2 ಮುಖ್ಯ ವಿಚಾರವನ್ನು ಪುಷ್ಕರ್​ ಜತೆ ಚರ್ಚಿಸಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದ ಪುನೀತ್​

‘ಅವತಾರ ಪುರುಷ’ ಸಿನಿಮಾ ಡಿ.10ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ನೀಡಿದ ಕೊಡುಗೆ ಅಪಾರ. ಅವರಿಂದಾಗಿ ಎಷ್ಟೋ ಹೊಸ ಪ್ರತಿಭಾವಂತರು ನೆಲೆ ಕಂಡುಕೊಂಡಿದ್ದಾರೆ. ಎಲ್ಲರ ಜೊತೆಗೂ ಪುನೀತ್​ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು. ಸಿನಿಮಾಗೆ ಸಂಬಂಧಿಸಿದಂತೆ ಉತ್ತಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಚಂದನವನದಲ್ಲಿ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಿಸಿ ಗುರುತಿಸಿಕೊಂಡಿರುವ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ (Pushkar Mallikarjunaiah) ಅವರ ಜೊತೆಗೂ 2 ಮುಖ್ಯ ವಿಚಾರಗಳ ಬಗ್ಗೆ ಅಪ್ಪು ಚರ್ಚೆ ಮಾಡಿದ್ದರು. ‘ಪಿಆರ್​ಕೆ ಆಡಿಯೋ’ (PRK Audio) ಆರಂಭಿಸುದಕ್ಕೂ ಮುನ್ನ ಒಂದಷ್ಟು ಅಂಶಗಳ ಬಗ್ಗೆ ಅವರು ಸಲಹೆ ಪಡೆದುಕೊಂಡಿದ್ದರು. ಅಮೇಜಾನ್​ ಪ್ರೈಂ ವಿಡಿಯೋಗೆ ತಮ್ಮ ಸಿನಿಮಾಗಳನ್ನು ನೀಡುವ ವಿಚಾರದಲ್ಲೂ ಪುಷ್ಕರ್​ ಜೊತೆಗೆ ಪುನೀತ್​ ಚರ್ಚಿಸಿದ್ದರು. ಈ ಬಗ್ಗೆ ‘ಅವತಾರ ಪುರುಷ’ (Avatara Purusha Movie) ಚಿತ್ರದ ಸುದ್ದಿಗೋಷ್ಠಿಯಲ್ಲಿ ಪುಷ್ಕರ್​ ಮಾಹಿತಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ:

‘ಚುಟು ಚುಟು’ ಜೋಡಿಯ ‘ಅವತಾರ ಪುರುಷ’; ಸುನಿ-ಪುಷ್ಕರ್​ ಕಟ್ಟಿಕೊಟ್ಟ ಚಿತ್ರದಲ್ಲಿ ಏನೆಲ್ಲ ಇರಲಿದೆ?

‘ಅವತಾರ ಪುರುಷ’ದಲ್ಲಿ ಶರಣ್​ಗೆ ಎಷ್ಟು ಅವತಾರ? ಅವರು ಹೇಳಿದ್ದು ಇಷ್ಟು

Click on your DTH Provider to Add TV9 Kannada