡ್ಯಾನ್ಸ್ ಮೇರಿ ರಾಣಿ..’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದರ ಪ್ರಮೋಷನ್​ಗೆ ನೋರಾ, ‘ಕಪಿಲ್​ ಶರ್ಮಾ ಶೋ’ ಹಾಗೂ ‘ಬಿಗ್​ ಬಾಸ್​ 15’ ವೇದಿಕೆ ಏರಿದ್ದರು. ಈ ಮಧ್ಯೆ ಅವರಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ನೋರಾ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ನೋರಾ ಅವರು ಸುತ್ತಾಟ ನಡೆಸುತ್ತಿರುವ ಫೋಟೋಗಳು ವೈರಲ್​ ಆಗಿವೆ. ಈ ಫೋಟೋಗಳು ಇತ್ತೀಚೆಗೆ ತೆಗೆದಿದ್ದಾಗಿದ್ದು, ನೋರಾ ಕೊವಿಡ್​ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಇದಕ್ಕೆ ನೋರಾ ವಕ್ತಾರರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ಇದು ಹಳೆಯ ವಿಡಿಯೋ. ನೋರಾ ಕೊವಿಡ್​ ಕಾಣಿಸಿಕೊಂಡಾಗಿನಿಂದಲೂ ಮನೆಯಲ್ಲೇ ಇದ್ದಾರೆ’ ಎಂದಿದ್ದಾರೆ ನೋರಾ ವಕ್ತಾರರು. ಅವರು ಹಾಸಿಗೆ ಹಿಡಿದಿರುವ ವಿಚಾರ ಅವರ ಅಭಿಮಾನಿಗಳ ವಲಯದಲ್ಲಿ ಆತಂಕ ಮೂಡಿಸಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ.

ಡಿಸೆಂಬರ್ 21ರಂದು ‘ಡ್ಯಾನ್ಸ್ ಮೇರಿ ರಾಣಿ..’ ಸಾಂಗ್​ ರಿಲೀಸ್​ ಆಗಿದೆ. ಇಲ್ಲಿವರೆಗೆ ಈ ಹಾಡು 5 ಕೋಟಿ ಗೂ ಅಧಿಕ ವೀಕ್ಷಣೆ ಕಂಡಿದೆ. ನೋರಾ ಡ್ಯಾನ್ಸ್​ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈ ವಿಡಿಯೋ ಸಾಂಗ್ ಸದ್ಯ ಸಾಕಷ್ಟು ವೈರಲ್​ ಆಗಿದೆ. ಮ್ಯೂಸಿಕ್​ ವಿಭಾಗದ ಟ್ರೆಂಡಿಂಗ್​ನಲ್ಲಿ ಈ ಹಾಡು ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Nora Fatehi: ಹೊಸ ಫೋಟೋಶೂಟ್​ನಲ್ಲಿ ನೋರಾ ಮಿಂಚು; ಚಿತ್ರಗಳು ಇಲ್ಲಿವೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ