ಜಾಲಿ ಮೂಡ್​ನಲ್ಲಿ ರಕ್ಷಿತ್​ ಶೆಟ್ಟಿ, ರಾಜ್​ ಬಿ. ಶೆಟ್ಟಿ; ವೈರಲ್​ ಆಗುತ್ತಿದೆ ವಿಡಿಯೋ

ಗರುಡ ಗಮನ ವೃಷಭ ವಾಹನ’ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಈ ಚಿತ್ರ ತೆರೆಕಂಡ ನಂತರದಲ್ಲಿ ಒಂದು ಬ್ರೇಕ್​ ತೆಗೆದುಕೊಳ್ಳುವುದಾಗಿ ರಾಜ್​ ಬಿ. ಶೆಟ್ಟಿ ಹೇಳಿದ್ದರು. ಅವರು ಈಗ ಅದೇ ರೀತಿ ಮಾಡುತ್ತಿದ್ದಾರೆ.

TV9kannada Web Team

| Edited By: Rajesh Duggumane

Jan 19, 2022 | 10:04 PM

ಸ್ಯಾಂಡಲ್​ವುಡ್ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ‘ಗರುಡ ಗಮನ ವೃಷಭ ವಾಹನ’ ಖ್ಯಾತಿಯ ರಾಜ್ ಬಿ. ಶೆಟ್ಟಿ ಅವರು ವಾಲಿಬಾಲ್ ಆಟವಾಡುತ್ತಿರುವ ವಿಡಿಯೋ ವೈರಲ್​ ಆಗಿದೆ. ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರಾದ ಅಲೆವೂರಿನ ಮನೆಯಲ್ಲಿದ್ದು, ಬಿಡುವಿನ ವೇಳೆ ಸ್ನೇಹಿತರ ಜತೆ ಆಟವಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಟಾಲಿವುಡ್​ನ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಚಿತ್ರವನ್ನು ಹೊಗಳಿದ್ದಾರೆ. ಒಟಿಟಿಯಲ್ಲಿ ಈ ಚಿತ್ರ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಈ ಚಿತ್ರ ತೆರೆಕಂಡ ನಂತರದಲ್ಲಿ ಒಂದು ಬ್ರೇಕ್​ ತೆಗೆದುಕೊಳ್ಳುವುದಾಗಿ ರಾಜ್​ ಬಿ. ಶೆಟ್ಟಿ ಹೇಳಿದ್ದರು. ಅವರು ಈಗ ಅದೇ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಒಟಿಟಿಯಲ್ಲೂ ಧೂಳೆಬ್ಬಿಸಿದ ‘ಗರುಡ ಗಮನ ವೃಷಭ ವಾಹನ’ ಚಿತ್ರ

RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?

Follow us on

Click on your DTH Provider to Add TV9 Kannada