ಸಂಬಂಧವೊಂದು ಮುರಿದುಬಿದ್ದಾಗ ಅದಕ್ಕಾಗಿ ಪರಿತಪಿಸುವುದರಲ್ಲಿ ಅರ್ಥವಿಲ್ಲ, ಅದರಿಂದ ಪಾಠ ಕಲಿತು ಮುಂದೆ ಸಾಗಬೇಕು: ಡಾ ಸೌಜನ್ಯ ವಶಿಷ್ಠ
ಗಂಡು ಹೆಣ್ಣಿನ ಸಂಬಂಧದಲ್ಲಿ ಪರಸ್ಪರ ಅಸೂಯೆ, ಮತ್ಸರ ಹುಟ್ಟಿದರೆ ಅದು ಹದಗೆಡಲಾರಂಭಿಸುತ್ತದೆ. ಸಂಬಂಧದಲ್ಲಿ ಒಮ್ಮೆ ಬಿರುಕು ಮೂಡಿದರೆ, ಅಲ್ಲಿ ಅನುಮಾನ, ಸಂಶಯಗಳು ಹೆಚ್ಚುತ್ತವೆ ಎಂದು ಡಾ ಸೌಜನ್ಯ ಹೇಳುತ್ತಾರೆ.
ಸಂಬಂಧಗಳಲ್ಲಿ ಬಿರುಕು ಮೂಡಿ ಅವು ಮುರಿದು ಹೋಗುವುದು ನಮ್ಮಗಳ ಬದುಕಿನಲ್ಲಿ ನಡೆಯುವ ಸಾಮಾನ್ಯ ಸಂಗತಿ. ಸಂಬಂಧ ಯಾವುದೇ ಅಗಿರಲಿ, ಅದು ಮುರಿದುಬಿದ್ದಾಗ ನಾವು ಬಹಳ ನೊಂದುಕೊಳ್ಳುತ್ತೇವೆ, ಹರ್ಟ್ ಆಗುತ್ತೇವೆ. ಅದು ಪ್ರೇಮ ಸಂಬಂಧವಾಗಿದ್ದರೆ, ಜೀವನ ಸಾಕು ಅನಿಸುವಷ್ಟು ಹತಾಷೆಗೊಳ್ಳುತ್ತೇವೆ. ಆದರೆ ಬದುಕು ಅನ್ನೋದು ನಿಂತ ನೀರಲ್ಲ, ಅದು ಮುಂದಕ್ಕೆ ಸಾಗಬೇಕು, ಮುರಿದಬಿದ್ದ ಒಂದು ಸಂಬಂಧ ನಮಗೆ ಒಂದು ಪಾಠವನ್ನು ಕಲಿಸುತ್ತದೆ, ಅದರೊಂದಿಗೆ ನಮ್ಮ ಪಯಣ ಮುಂದುವರಿಸಬೇಕು ಅಂತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ನಾವು ಹೆಚ್ಚು ನೊಂದುಕೊಳ್ಳೋದು ಯಾಕೆ ಮತ್ತು ಆ ನೋವನ್ನು ಹೇಗೆ ಹಿಮ್ಮೆಟ್ಟಿಸಬೇಕು ಅನ್ನೋದನ್ನು ಅವರು ಹೇಳುತ್ತಾರೆ.
ನಾವು ಇಷ್ಟಪಟ್ಟವರೊಂದಿಗಿನ ಸಂಬಂಧ ಬ್ರೇಕಪ್ ಆದಾಗ ಅವರೊಂದಿಗೆ ನಾವು ಕಟ್ಟಿಕೊಂಡ ಭವಿಷ್ಯದ ಕನಸುಗಳೆಲ್ಲ ಮುರಿದುಬೀಳುತ್ತವೆ. ಹಾಗಾಗೇ ನಾವು ಹೆಚ್ಚು ನೊಂದುಕೊಳ್ಳುವುದು ಅಂತ ಸೌಜನ್ಯ ಹೇಳುತ್ತಾರೆ. ನಮ್ಮ ಪ್ರತಿಯೊಂದು ಸಂಬಂಧಕ್ಕೆ ಒಂದು ಕಾರ್ಮಿಕ್ ಕನೆಕ್ಷನ್ ಇರುತ್ತದೆ ಎಂದು ಅವರು ಹೇಳುತ್ತಾರೆ.
ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಸಂಬಂಧಗಳಿಗೆ ನಾವೇ ಹೆಸರುಗಳನ್ನು ಕೊಟ್ಟಿಕೊಳ್ಳೋದು. ಸಂಬಂಧಗಳಲ್ಲಿ ಪ್ರಗತಿ ಇಲ್ಲದೆ ಹೋದರೆ, ಆ ಸಂಬಂಧ ಹೆಚ್ಚು ದಿನ ಬಾಳಲಾರದು. ಗಂಡು ಹೆಣ್ಣಿನ ಸಂಬಂಧದಲ್ಲಿ ಪರಸ್ಪರ ಅಸೂಯೆ, ಮತ್ಸರ ಹುಟ್ಟಿದರೆ ಅದು ಹದಗೆಡಲಾರಂಭಿಸುತ್ತದೆ. ಸಂಬಂಧದಲ್ಲಿ ಒಮ್ಮೆ ಬಿರುಕು ಮೂಡಿದರೆ, ಅಲ್ಲಿ ಅನುಮಾನ, ಸಂಶಯಗಳು ಹೆಚ್ಚುತ್ತವೆ ಎಂದು ಡಾ ಸೌಜನ್ಯ ಹೇಳುತ್ತಾರೆ.
ಸಂಬಂಧ ಮುರಿದು ಬಿದ್ದಾಗ ಅದರ ಬಗ್ಗೆ ಯೋಚಿಸುತ್ತಾ ಕೊರಗುವುದರಲ್ಲಿ ಅರ್ಥವಿಲ್ಲ. ಮುರಿದ ಸಂಬಂಧ ನಮಗೊಂದು ಪಾಠವೆಂದು ನಾವು ಭಾವಿಸಬೇಕು. ಆ ಸಂಬಂಧ ಬಗ್ಗೆ ನಾವಿಟ್ಟುಕೊಂಡಿದ್ದ ಭ್ರಮೆಗಳಿಂದ ಆಚೆ ಬರಬೇಕು ಎಂದು ಸೌಜನ್ಯ ಹೇಳುತ್ತಾರೆ. ನಮ್ಮನ್ನು ನಾವು ಸಮಾಧಾನಪಡಿಸಿಕೊಳ್ಳಬೇಕು.
ಸೃಷ್ಟಿಕರ್ತ ಪ್ರತಿಯೊಬ್ಬರಿಗೆ ಒಬ್ಬ ಸಂಗಾತಿಯನ್ನು ಇಟ್ಟೇ ಇಟ್ಟಿರುತ್ತಾನೆ. ಸಂಬಂಧಗಳಲ್ಲಿ ಪ್ರೀತಿ ಸ್ವಾಭಾವಿಕವಾಗಿ ಹುಟ್ಟಬೇಕು, ಅದನ್ನು ಬಲವಂತವಾಗಿ ಪಡೆಯುವ ಪ್ರಯತ್ನ ಮಾಡಿದರೆ, ಹಳಿ ತಪ್ಪುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ.
ಇದನ್ನೂ ಓದಿ: ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್ಟಿಆರ್ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ