Temple Tour: ರೈತರ ಕೋರಿಕೆ ನೆರವೇರಿಸುವ ವೀರಭದ್ರೇಶ್ವರ ಸ್ವಾಮಿ
ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡರೆ ಅವರ ಹರಕೆಗಳು, ನೂರಕ್ಕೆ ನೂರರಷ್ಟು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಗದಗ ನಗರದ ಉಸಗಿನಕಟ್ಟಿ ಪ್ರದೇಶದಲ್ಲಿ ಶ್ರೀ ವೀರಭದ್ರೇಶ್ವರ ದೇವರು ನೆಲೆ ನಿಂತಿದ್ದಾನೆ.
ವೀರಶೈವ ಲಿಂಗಾಯತರ ಆರಾಧ್ಯ ದೇವರು ಶ್ರೀ ವೀರಭದ್ರೇಶ್ವರ ದೇವರು. ವೀರಭದ್ರೇಶ್ವರ ದೇವರು ಹಾಗೂ ದೇವಸ್ಥಾನ ನಾಡಿನ ಮೂಲೆ ಮೂಲೆಯಲ್ಲಿವೆ. ಆದರೆ ಈ ದೇವಾಲಯ ಎಲ್ಲಾ ದೇವಾಲಯಕ್ಕಿಂತ ವಿಭಿನ್ನವಾಗಿದೆ. ಹೌದು ಬಹುತೇಕ ದೇವಾಲಯದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ ಈ ಅಪರೂಪದ ದೇವಸ್ಥಾನದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಮೇಲೆಯೇ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಹಾಗಾಗಿ ಈ ವೀರಭದ್ರೇಶ್ವರ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡರೆ ಅವರ ಹರಕೆಗಳು, ನೂರಕ್ಕೆ ನೂರರಷ್ಟು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಗದಗ ನಗರದ ಉಸಗಿನಕಟ್ಟಿ ಪ್ರದೇಶದಲ್ಲಿ ಶ್ರೀ ವೀರಭದ್ರೇಶ್ವರ ದೇವರು ನೆಲೆ ನಿಂತಿದ್ದಾನೆ. ಸುಮಾರು 150 ವರ್ಷಗಳ ಹಿಂದೆ ವೀರಭದ್ರೇಶ್ವರ ಫಕ್ಕಿರಮ್ಮ ಪತಿ ಪತ್ರಯ್ಯ ದಂಪತಿಗೆ ಕನಸಿ