ಆಫ್ರಿಕಾದಲ್ಲೂ ನಟ ಯಶ್​ ಹವಾ; ‘ಕೆಜಿಎಫ್​’ ಚಿತ್ರದ ಹಾಡಿಗೆ ಮರುಳಾದ ಕಿಲಿ ಪೌಲ್​

ಆಫ್ರಿಕಾದಲ್ಲೂ ನಟ ಯಶ್​ ಹವಾ; ‘ಕೆಜಿಎಫ್​’ ಚಿತ್ರದ ಹಾಡಿಗೆ ಮರುಳಾದ ಕಿಲಿ ಪೌಲ್​
ಕಿಲಿ ಪೌಲ್​, ಯಶ್​

‘ಯಶ್​, ಶ್ರೀನಿಧಿ ಶೆಟ್ಟಿ ನಟನೆಯ ‘ಕೆಜಿಎಫ್’​ ಒಂದು ಬ್ಲಾಕ್​ ಬಸ್ಟರ್​ ಸಿನಿಮಾ. ಈ ಮಾಸ್ಟರ್​ಪೀಸ್​ ನನಗೆ ತುಂಬ ಇಷ್ಟ’ ಎಂದು ಕಿಲಿ ಪೌಲ್​ ಬರೆದುಕೊಂಡಿದ್ದಾರೆ.

TV9kannada Web Team

| Edited By: Madan Kumar

Jan 21, 2022 | 8:58 AM

ಕನ್ನಡದ ನಟ ಯಶ್​ (Rocking Star Yash) ಅವರು ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ, ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿದ್ದು ಗೊತ್ತೇ ಇದೆ. ಅವರ ಹವಾ ಭಾರತದಲ್ಲಿ ಮಾತ್ರ ಅಲ್ಲ, ಆಫ್ರಿಕಾದಲ್ಲೂ ಇದೆ! ಹೌದು, ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 1’ (KGF Chapter 1) ಸಿನಿಮಾದ ಹಾಡು ಆಫ್ರಿಕಾ ಖಂಡಲ್ಲೂ ಸೌಂಡು ಮಾಡುತ್ತಿದೆ. ಅಲ್ಲಿನ ಜನಪ್ರಿಯ ಕಂಟೆಂಟ್​ ಕ್ರಿಯೇಟರ್​ ಕಿಲಿ ಪೌಲ್​ ಅವರು ‘ಕೆಜಿಎಫ್​’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗುತ್ತಿದೆ. ಭಾರತದಲ್ಲಿರುವ ಅನೇಕರು ಕಿಲಿ ಪೌಲ್​ (Kili Paul) ವಿಡಿಯೋಗಳಿಗೆ ಫಿದಾ ಆಗಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಿಂದಿ ಅವತರಣಿಕೆಯ ‘ಗಲಿ ಗಲಿ ಮೇ’ ಹಾಡಿನಲ್ಲಿ ‘ರಾಕಿಂಗ್​ ಸ್ಟಾರ್​’ ಯಶ್​ ಹಾಗೂ ಮೌನಿ ರಾಯ್​ ಅವರು ಜೊತೆಯಾಗಿ ಹೆಜ್ಜೆ ಹಾಕಿದ್ದರು. ಅದೇ ಹಾಡಿಗೆ ಈಗ ಕಿಲಿ ಪೌಲ್​ ಡ್ಯಾನ್ಸ್​ ಮಾಡಿದ್ದಾರೆ. ಆ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಕಿಲಿ ಪೌಲ್​ ಅವರಿಗೆ ದೊಡ್ಡ ಫ್ಯಾನ್​​ ಫಾಲೋಯಿಂಗ್​ ಇದೆ. 13 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಫಾಲೋ ಮಾಡುತ್ತಾರೆ. ಭಾರತದ ಸಿನಿಮಾ ಹಾಡುಗಳಿಗೆ ಅವರು ಆಗಾಗ ಡ್ಯಾನ್ಸ್​ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ‘ಪುಷ್ಪ’ ಸಿನಿಮಾದ ‘ಊ ಅಂಟಾವಾ ಮಾವ.. ಊಊ ಅಂಟಾವಾ ಮಾವ’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅವರು ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದರು. ಈಗ ‘ಕೆಜಿಎಫ್​’ ಸಿನಿಮಾದ ‘ಗಲಿ ಗಲಿ ಮೇ’ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ.

‘ಯಶ್​, ಶ್ರೀನಿಧಿ ಶೆಟ್ಟಿ ನಟನೆಯ ‘ಕೆಜಿಎಫ್’​ ಒಂದು ಬ್ಲಾಕ್​ ಬಸ್ಟರ್​ ಸಿನಿಮಾ. ಈ ಮಾಸ್ಟರ್​ ಪೀಸ್​ ನನಗೆ ತುಂಬ ಇಷ್ಟ’ ಎಂದು ಕಿಲಿ ಪೌಲ್​ ಬರೆದುಕೊಂಡಿದ್ದಾರೆ. ಆ ಮೂಲಕ ಆಫ್ರಿಕಾದ ಮಂದಿಗೂ ‘ಕೆಜಿಎಫ್​’ ಚಿತ್ರದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಒಂದೇ ದಿನದಲ್ಲಿ ಈ ವಿಡಿಯೋವನ್ನು 10 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ಕಿಲಿ ಪೌಲ್​ ಮಿಂಚುತ್ತಿರುವ ಪರಿ ನೋಡಿದರೆ ಶೀಘ್ರದಲ್ಲೇ ಅವರಿಗೆ ಹಾಲಿವುಡ್​ ಅಥವಾ ಬಾಲಿವುಡ್​ನಿಂದ ಸಿನಿಮಾ ಆಫರ್​ ಬರಲಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

View this post on Instagram

A post shared by Kili Paul (@kili_paul)

‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕಾಗಿ ನಿರೀಕ್ಷೆ ಹೆಚ್ಚಿದೆ. ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಏ.14ರಂದು ಬಿಡುಗಡೆ ಆಗಲಿದೆ. ಆ ದಿನಾಂಕಕ್ಕಾಗಿ ಯಶ್​ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ:

Yash: ಯಶ್​ ಜನ್ಮದಿನಕ್ಕೆ ಆಯ್ರಾ, ಯಥರ್ವ್​ ಕೊಟ್ಟ ಗಿಫ್ಟ್​ ಏನು? ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

‘ಕೆಜಿಎಫ್​ 2’ ಶೂಟಿಂಗ್​ ಸೆಟ್​ನಲ್ಲಿ ರವೀನಾ ಟಂಡನ್​ಗೆ ನಿರಾಸೆ; ಓಪನ್​ ಆಗಿಯೇ ಹೇಳಿಕೊಂಡ ನಟಿ

Follow us on

Most Read Stories

Click on your DTH Provider to Add TV9 Kannada