ಹಾವೇರಿಯಲ್ಲಿ ಕಾಂತೇಶನಾಗಿ ನಿಂತ ಆಂಜನೇಯ ದೇವಾಲಯದ ವಿಶೇಷತೆಗಳನ್ನು ನೋಡಿ
ಸೂರ್ಯ ಸಾಲಿಗ್ರಾಮ ದರ್ಶನ ಮಾಡಿದ್ರೆ ಭಕ್ತರಿಗೆ ಒಳ್ಳೆಯದಾಗುತ್ತದೆ ಅಂಬ ನಂಬಿಕೆ ಕೂಡ ಭಕ್ತರಲ್ಲಿದೆ. ಪ್ರತಿ ದಿನ ಬೆಳಿಗ್ಗೆ ಆರು ಗಂಟೆಯಿಂದ ಕದರಮಂಡಲಗಿ ಗ್ರಾಮದ ಕಾಂತೇಶನ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನಡೆಯುತ್ತವೆ.
ಕದರಮಂಡಲಗಿ ಆಂಜನೇಯ ದೇವಸ್ಥಾನಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನದಲ್ಲಿರುವ ಆಂಜನೇಯನಿಗೆ ಕಾಂತೇಶ ಎಂತಲೂ ಕರೆಯುತ್ತಾರೆ. ಬಹುತೇಕ ಆಂಜನೇಯ ಮೂರ್ತಿಗಳು ಎಡ ಮತ್ತು ಬಲಭಾಗಕ್ಕೆ ಹೊರಳಿಕೊಂಡಿದ್ದರೆ ಈ ದೇವಸ್ಥಾನದಲ್ಲಿರುವ ಮೂರ್ತಿ ಮಾತ್ರ ಎದುರು ಮುಖವಾಗಿದೆ. ಹೀಗಾಗಿ ಈ ದೇವಸ್ಥಾನ ವಿಶೇಷವಾಗಿದೆ. ದೇವಸ್ಥಾನದಲ್ಲಿನ ಕಾಂತೇಶನ ಮೂರ್ತಿ ಪಾಂಡವರ ಕಾಲದಲ್ಲಿ ಪ್ರತಿಷ್ಠಾಪನೆ ಆಗಿದೆ ಅನ್ನೋ ಐತಿಹ್ಯವಿದೆ. ಪಾಂಡವರ ಕೊನೆಯ ಅರಸು ಜಯಮೇಜಯ ರಾಜ ಈ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾನೆ. ರಾಮಾನುಜಾಚಾರ್ಯರು ಕಾಂತೇಶನ ಕಣ್ಣಲ್ಲಿ ಸೂರ್ಯ ಸಾಲಿಗ್ರಾಮ ಇಟ್ಟಿದ್ದಾರೆ. ಸೂರ್ಯ ಸಾಲಿಗ್ರಾಮ ದರ್ಶನ ಮಾಡಿದ್ರೆ ಭಕ್ತರಿಗೆ ಒಳ್ಳೆಯದಾಗುತ್ತದೆ ಅಂಬ ನಂಬಿಕೆ ಕೂಡ ಭಕ್ತರಲ್ಲಿದೆ. ಪ್ರತಿ ದಿನ ಬೆಳಿಗ್ಗೆ ಆರು ಗಂಟೆಯಿಂದ ಕದರಮಂಡಲಗಿ ಗ್ರಾಮದ ಕಾಂತೇಶನ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನಡೆಯುತ್ತವೆ. ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಅಭಿಷೇಕ ನಡೆಯುತ್ತವೆ. ಪ್ರತಿ ಶನಿವಾರ, ಅಮವಾಸ್ಯೆ ಮತ್ತು ಹುಣ್ಣಿಮೆ ಸಂದರ್ಭಗಳಲ್ಲಿ ದೇವಸ್ಥಾನದಲ್ಲಿ ಕಾಂತೇಶನಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
Published on: Nov 22, 2021 07:58 AM
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ್ಯಾಪಿಡೋ ಆ್ಯಪ್ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
