ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್​ಟಿಆರ್​ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ

ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್​ಟಿಆರ್​ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ

TV9 Web
| Updated By: ಮದನ್​ ಕುಮಾರ್​

Updated on: Nov 21, 2021 | 8:41 AM

Jr NTR: ‘ಮಹಿಳೆಯರ ವೈಯಕ್ತಿಕ ಬದುಕಿನ ಬಗ್ಗೆ ನಾವು ಕೆಟ್ಟ ಮಾತುಗಳನ್ನು ಆಡಿದರೆ ಅಲ್ಲಿಂದಲೇ ಅರಾಜಕತೆ ಆರಂಭ ಆಗುತ್ತದೆ’ ಎಂದು ಜ್ಯೂ. ಎನ್​ಟಿಆರ್ ಹೇಳಿದ್ದಾರೆ. ಅವರ ಈ ವಿಡಿಯೋ ವೈರಲ್​ ಆಗುತ್ತಿದೆ.

‘ತೆಲುಗು ದೇಶಂ ಪಾರ್ಟಿ’ ಮುಖಂಡ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಬಗ್ಗೆ ಆಂಧ್ರದ ರಾಜಕಾರಣಿಗಳು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಇದರ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಹೇಳನಕಾರಿ ಹೇಳಿಕೆಗಳನ್ನು ಸೆಲೆಬ್ರಿಟಿಗಳು ಕೂಡ ಖಂಡಿಸುತ್ತಿದ್ದಾರೆ. ಈ ಬಗ್ಗೆ ‘ಆರ್​ಆರ್​ಆರ್​’ ಸಿನಿಮಾ ನಟ ಜ್ಯೂ. ಎನ್​ಟಿಆರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ರಾಜಕಾರಣದಲ್ಲಿ ಟೀಕೆಗಳು ಸಹಜ. ಆದರೆ ಆದರೆ ಆ ಟೀಕೆಗಳು ಜನರ ಸಮಸ್ಯೆ ಪರಿಹರಿಸುವುದಕ್ಕೆ ಇರಬೇಕೇ ಹೊರತು ಯಾರೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಇರಬಾರದು. ಮಹಿಳೆಯರ ವೈಯಕ್ತಿಕ ಬದುಕಿನ ಬಗ್ಗೆ ನಾವು ಕೆಟ್ಟ ಮಾತುಗಳನ್ನು ಆಡಿದರೆ ಅಲ್ಲಿಂದಲೇ ಅರಾಜಕತೆ ಆರಂಭ ಆಗುತ್ತದೆ. ನಾನು ಭವನೇಶ್ವರಿ ಅವರ ಕುಟುಂಬಕ್ಕೆ ಸೇರಿದವನು ಅಂತ ಈ ಪ್ರತಿಕ್ರಿಯೆ ನೀಡುತ್ತಿಲ್ಲ. ಒಬ್ಬ ಮಗನಾಗಿ, ತಂದೆಯಾಗಿ, ಪತಿಯಾಗಿ ಮತ್ತು ಈ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಜ್ಯೂ. ಎನ್​ಟಿಆರ್​.

ಇದನ್ನೂ ಓದಿ:

ಆರ್​ಆರ್​ಆರ್​ ಚಿತ್ರದ ಪ್ರಮೋಷನ್​ಗಾಗಿ ದೊಡ್ಡ ತ್ಯಾಗಕ್ಕೆ ಸಿದ್ಧರಾದ ಜ್ಯೂ.ಎನ್​ಟಿಆರ್​

ಶಿವರಾಜ್​ಕುಮಾರ್​ ಅವರನ್ನು ಬಿಗಿದಪ್ಪಿ ಅತ್ತ ಜ್ಯೂ.ಎನ್​ಟಿಆರ್​