ರಿಲೀಸ್​ ಡೇಟ್​ ಮುಂದೂಡಿಕೊಂಡ ‘ಗಜಾನನ ಆ್ಯಂಡ್​ ಗ್ಯಾಂಗ್​’; ಚಿತ್ರತಂಡ ನೀಡಿದ ಕಾರಣ ಏನು?

ರಿಲೀಸ್​ ಡೇಟ್​ ಮುಂದೂಡಿಕೊಂಡ ‘ಗಜಾನನ ಆ್ಯಂಡ್​ ಗ್ಯಾಂಗ್​’; ಚಿತ್ರತಂಡ ನೀಡಿದ ಕಾರಣ ಏನು?
ಶ್ರೀ ಮಹಾದೇವ್​, ಅದಿತಿ ಪ್ರಭುದೇವ

‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರದ ಟ್ರೇಲರ್​ಗೆ ಈಗಾಗಲೇ ಜನಮೆಚ್ಚುಗೆ ಸಿಕ್ಕಿದೆ. ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ಇದ್ದಾಗಲೇ ಇಂಥ ಚಿತ್ರವನ್ನು ತೆರೆಕಾಣಿಸುವುದು ಸೂಕ್ತ ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರೆ.

TV9kannada Web Team

| Edited By: Madan Kumar

Jan 26, 2022 | 4:14 PM

ಅನೇಕ ಸಿನಿಮಾಗಳು ಬಿಡುಗಡೆಗಾಗಿ ಕಾದು ಕುಳಿತಿವೆ. ಆದರೆ ಅದಕ್ಕೆ ಸೂಕ್ತವಾದಂತಹ ವಾತಾವರಣ ಕೂಡಿಬರುತ್ತಿಲ್ಲ. ಕೊರೊನಾ (Coronavirus) ಮೂರನೇ ಅಲೆಯ ಕಾರಣದಿಂದ ಹಲವು ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರಸ್ತುತ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಈ ಸಾಲಿಗೆ ಕನ್ನಡದ ‘ಗಜಾನನ ಆ್ಯಂಡ್​ ಗ್ಯಾಂಗ್​’ (Gajanana And Gang) ಸಿನಿಮಾ ಕೂಡ ಸೇರ್ಪಡೆ ಆಗಿದೆ. ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಫೆ.4ರಂದು ಈ ಸಿನಿಮಾ ಬಿಡುಗಡೆ ಆಗುತ್ತಿತ್ತು. ಆದರೆ ಈಗ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ. ಈ ಸಿನಿಮಾದಲ್ಲಿ ಅದಿತಿ ಪ್ರಭುದೇವ (Aditi Prabhudeva) ಹಾಗೂ ಶ್ರೀಮಹದೇವ್​ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ ಅಭಿಷೇಕ್​ ಶೆಟ್ಟಿ. ‘ನಮ್​ ಗಣಿ ಬಿ.ಕಾಂ ಪಾಸ್​’ ಸಿನಿಮಾ ಖ್ಯಾತಿಯ ನಾಗೇಶ್​ ಕುಮಾರ್​ ಬಂಡವಾಳ ಹೂಡಿದ್ದು, ಪ್ರದ್ಯೋತನ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಹೊಸ ರಿಲೀಸ್​ ಡೇಟ್​ ತಿಳಿಸಲಿದೆ ‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರತಂಡ.

‘ನಮ್ಮದು ಒಂದೊಳ್ಳೆಯ ಮನರಂಜನಾ ಚಿತ್ರ. ಕೊವಿಡ್​ ಕಾರಣದಿಂದ ನಮ್ಮ ಸಿನಿಮಾ ಸೋಲುವಂತಾಗಬಾರದು. ಪ್ರೇಕ್ಷಕರನ್ನು ರಂಜಿಸುವಲ್ಲಿ ಶೇ.100ರಷ್ಟು ಈ ಸಿನಿಮಾ ಯಶಸ್ಚಿ ಆಗುತ್ತದೆ ಎಂಬ ನಂಬಿಕೆ ನಮಗಿದೆ. ಹಾಗಾಗಿ ಸೂಕ್ತ ದಿನಾಂಕದಲ್ಲೇ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಶೀಘ್ರದಲ್ಲೇ ಹೊಸ ರಿಲೀಸ್​ ಡೇಟ್​ ತಿಳಿಸುತ್ತೇವೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಸದ್ಯಕ್ಕೆ ವೀಕೆಂಡ್​ ಕರ್ಫ್ಯೂ ತೆರವುಗೊಂಡಿದೆ. ಆದರೆ ನೈಟ್​ ಕರ್ಫ್ಯೂ ಹಾಗೆಯೇ ಇದೆ. ಅಲ್ಲದೇ ಚಿತ್ರಮಂದಿರದಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್​ ಮಾಡಿದರೆ ಚಿತ್ರದ ಕಲೆಕ್ಷನ್​ ಮೇಲೆ ಪೆಟ್ಟು ಬೀಳಲಿದೆ. ಆ ಕಾರಣದಿಂದ ‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಈ ಚಿತ್ರಕ್ಕೆ ಉದಯ್​ ಲೀಲಾ ಛಾಯಾಗ್ರಹಣ ಮಾಡಿದ್ದಾರೆ. ವಿಜೇತ್​ ಚಂದ್ರ ಸಂಕಲನದ ಜಬಾವ್ದಾರಿ ನಿಭಾಯಿಸಿದ್ದಾರೆ. ಬಿಗ್​ ಬಾಸ್​ ಖ್ಯಾತಿಯ ಶಮಂತ್​ ಬ್ರೋ ಗೌಡ, ರಘು ಗೌಡ, ನಾಟ್ಯರಂಗ, ಅಶ್ವಿನ್​ ಹಾಸನ್​ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನಿಮಾ ಮೂಲಕ ಒಂದು ಮಜವಾದ ಕಾಲೇಜ್​ ಸ್ಟೋರಿ ಹೇಳಲಿದ್ದಾರೆ ನಿರ್ದೇಶಕರು. ಫ್ರೆಂಡ್​ಶಿಪ್​, ಲವ್​, ಸೆಂಟಿಮೆಂಟ್​ ಮುಂತಾದ ಅಂಶಗಳನ್ನು ಒಳಗೊಂಡ ಈ ಚಿತ್ರದ ಟ್ರೇಲರ್​ಗೆ ಈಗಾಗಲೇ ಜನಮೆಚ್ಚುಗೆ ಸಿಕ್ಕಿದೆ. ಟ್ರೇಲರ್​ ಬಿಡುಗಡೆ ಮಾಡಿದ ಮೇಘನಾ ರಾಜ್​ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಆ ಮೂಲಕ ‘ಗಜಾನನ ಆ್ಯಂಡ್​ ಗ್ಯಾಂಗ್​’ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದರು. ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ಇದ್ದಾಗಲೇ ಇಂಥ ಚಿತ್ರವನ್ನು ತೆರೆಕಾಣಿಸುವುದು ಸೂಕ್ತ ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ:

ಮೇಘನಾ ರಾಜ್​ ಬದುಕಿಗೆ ಹತ್ತಿರವಾಗಿದೆ ‘ಗಜಾನನ ಆ್ಯಂಡ್​ ಗ್ಯಾಂಗ್​’ ಚಿತ್ರ; ಟ್ರೇಲರ್​ ನೋಡಿ ಅವರು ಹೇಳಿದ್ದೇನು?

ಆ ಸಿನಿಮಾ ನೋಡದೆಯೂ ಅದಿತಿಗೆ ಫ್ಯಾನ್​ ಆದ ಮೇಘನಾ ರಾಜ್ ಸರ್ಜಾ​; ಯಾವುದು ಆ ಚಿತ್ರ?

Follow us on

Related Stories

Most Read Stories

Click on your DTH Provider to Add TV9 Kannada