‘ಗರುಡ ಗಮನ..’ ಚಿತ್ರದ ಇನ್ನೊಂದು ಮೈಲಿಗಲ್ಲು; ‘ಸೋಜುಗಾದ ಸೂಜು ಮಲ್ಲಿಗೆ’ ಸಾಧನೆ ಏನು?

Sojugada Sooju Mallige: ‘ಗರುಡ ಗಮನ ವೃಷಭ ವಾಹನ’ ಚಿತ್ರದ ‘ಸೋಜುಗಾದ ಸೂಜು ಮಲ್ಲಿಗೆ’ ಹಾಡಿಗೆ ಚೈತ್ರಾ ಜೆ. ಆಚಾರ್​ ಮತ್ತು ಮಿಧುನ್​ ಮುಕುಂದನ್​ ಧ್ವನಿ ನೀಡಿದ್ದಾರೆ. ಈ ಗೀತೆಯನ್ನು ಯೂಟ್ಯೂಬ್​ನಲ್ಲಿ ನೋಡಿ ಇಷ್ಟಪಟ್ಟವರು ಕೂಡ ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

‘ಗರುಡ ಗಮನ..’ ಚಿತ್ರದ ಇನ್ನೊಂದು ಮೈಲಿಗಲ್ಲು; ‘ಸೋಜುಗಾದ ಸೂಜು ಮಲ್ಲಿಗೆ’ ಸಾಧನೆ ಏನು?
‘ಸೋಜುಗಾದ ಸೂಜು ಮಲ್ಲಿಗೆ’ ಹಾಡಿನಲ್ಲಿ ರಾಜ್ ಬಿ. ಶೆಟ್ಟಿ


ರಾಜ್​ ಬಿ. ಶೆಟ್ಟಿ (Raj B. Shetty) ನಿರ್ದೇಶನ ಮಾಡಿರುವ ಮತ್ತು ನಾಯಕನಾಗಿ ಅಭಿನಯಿಸಿರುವ ‘ಗರುಡ ಗಮನ ವೃಷಭ ವಾಹನ’ (Garuda Gamana Vrishabha Vahana) ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ‘ಒಂದು ಮೊಟ್ಟೆಯ ಕಥೆ’ ಚಿತ್ರದ ಬಳಿಕ ಅವರು ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದು. ಡಿಫರೆಂಟ್​ ಆದಂತಹ ಒಂದು ಕ್ರೈಂ ಜಗತ್ತನ್ನು ಅವರು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಬಹುತೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ರಿಷಬ್​ ಶೆಟ್ಟಿ (Rishab Shetty) ಕೂಡ ಮುಖ್ಯ ಭೂಮಿಕೆ ನಿಭಾಯಿಸಿದ್ದು, ಅವರ ಪಾತ್ರಕ್ಕೂ ಶಿಳ್ಳೆ-ಚಪ್ಪಾಳೆ ಸಿಗುತ್ತಿದೆ. ಇದೆಲ್ಲದರ ಜೊತೆಗೆ ಚಿತ್ರದ ಸಂಗೀತ ನಿರ್ದೇಶಕ ಮಿಧುನ್​ ಮುಕುಂದನ್​ ಅವರ ಕೆಲಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದ ಗೆಲುವಿನಲ್ಲಿ ವಿಧುನ್​ ಮುಕುಂದನ್​ (Midhun Mukundan) ಅವರ ಕೊಡುಗೆ ದೊಡ್ಡದಿದೆ. ‘ಸೋಜುಗಾದ ಸೂಜು ಮಲ್ಲಿಗೆ’ (Sojugada Sooju Mallige) ಸಾಂಗ್​ ಧೂಳೆಬ್ಬಿಸುತ್ತಿದೆ.

‘ಗರುಡ ಗಮನ ವೃಷಭ ವಾಹನ’ ರಿಲೀಸ್​ ಆಗುವುದಕ್ಕೂ ಮುನ್ನ ‘ಡೀಮನ್​ ಇನ್​ ಮೀ’ ಹಾಡು ಸಖತ್​ ಹಿಟ್​ ಆಗಿತ್ತು. ಸಿನಿಮಾದ ಒಂದು ಮುಖ್ಯ ದೃಶ್ಯದ ಹಿನ್ನೆಲೆಯಲ್ಲಿ ‘ಸೋಜುಗಾದ ಸೂಜು ಮಲ್ಲಿಗೆ’ ಹಾಡನ್ನು ಬಳಸಿಕೊಳ್ಳಲಾಗಿದೆ. ಅದು ಕೂಡ ಜನರಿಗೆ ತುಂಬ ಇಷ್ಟ ಆಗಿದೆ. ಚಿತ್ರ ತೆರೆಕಂಡು ಯಶಸ್ವಿಯಾದ ಬಳಿಕ ಯೂಟ್ಯೂಬ್​ನಲ್ಲಿ ‘ಸೋಜುಗಾದ ಸೂಜು ಮಲ್ಲಿಗೆ’ ಗೀತೆಯನ್ನು (ಲಿರಿಕಲ್​ ವಿಡಿಯೋ) ಬಿಡುಗಡೆ ಮಾಡಲಾಯ್ತು. ಲಕ್ಷಾಂತರ ಜನರು ಅದನ್ನು ನೋಡಿ ಖುಷಿಪಡುತ್ತಿದ್ದಾರೆ.

ನ.26ರಂದು ‘ಸೋಜುಗಾದ ಸೂಜು ಮಲ್ಲಿಗೆ’ ಹಾಡು ಬಿಡುಗಡೆ ಆಯಿತು. ಮೂರು ದಿನ ಕಳೆಯುವುದರೊಳಗೆ ಈ ಗೀತೆ ಒಂದು ಮಿಲಿಯನ್​ (10 ಲಕ್ಷ) ವೀಕ್ಷಣೆ ಕಾಣುತ್ತಿದೆ. ಚೈತ್ರಾ ಜೆ. ಆಚಾರ್​ ಮತ್ತು ಮಿಧುನ್​ ಮುಕುಂದನ್​ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡನ್ನು ನೋಡಿದವರು ಕೂಡ ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಆ ಮೂಲಕ ಸಿನಿಮಾದ ಗೆಲುವಿಗೆ ಈ ಹಾಡು ಸಹಾಯಕ ಆಗಿದೆ.

‘ಗರುಡ ಗಮನ ವೃಷಭ ವಾಹನ’ ಸೂಪರ್​ ಹಿಟ್​ ಆಗಿದೆ. ಈ ಗೆಲುವನ್ನು ಚಿತ್ರತಂಡ ಸಂಭ್ರಮಿಸುತ್ತಿದೆ. ರಾಜ್ಯದ ಅನೇಕ ಕಡೆಗಳಿಗೆ ಪ್ರವಾಸ ಮಾಡಿ, ಹಲವು ಊರುಗಳ ಚಿತ್ರಮಂದಿರಗಳಿಗೆ ಚಿತ್ರತಂಡದವರು ಭೇಟಿ ನೀಡುತ್ತಿದ್ದಾರೆ. ಎಲ್ಲ ಊರುಗಳಲ್ಲೂ ರಾಜ್​ ಬಿ. ಶೆಟ್ಟಿ ಅವರ ಬಳಗಕ್ಕೆ ಅದ್ದೂರಿ ಸ್ವಾಗತ ಸಿಗುತ್ತಿದೆ.

ಇದನ್ನೂ ಓದಿ:

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

‘ರಿಷಬ್​ಗೆ ಹೀರೋಯಿನ್​ ಕೊಡಬೇಡಿ ಅಂತ ಅವರ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ರು’: ರಾಜ್​ ಬಿ. ಶೆಟ್ಟಿ

Click on your DTH Provider to Add TV9 Kannada