‘ಕೆಜಿಎಫ್ 2’ ಎದುರು ಪರಭಾಷೆ ಚಿತ್ರಗಳ ಮುಖಾಮುಖಿ; ಯಶ್ಗೆ ಪೈಪೋಟಿ ನೀಡೋರು ಯಾರೆಲ್ಲ?
ಕನ್ನಡದ ‘ಕೆಜಿಎಫ್ 2’ ಎದುರು ಪೈಪೋಟಿ ನೀಡಲು ಪರಭಾಷೆಯ ಕೆಲವು ಸಿನಿಮಾಗಳು ಸಜ್ಜಾಗಿವೆ. ಆ ಚಿತ್ರಗಳು ಕೂಡ ಏ.14ರಂದು ಬಿಡುಗಡೆ ಆಗುತ್ತಿವೆ.
‘ರಾಕಿಂಗ್ ಸ್ಟಾರ್’ ಯಶ್ (Yash) ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೇಶದೆಲ್ಲೆಡೆ ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಅದಕ್ಕೆ ತಕ್ಕಂತೆಯೇ ಪರಭಾಷೆಯಲ್ಲಿ ಪೈಪೋಟಿ ನೀಡೋಕೆ ಅನೇಕ ಸ್ಟಾರ್ ಸಿನಿಮಾಗಳು ಸಜ್ಜಾಗಿವೆ. ‘ಕೆಜಿಎಫ್ 2’ (KGF Chapter 2) ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿರುವ ಚಿತ್ರ. ಹಾಗಾಗಿ ಎಲ್ಲ ರಾಜ್ಯಗಳಲ್ಲೂ ಹೆಚ್ಚಿನ ಚಿತ್ರಮಂದಿರಗಳು ಸಿಗಬೇಕಿದೆ. ಆದರೆ ಅದೇ ಸಮಯದಲ್ಲಿ ಪರಭಾಷೆಯಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿರುವುದರಿಂದ ಗಲ್ಲಾಪೆಟ್ಟಿಗೆಯಲ್ಲಿ ಕ್ಲ್ಯಾಶ್ ಏರ್ಪಡಲಿದೆ. ಏಪ್ರಿಲ್ 14ರಂದು ‘ಕೆಜಿಎಫ್ 2’ ಜೊತೆಗೆ ಆಮಿರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಹಾಗಾಗಿ ಉತ್ತರ ಭಾರತದಲ್ಲಿ ಆಮಿರ್ ಖಾನ್ ವರ್ಸಸ್ ಯಶ್ ಎಂಬ ವಾತಾವರಣ ನಿರ್ಮಾಣ ಆಗಲಿದೆ. ತಮಿಳಿನಲ್ಲಿ ‘ದಳಪತಿ’ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಕೂಡ ಏ.14ರಂದು ತೆರೆಗೆ ಬರುತ್ತಿದೆ. ಹಾಗಾಗಿ ತಮಿಳುನಾಡಿನಲ್ಲಿಯೂ ‘ಕೆಜಿಎಫ್: ಚಾಪ್ಟರ್ 2’ ಚಿತ್ರಕ್ಕೆ ಭರ್ಜರಿ ಪೈಪೋಟಿ ಎದುರಾಗಲಿದೆ.
ಇದನ್ನೂ ಓದಿ:
‘ಕೆಜಿಎಫ್ 2’ ರಿಲೀಸ್ಗೂ ಮುನ್ನವೇ ಗುಡ್ ನ್ಯೂಸ್; ಮತ್ತೆ ಒಂದಾಗ್ತಾರೆ ಸಂಜಯ್ ದತ್-ರವೀನಾ ಟಂಡನ್
ಆಫ್ರಿಕಾದಲ್ಲೂ ನಟ ಯಶ್ ಹವಾ; ‘ಕೆಜಿಎಫ್’ ಚಿತ್ರದ ಹಾಡಿಗೆ ಮರುಳಾದ ಕಿಲಿ ಪೌಲ್
Published on: Jan 26, 2022 09:57 AM
ಮೂವರ ಶೂಟೌಟ್ ಕೇಸ್: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ

