ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ನೋವು ಇನ್ನು ಕಡಿಮೆಯಾಗಿಲ್ಲ. ಸಮಾಧಿ ಮುಂದೆ ಗಣ್ಯರು, ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಸಾವಿರಾರು ಜನರಿಗೆ ಆಸರೆಯಾಗಿದ್ದ ಅಪ್ಪು ಇನ್ನೂ ಇಲ್ಲ ಅಂತ ನೆನೆಸಿಕೊಳ್ಳುವುದೇ ಮನಸ್ಸಿಗೆ ದೊಡ್ಡ ನೋವು. ಕರುನಾಡಿನ ಹಲವೆಡೆ ಪವರ್ ಸ್ಟಾರ್ ಪುನೀtತ್ಗೆ ಒಂದೊಂದು ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಪುನೀತ್ ಹೆಸರಲ್ಲಿ ಅಭಿಮಾನಿಗಳು ಅನ್ನದಾನ ಮಾಡಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಅನಾಥಾಶ್ರಮವೊಂದರಲ್ಲಿ ಅನ್ನದಾನ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮಹದೇವ ಕಲ್ಯಾಣಪ್ಪ ತಿಮ್ಮಲಾಪುರ್ ಎನ್ನುವವರು ಅನ್ನದಾನ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಅಹ್ಮದಾಬಾದ್ ನಗರದ ಆಶ್ರಮದ ನೂರಾರು ಅನಾಥ ಮಕ್ಕಳು ಪ್ರತಿದಿನ ಪುನೀತ್ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಕನ್ನಡದ ಮೇರು ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.