AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vicky kaushal: ಇಂದೋರ್​ನ ಗಲ್ಲಿಗಳಲ್ಲಿ ಸಾರಾ ಜತೆ ಸುತ್ತಾಡಿದ ವಿಕ್ಕಿ ಕೌಶಲ್​ಗೆ ಎದುರಾಯ್ತು ಸಂಕಷ್ಟ! ಏನಿದು ಪ್ರಕರಣ?

Sara Ali Khan: ವಿಕ್ಕಿ ಕೌಶಲ್​ಗೆ ಸಂಕಷ್ಟ ಎದುರಾಗಿದೆ. ಇಂದೋರ್​ನಲ್ಲಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಏನಿದು ಸಮಾಚಾರ? ಇಲ್ಲಿದೆ ಮಾಹಿತಿ.

Vicky kaushal: ಇಂದೋರ್​ನ ಗಲ್ಲಿಗಳಲ್ಲಿ ಸಾರಾ ಜತೆ ಸುತ್ತಾಡಿದ ವಿಕ್ಕಿ ಕೌಶಲ್​ಗೆ ಎದುರಾಯ್ತು ಸಂಕಷ್ಟ! ಏನಿದು ಪ್ರಕರಣ?
ಇಂದೋರ್​ನಲ್ಲಿ ಬೈಕ್ ಸವಾರಿ ಮಾಡುತ್ತಿರುವ ವಿಕ್ಕಿ- ಸಾರಾ ಅಲಿ ಖಾನ್
TV9 Web
| Updated By: shivaprasad.hs|

Updated on:Jan 02, 2022 | 11:36 AM

Share

ಬಾಲಿವುಡ್​ ನಟ ವಿಕ್ಕಿ ಕೌಶಲ್ ಸಂಭಾವಿತ ನಟ ಎಂದು ಅಭಿಮಾನಿಗಳಿಂದ ಗುರುತಿಸಿಕೊಳ್ಳುತ್ತಾರೆ. ಹೊಸ ವರ್ಷವನ್ನು ಆಚರಿಸಲು ಅವರು ಇತ್ತೀಚೆಗೆ ಆಗಮಿಸಿ, ನಿನ್ನೆ ಮತ್ತೆ ಚಿತ್ರೀಕರಣಕ್ಕೆ ವಾಪಸ್ಸಾಗಿದ್ದರು. ಇದರ ಬೆನ್ನಲ್ಲೇ ಅವರಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. ಇಂದೋರ್​ನಲ್ಲಿ ವಿಕ್ಕಿ ಕೌಶಲ್​ ಅಕ್ರಮವಾಗಿ ತಮ್ಮ ನಂಬರ್ ಪ್ಲೇಟ್ ನಕಲಿಸಿದ್ದಾರೆ ಎಂದು ವ್ಯಕ್ತಿಯೋರ್ವರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ. ಮೋಟಾರ್ ಸೈಕಲ್ ಆಕ್ಟ್​​ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಕ್ಕಿ ಕೌಶಲ್ ಇಂದೋರ್​ನ ಗಲ್ಲಿಗಳಲ್ಲಿ ಸಹ ನಟಿ ಸಾರಾ ಅಲಿ ಖಾನ್ ಜತೆ ಬೈಕ್​ನಲ್ಲಿ ಸುತ್ತಾಡಿದ್ದರು. ಇದು ಚಿತ್ರೀಕರಣದ ಉದ್ದೇಶದಿಂದ ಮಾಡಿದ್ದಾಗಿತ್ತು. ಆದರೆ ಈ ವೇಳೆ ಚಿತ್ರತಂಡ ಎಡವಟ್ಟು ಮಾಡಿಕೊಂಡಿದೆ.

ಪ್ರಕರಣವೇನು? ಇತ್ತೀಚೆಗೆ ವಿಕ್ಕಿ ಕೌಶಲ್ ಹಾಗೂ ನಟಿ ಸಾರಾ ಅಲಿ ಖಾನ್ ಡಿ-ಗ್ಲಾಮ್ ಲುಕ್​ನಲ್ಲಿ ಬೈಕ್ ಸವಾರಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇಂದೋರ್​ನ ಬೀದಿಗಳಲ್ಲಿ ಸಾಮಾನ್ಯ ಬೈಕ್​ನಲ್ಲಿ ಈ ನಟರು ಸಂಚರಿಸಿದ್ದರು. ಆ ಸಂದರ್ಭದ ಚಿತ್ರಗಳು ವೈರಲ್ ಆಗಿದ್ದವು. ಆದರೆ ಇದೀಗ ಜೈ ಸಿಂಗ್ ಯಾದವ್ ಎಂಬ ವ್ಯಕ್ತಿಯೋರ್ವರು ಈ ಘಟನೆಯ ಕುರಿತು ಪೊಲೀಸ್​ಗೆ ದೂರು ನೀಡಿದ್ದಾರೆ.

ಜೈ ಸಿಂಗ್ ಯಾದವ್ ದೂರೇನು? ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಸಂಚರಿಸುತ್ತಿದ್ದ ಗಾಡಿಯ ನಂಬರ್ ಪ್ಲೇಟ್ ತಮ್ಮ ಗಾಡಿಯದ್ದಾಗಿದೆ ಎಂದು ದೂರುದಾರ ಜೈ ಸಿಂಗ್ ಯಾದವ್ ಹೇಳಿದ್ದಾರೆ. ಚಿತ್ರತಂಡಕ್ಕೆ ಈ ಕುರಿತು ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೊಬ್ಬರ ನಂಬರ್ ಪ್ಲೇಟ್​ ಅನ್ನು ಅನುಮತಿಯಿಲ್ಲದೇ ಅಕ್ರಮವಾಗಿ ಬಳಸುವುದು ತಪ್ಪು ಎಂದು ಯಾದವ್ ಹೇಳಿದ್ದಾರೆ. ಅಲ್ಲದೇ ಈ ಕುರಿತು ಅವರು ಪೂರಕ ದಾಖಲೆಗಳನ್ನೂ ಒದಗಿಸಿದ್ದಾರೆ.

ಈ ಕುರಿತು ಪೊಲೀಸರು ಪ್ರತಿಕ್ರಿಯಿಸಿದ್ದು, ದೂರು ದಾಖಲಾಗಿದ್ದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಮೊಟಾರ್ ಸೈಕಲ್ ಕಾಯ್ದೆಯ ಅನ್ವಯ ತನಿಖೆ ಮಾಡಲಾಗುವುದು. ಚಿತ್ರತಂಡ ಇಂದೋರ್​ನಲ್ಲಿಯೇ ಇದ್ದರೆ ಅವರನ್ನು ಸಂಪರ್ಕಿಸಿ ವಿಚಾರಣೆ ನಡೆಸಲಾಗುವುದು ಎಂದು ಬಂಗಾಂಗದ ಎಸ್​ಐ ರಾಜೇಂದ್ರ ಸೋನಿ ಎಎನ್​ಐಗೆ ತಿಳಿಸಿದ್ದಾರೆ.

ಪ್ರಕರಣದ ಕುರಿತು ಎಎನ್​ಐ ಟ್ವೀಟ್ ಇಲ್ಲಿದೆ:

ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಈರ್ವರೂ ಜತೆಯಾಗಿ ನಟಿಸುತ್ತಿರುವ ಚಿತ್ರವೊಂದರ ಚಿತ್ರೀಕರಣದ ದೃಶ್ಯದಲ್ಲಿ ಕಾಣಿಸಿಕೊಳ್ಳುವಾಗ ಆ ಬೈಕ್ ಬಳಸಿದ್ದರು. ಆದರೆ ಈರ್ವರೂ ಜತೆಯಾಗಿ ಓಡಾಡಿದ ಚಿತ್ರಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದ್ದವು.

ಇದನ್ನೂ ಓದಿ:

Katrina Kaif: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ; ಏನಿದು ಸಮಾಚಾರ? ವಿಡಿಯೋ ನೋಡಿ

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

Published On - 9:59 am, Sun, 2 January 22

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಅರ್ಜೆಂಟೀನಾ ಭೇಟಿ ಫಲಪ್ರದವಾಗಿದೆ: ಪ್ರಧಾನಿ ಮೋದಿ
ಅರ್ಜೆಂಟೀನಾ ಭೇಟಿ ಫಲಪ್ರದವಾಗಿದೆ: ಪ್ರಧಾನಿ ಮೋದಿ