ದೇವರಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡರ ಸಮ್ಮುಖದಲ್ಲೇ ಪಕ್ಷದ ಸ್ಥಳೀಯ ಮುಖಂಡರ ಬೀದಿಜಗಳ
ಹಾಗೆ ನೋಡಿದರೆ ಮುತ್ತರಾಜ ನೇರವಾಗಿ ಶಾಸಕ ಸೋಮನಗೌಡ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಶಾಸಕರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಫೋನ್ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಪಕ್ಷದ ಸ್ಥಳೀಯ ನಾಯಕರನ್ನು ಅವರು ಕಡೆಗಣಿಸುತ್ತಿದ್ದಾರೆ ಅನ್ನೋದು ಅವರ ಆರೋಪ.
ಇಲ್ಲಿ ನಡೆಯುತ್ತಿರುವ ಕಾದಾಟ ಎರಡು ಪುಂಡರ ನಡುವೆ ನಡೆಯುತ್ತಿರುವ ಜಗಳವಲ್ಲ. ಬಿಜೆಪಿ (BJP) ಕಾರ್ಯಕರ್ತರ ನಡುವೆ ದೇವರಹಿಪ್ಪರಗಿಯ ನಡುರಸ್ತೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ (Somanagouda Patil Sasnur) ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಬೀದಿ ಜಗಳ ಮಾರಾಯ್ರೇ. ಚೆಕ್ಸ್ ಆಂಗಿ ತೊಟ್ಟಿರುವ ವ್ಕಕ್ತಿ ಜೋರಾಗಿ ಅರಚುವುದು, ಜನರ ಮೇಲೇರಿ ಹೋಗುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆ. ಅಂದಹಾಗೆ ಅರಚುತ್ತಿರುವ ನಾಯಕನ ಹೆಸರು ಮುತ್ತುರಾಜ ಹಾಲಿಹಾಳ. ಇವರು ದೇವರಗಿಪ್ಪರಗಿ ಬಿಜೆಪಿ ಮಂಡಳ ಉಪಾಧ್ಯಕ್ಷ (vice-president) ಆಗಿದ್ದಾರೆ. ಹಾಗೆ ನೋಡಿದರೆ ಮುತ್ತರಾಜ ನೇರವಾಗಿ ಶಾಸಕ ಸೋಮನಗೌಡ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಶಾಸಕರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಫೋನ್ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಪಕ್ಷದ ಸ್ಥಳೀಯ ನಾಯಕರನ್ನು ಅವರು ಕಡೆಗಣಿಸುತ್ತಿದ್ದಾರೆ ಅನ್ನೋದು ಅವರ ಆರೋಪ.
ಅವರ ಆರೋಪಗಳನ್ನು ಶಾಸಕರು ಶಾಂತಚಿತ್ತರಾಗಿಯೇ ಕೇಳಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಜೊತೆಯಲ್ಲಿರುವ ಹಿಂಬಾಲಕರು ಮುತ್ತುರಾಜ ಅವರ ಬಾಯಿಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಕೋಪೋದ್ರಿಕ್ತರಾದ ಅವರು ತಮ್ಮ ದೂರುಗಳಿಗೆ ಶಾಸಕರು ಉತ್ತರಿಸಬೇಕು, ಉಳಿದವರು ಯಾಕೆ ನಡುವೆ ಮಾತಾಡಬೇಕು ಅಂದಿದ್ದಕ್ಕೆ ಶಾಸಕರ ಮೆಚ್ಚುಗೆಗೆ ಪಾತ್ರರಾಗುವ ಉಮೇದಿ ಹೊಂದಿದ್ದ ಕೆಲವರು ಮುತ್ತುರಾಜ ಮೇಲೆ ಏರಿಹೋಗಿದ್ದಾರೆ.
ಆಗಲೇ ವಾಗ್ವಾದ ತಳ್ಳಾಟ ಹೊಡೆದಾಟದ ಹಂತಕ್ಕೆ ಹೋಗಿದೆ. ಸೋಮನಗೌಡರು ಮುತ್ತುರಾಜ ಅವರ ವಿರುದ್ಧ ಕೋಪ ಪ್ರದರ್ಶಿಸಿಲ್ಲ. ಶಾಂತಚಿತ್ತರಾಗಿಯೇ ಮಾತಾಡಿದ್ದಾರೆ. ಅಲ್ಲಿ ನೆರೆದಿದ್ದ ಬೇರೆ ನಾಯಕರು ಜಗಳದಲ್ಲಿ ತೊಡಗಿದ್ದವರನ್ನು ಸಮಾಧಾನ ಪಡಿಸಿದ್ದಾರೆ.
ಇದನ್ನೂ ಓದಿ: ಮೇಕಪ್ನಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಂಡು ಅಚ್ಚರಿಗೊಂಡ ಬಾಲಕಿ; ವಿಡಿಯೋ ವೈರಲ್