GGVV: ಪ್ರೇಕ್ಷಕರ ಕಾತರಕ್ಕೆ ಸಿಕ್ತು ಉತ್ತರ; ‘ಗರುಡ ಗಮನ ವೃಷಭ ವಾಹನ’ ಓಟಿಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್

GGVV: ಪ್ರೇಕ್ಷಕರ ಕಾತರಕ್ಕೆ ಸಿಕ್ತು ಉತ್ತರ; ‘ಗರುಡ ಗಮನ ವೃಷಭ ವಾಹನ’ ಓಟಿಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್
‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ

Garuda Gamana Vrishabha Vahana: 2021ರಲ್ಲಿ ಕನ್ನಡ ಪ್ರೇಕ್ಷಕರ ಮನಗೆದ್ದ ಚಿತ್ರಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರವೂ ಒಂದು. ಇದೀಗ ಚಿತ್ರದ ಓಟಿಟಿ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ.

TV9kannada Web Team

| Edited By: shivaprasad.hs

Jan 02, 2022 | 12:41 PM

2021ರಲ್ಲಿ ಸ್ಯಾಂಡಲ್​ವುಡ್​​ನಲ್ಲಿ ಗಮನ ಸೆಳೆದು, ಪ್ರೇಕ್ಷಕರ ಮನಗೆದ್ದ ಚಿತ್ರಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರವೂ ಒಂದು. ‘ಒಂದು ಮೊಟ್ಟೆಯ ಕಥೆ’ಯಂತಹ ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್ ನಂತರ ಮಾಸ್ ಚಿತ್ರವನ್ನು ಕನ್ನಡಿಗರ ಮುಂದಿಟ್ಟ ರಾಜ್ ಬಿ ಶೆಟ್ಟಿ ಪ್ರತಿಭೆಗೆ ನಾಡಿನ ವೀಕ್ಷಕರು ಜೈ ಅಂದರು. ನವೆಂಬರ್ 19ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಕಾಂಬಿನೇಷನ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿತು. ಇತ್ತೀಚೆಗೆ ಚಿತ್ರದ ಓಟಿಟಿ ಹಕ್ಕುಗಳನ್ನು ಜೀ5 ಸಂಸ್ಥೆ ಪಡೆದುಕೊಂಡಿದ್ದ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿತ್ತು. ಅಲ್ಲದೇ ಸದ್ಯದಲ್ಲೇ ಚಿತ್ರ ಓಟಿಟಿಯಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ಬಿಡುಗಡೆ ದಿನಾಂಕ ಘೋಷಣೆಯಾಗಿರಲಿಲ್ಲ. ಇದೀಗ ಚಿತ್ರದ ಬಿಡುಗಡೆ ದಿನಾಂಕ ಖಚಿತವಾಗಿದೆ.

ಸಂಕ್ರಾಂತಿ ಹಬ್ಬದ ಸಮಯದಲ್ಲಿ ‘ಗರುಡ ಗಮನ ವೃಷಭ ವಾಹನ’ ಜನರ ಮುಂದೆ ಕಾಣಿಸಿಕೊಳ್ಳಲಿದ್ದಾನೆ. ಹೌದು. ಜನವರಿ 15 ರಂದು ಚಿತ್ರ ಜೀ5 ನಲ್ಲಿ ತೆರೆಕಾಣಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ರಿಷಬ್ ಶೆಟ್ಟಿ ಈ ಕುರಿತ ಮಾಹಿತಿಯಿರುವ ಟ್ವೀಟ್​ಗಳನ್ನು ರೀಟ್ವೀಟ್ ಮಾಡಿ ದಿನಾಂಕ ಖಚಿತಪಡಿಸಿದ್ದಾರೆ.

ರಿಷಬ್ ಶೆಟ್ಟಿ ಹಂಚಿಕೊಂಡ ಟ್ವೀಟ್​ಗಳು ಇಲ್ಲಿವೆ:

‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಾಜ್​ ಬಿ. ಶೆಟ್ಟಿ, ರಿಷಬ್​ ಶೆಟ್ಟಿ ಅವರೊಂದಿಗೆ ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಕಾಫಿ ಗ್ಯಾಂಗ್​ ಸ್ಡುಡಿಯೋ, ಲೈಟರ್​ ಬುದ್ಧ ಫಿಲ್ಮ್ಸ್​ ಬ್ಯಾನರ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರ ತಾಂತ್ರಿಕವಾಗಿಯೂ ನಾಡಿನ ಗಮನ ಸೆಳೆದಿತ್ತು. ಪ್ರವೀಣ್​ ಶ್ರಿಯಾನ್ ಛಾಯಾಗ್ರಹಣ, ಮಿಥುನ್​ ಮುಕುಂದನ್​ ಸಂಗೀತ ಹಾಗೂ ಹಿನ್ನೆಲೆ ಸಂಗೀತಕ್ಕೆ ದೊಡ್ಡ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ:

Vicky kaushal: ಇಂದೋರ್​ನ ಗಲ್ಲಿಗಳಲ್ಲಿ ಸಾರಾ ಜತೆ ಸುತ್ತಾಡಿದ ವಿಕ್ಕಿ ಕೌಶಲ್​ಗೆ ಎದುರಾಯ್ತು ಸಂಕಷ್ಟ! ಏನಿದು ಪ್ರಕರಣ?

ಹೊಸ ವರ್ಷದಂದು ಗಲ್ಲಾ ಪೆಟ್ಟಿಗೆಯಲ್ಲಿ ಭರಪೂರ ಬೆಳೆ ತೆಗೆದ ‘ಪುಷ್ಪ’, ‘83’; ಚಿತ್ರಗಳ ಒಟ್ಟಾರೆ ಕಲೆಕ್ಷನ್ ಎಷ್ಟು?

Follow us on

Related Stories

Most Read Stories

Click on your DTH Provider to Add TV9 Kannada