‘ಕೆಜಿಎಫ್​ 2’ ಶೂಟಿಂಗ್​ ಸೆಟ್​ನಲ್ಲಿ ರವೀನಾ ಟಂಡನ್​ಗೆ ನಿರಾಸೆ; ಓಪನ್​ ಆಗಿಯೇ ಹೇಳಿಕೊಂಡ ನಟಿ

‘ಕೆಜಿಎಫ್​ 2’ ಶೂಟಿಂಗ್​ ಸೆಟ್​ನಲ್ಲಿ ರವೀನಾ ಟಂಡನ್​ಗೆ ನಿರಾಸೆ; ಓಪನ್​ ಆಗಿಯೇ ಹೇಳಿಕೊಂಡ ನಟಿ

ಈ ಹಿಂದೆ ಹಲವು ಸಿನಿಮಾಗಳಲ್ಲಿ ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಜತೆಯಾಗಿ ನಟಿಸಿದ್ದರು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕೆಜಿಎಫ್​ 2’ನಲ್ಲಿ ಇಬ್ಬರೂ ನಟಿಸುತ್ತಿದ್ದಾರೆ. ಆದರೆ, ಇವರಿಗೆ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿಲ್ಲ.

TV9kannada Web Team

| Edited By: Rajesh Duggumane

Jan 19, 2022 | 4:59 PM

ನಟಿ ರವೀನಾ ಟಂಡನ್​ ಅವರು ‘ಕೆಜಿಎಫ್​ 2’ ಚಿತ್ರದಲ್ಲಿ ರಮಿಕಾ ಸೇನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರದ್ದು ರಾಜಕಾರಣಿಯ ಪಾತ್ರ. ಈ ಸಿನಿಮಾ ಬಗ್ಗೆ ಇಡೀ ಭಾರತ ಚಿತ್ರರಂಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ. ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ ಚಿತ್ರದ ಶೂಟಿಂಗ್​ ಘಟನೆಯೊಂದನ್ನು ಅವರು ನೆನಪಿಸಿಕೊಂಡಿದ್ದಾರೆ. ಒಂದು ವಿಚಾರ ಕೇಳಿ ಅವರು ತುಂಬಾನೇ ನಿರಾಸೆಗೊಂಡಿದ್ದರು. ಏನದು? ಅದನ್ನು ತಿಳಿಯಲು ಮುಂದೆ ಓದಿ.

ಈ ಹಿಂದೆ ಹಲವು ಸಿನಿಮಾಗಳಲ್ಲಿ ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಜತೆಯಾಗಿ ನಟಿಸಿದ್ದರು. ಈ ಜೋಡಿ ‘ಜೀನಾ ಮರ್ನಾ ತೆರೆ ಸಂಗ್​’ (1992), ‘ಕ್ಷತ್ರಿಯಾ’ (1993), ವಿಜೇತ (1996) ‘ಆತಿಶ್​’ (1994) ಸೇರಿ ಕೆಲ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಕೆಜಿಎಫ್​ 2’ನಲ್ಲಿ ಇಬ್ಬರೂ ನಟಿಸುತ್ತಿದ್ದಾರೆ. ಆದರೆ, ಇವರಿಗೆ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಅವರಿಗೆ ನಿರಾಸೆ ಆಗಿದೆ. ಇಡೀ ಸಿನಿಮಾದಲ್ಲಿ ಅವರು ಒಂದೇ ಒಂದು ದೃಶ್ಯದಲ್ಲೂ ಇಬ್ಬರೂ ಒಟ್ಟಾಗಿ ನಟಿಸುತ್ತಿಲ್ಲ.

ನ್ಯೂಸ್​ 18 ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರವೀನಾ ಟಂಡನ್​, ‘ಸಂಜಯ್ ಮತ್ತು ನಾನು ಹಳೆಯ ಕಾಲದಂತೆಯೇ ಸೆಟ್‌ನಲ್ಲಿ ಎಂಜಾಯ್​ ಮಾಡಬಹುದು ಎಂದುಕೊಂಡಿದ್ದೆವು. ಆದರೆ ಬೇಸರದ ಸಂಗತಿ ಎಂದರೆ ನಾವು ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ಶೂಟಿಂಗ್ ಶೆಡ್ಯೂಲ್‌ಗಳು ಎಂದಿಗೂ ಒಟ್ಟಿಗೇ ಬಂದಿಲ್ಲ. ನಾವಿಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುವ ರೀತಿ ಮಾಡಿ ಎಂದು ಪ್ರಶಾಂತ್‌ಗೆ ವಿನಂತಿಸಿದ್ದೆವು. ಆದರೆ ಸ್ಕ್ರಿಪ್ಟ್‌ನಲ್ಲಿ ಅದಕ್ಕೆ ಎಲ್ಲಿಯೂ ಅವಕಾಶವಿಲ್ಲ ಎಂದು ಅವರು ಹೇಳಿದ್ದರು’ ಎಂದಿದ್ದಾರೆ.

‘ಕೆಜಿಎಫ್​ 2’ನಲ್ಲಿ ಅಧೀರನಾಗಿ ಸಂಜಯ್​ ದತ್​ ಹಾಗೂ ಪ್ರಧಾನ ಮಂತ್ರಿ ರಮಿಕಾ ಸೇನ್​ ಆಗಿ ರವೀನಾ ಟಂಡನ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಂದ ಸ್ಫೂರ್ತಿ ಪಡೆದಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದು ಇಂದಿರಾ ಗಾಂಧಿಯಿಂದ ಸ್ಫೂರ್ತಿ ಪಡೆದ ಪಾತ್ರವಲ್ಲ ಎನ್ನುವ ಸ್ಪಷ್ಟನೆ ರವೀನಾ ಕಡೆಯಿಂದ ಬಂದಿದೆ.

ರವೀನಾ ಸದ್ಯ, ‘ಅರಣ್ಯಕ್​’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ಈ ವೆಬ್​ ಸೀರಿಸ್​ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ಗಳಿಸಿಕೊಂಡಿದೆ. ಕ್ರೈಮ್​ ಥ್ರಿಲ್ಲರ್​ ಶೈಲಿಯಲ್ಲಿ ಈ ವೆಬ್​ ಸೀರಿಸ್ ಮೂಡಿ ಬಂದಿದೆ.

ಇದನ್ನೂ ಓದಿ: ಕೆಜಿಎಫ್ 2 ಚಿತ್ರದಲ್ಲಿ ನಾನು ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿಲ್ಲವೆಂದ ನಟಿ ರವೀನಾ ಟಂಡನ್

‘ಕೆಜಿಎಫ್​ 2’ ರಿಲೀಸ್​ಗೂ ಮುನ್ನವೇ ಗುಡ್​ ನ್ಯೂಸ್​; ಮತ್ತೆ ಒಂದಾಗ್ತಾರೆ ಸಂಜಯ್​ ದತ್​-ರವೀನಾ ಟಂಡನ್

Follow us on

Related Stories

Most Read Stories

Click on your DTH Provider to Add TV9 Kannada