ಒಟಿಟಿಯಲ್ಲೂ ಧೂಳೆಬ್ಬಿಸಿದ ‘ಗರುಡ ಗಮನ ವೃಷಭ ವಾಹನ’ ಚಿತ್ರ

TV9 Digital Desk

| Edited By: shivaprasad.hs

Updated on:Jan 16, 2022 | 8:08 AM

ಟ್ರೇಲರ್​ನಿಂದಲೇ ಭಾರಿ ಕುತೂಹಲ ಸೃಷ್ಟಿಸಿದ್ದ ‘ಗರುಡ ಗಮನ ವೃಷಭ ವಾಹನ’ ಚಿತ್ರ ನ.19ರಂದು ತೆರೆಕಂಡಿತು. ಮೊದಲ ದಿನವೇ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿತು. ಸಿನಿಮಾ ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿತು.

ಒಟಿಟಿಯಲ್ಲೂ ಧೂಳೆಬ್ಬಿಸಿದ ‘ಗರುಡ ಗಮನ ವೃಷಭ ವಾಹನ’ ಚಿತ್ರ
ಗರುಡ ಗಮನ ವೃಷಭ ವಾಹನ

2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ‘ಗರುಡ ಗಮನ ವೃಷಭ ವಾಹನ’ (Garuda Gamana Vrishabha Vahana) ಚಿತ್ರ ಕೂಡ ಪ್ರಮುಖವಾಗಿದೆ. ರಾಜ್​ ಬಿ. ಶೆಟ್ಟಿ (Raj B. Shetty) ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್​ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್​ ಶೆಟ್ಟಿ (Rishab Shetty) ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಮೂರು ದಿನಗಳ ಹಿಂದೆ ಒಟಿಟಿಯಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಈಗ ಒಟಿಟಿಯಲ್ಲೂ ಧೂಳೆಬ್ಬಿಸಿದೆ.

ಟ್ರೇಲರ್​ನಿಂದಲೇ ಭಾರಿ ಕುತೂಹಲ ಸೃಷ್ಟಿಸಿದ್ದ ‘ಗರುಡ ಗಮನ ವೃಷಭ ವಾಹನ’ ಚಿತ್ರ ನ.19ರಂದು ತೆರೆಕಂಡಿತು. ಮೊದಲ ದಿನವೇ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿತು. ಸಿನಿಮಾ ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿತು. ಚಿತ್ರಕ್ಕೆ ಜನರು ತೋರಿಸಿದ ಪ್ರೀತಿಗೆ ರಾಜ್​ ಬಿ. ಶೆಟ್ಟಿ ಫಿದಾ ಆದರು. ತಮ್ಮ ಟೀಂ ಜತೆಗೂಡಿ ಅವರು ಅನೇಕ ಚಿತ್ರಮಂದಿರಗಳಿಗೆ ಭೇಟಿ ನೀಡಿದರು.

ಜನವರಿ 13ರಂದು ಒಟಿಟಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷಗಳ ವೀಕ್ಷಣೆ ಕಂಡಿದೆ. ಈ ಮೂಲಕ ಒಟಿಟಿಯಲ್ಲೂ ಸಿನಿಮಾ ಭಾರೀ ಜನಮನ್ನಣೆ ಪಡೆದುಕೊಂಡಂತಾಗಿದೆ.

‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಾಜ್​ ಬಿ. ಶೆಟ್ಟಿ ನಿಭಾಯಿಸಿರುವ ಪಾತ್ರ ಭಿನ್ನವಾಗಿದೆ. ಅನೇಕ ಸಿದ್ಧ ಸೂತ್ರಗಳನ್ನು ಮುರಿದು ಅವರು ಈ ಚಿತ್ರವನ್ನು ಕಟ್ಟಿದ್ದಾರೆ. ಸಿನಿಮಾ ಗೆಲ್ಲುವಲ್ಲಿ ಹಾಡುಗಳ ಪಾತ್ರ ಕೂಡ ದೊಡ್ಡದಿದೆ. ಮಿಧುನ್​ ಮುಕುಂದನ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸೋಜುಗಾದ ಸೂಜು ಮಲ್ಲಿಗೆ..’, ‘ಚಂದ್ರ ಚೂಡ ಶಿವ ಶಂಕರ ಪಾರ್ವತಿ ರಮಣ..’ ಹಾಗೂ ‘ಡೀಮನ್​ ಇನ್​ ಮೀ’ ಹಾಡುಗಳು ಕೇಳುಗರ ಮನಗೆದ್ದಿವೆ.

ಇದನ್ನೂ ಓದಿ: ಪರಭಾಷೆಗಳಿಂದ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಬಂತು ಬೇಡಿಕೆ

‘ಗರುಡ ಗಮನ..’ ಚಿತ್ರದ ಇನ್ನೊಂದು ಮೈಲಿಗಲ್ಲು; ‘ಸೋಜುಗಾದ ಸೂಜು ಮಲ್ಲಿಗೆ’ ಸಾಧನೆ ಏನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada