‘ರಿಷಬ್​ಗೆ ಹೀರೋಯಿನ್​ ಕೊಡಬೇಡಿ ಅಂತ ಅವರ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ರು’: ರಾಜ್​ ಬಿ. ಶೆಟ್ಟಿ

Raj B Shetty: ರಿಷಬ್​ ಶೆಟ್ಟಿ, ರಾಜ್​ ಬಿ. ಶೆಟ್ಟಿ ಅಭಿನಯದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಇತ್ತೀಚೆಗೆ ಈ ಚಿತ್ರತಂಡ ಸಕ್ಸಸ್​ ಮೀಟ್​ ಆಯೋಜಿಸಿತ್ತು.

ರಾಜ್​ ಬಿ. ಶೆಟ್ಟಿ (Raj B Shetty) ನಟನೆ ಮತ್ತು ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ (Garuda Gamana Vrishabha Vahana) ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ರಾಜ್​ ಬಿ. ಶೆಟ್ಟಿ ಜೊತೆ ರಿಷಬ್​ ಶೆಟ್ಟಿ (Rishab Shetty) ಕೂಡ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಹೀರೋಯಿನ್​ ಇಲ್ಲ. ಹೊಸ ಬಗೆಯಲ್ಲಿ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಅನೇಕ ಕಡೆಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಇತ್ತೀಚೆಗೆ ಈ ಚಿತ್ರ ಸಕ್ಸಸ್​ ಮೀಟ್​ ಆಯೋಜಿಸಿತ್ತು. ಈ ವೇಳೆ ರಾಜ್​ ಬಿ. ಶೆಟ್ಟಿಗೆ ಒಂದು ಪ್ರಶ್ನೆ ಎದುರಾಯಿತು. ‘ಈ ಸಿನಿಮಾದಲ್ಲಿ ಹೀರೋಯಿನ್​ ಇಲ್ಲ ಅಂತ ರಿಷಬ್​ ಬೇಜಾರಾಗಿದ್ದಾರಾ’ ಎಂದು ತಮಾಷೆಗೆ ಪ್ರಶ್ನಿಸಲಾಯಿತು. ಅದಕ್ಕೆ ಅಷ್ಟೇ ತಮಾಷೆಯಾಗಿ ರಾಜ್​ ಬಿ. ಶೆಟ್ಟಿ ಉತ್ತರಿಸಿದರು. ‘ರಿಷಬ್​ಗೆ ಹೀರೋಯಿನ್​ ಕೊಡಬೇಡಿ ಅಂತ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ನನಗೆ ಫೋನ್​ ಮಾಡಿ ಹೇಳಿದ್ದರು’ ಎಂದು ಅವರು ನಗೆಚಟಾಕಿ ಹಾರಿಸಿದರು.

ಇದನ್ನೂ ಓದಿ:

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

‘ಗಾಳಿಪಟ 2’ ರಿಲೀಸ್​ಗೂ ಮುನ್ನ ಯೋಗರಾಜ್​ ಹೊಸ ಚಿತ್ರ ಶುರು; ‘ಗರಡಿ’ಯಲ್ಲಿ ಬಿ.ಸಿ. ಪಾಟೀಲ್​, ಯಶಸ್​ ಸೂರ್ಯ

Click on your DTH Provider to Add TV9 Kannada