ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ
ಶಮಿತಾ ಶೆಟ್ಟಿ, ಸಲ್ಮಾನ್​ ಖಾನ್

Weekend Ka Vaar: ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ ಸ್ಪರ್ಧಿಗಳ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಉದಾಹರಣೆ ಸಾಕಷ್ಟಿದೆ. ಆದರೆ ಅವರು ಶಮಿತಾ ಶೆಟ್ಟಿ ಮೇಲೆ ಈ ರೀತಿ ಗರಂ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

TV9kannada Web Team

| Edited By: Madan Kumar

Jan 02, 2022 | 7:30 AM

ಹಿಂದಿ ಬಿಗ್​ ಬಾಸ್​ 15ನೇ ಸೀಸನ್​ನಲ್ಲಿ ಇಂಟರೆಸ್ಟಿಂಗ್ ಘಟನೆಗಳು ನಡೆಯುತ್ತಿವೆ. ಇನ್ನೇನು ಶೀಘ್ರದಲ್ಲೇ ಫಿನಾಲೆ ಬರುತ್ತಿದೆ. ಎಂದಿನಂತೆ ಸಲ್ಮಾನ್​ ಖಾನ್​ (Salman Khan) ಅವರು ಅತ್ಯಾಕರ್ಷಕವಾಗಿ ನಿರೂಪಣೆ ಮಾಡುತ್ತಿದ್ದಾರೆ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ‘ಹಿಂದಿ ಬಿಗ್​ ಬಾಸ್​ 15’ರಲ್ಲಿ (Bigg Boss 15) ಅವಕಾಶ ಪಡೆದುಕೊಂಡಿದ್ದಾರೆ. ಆ ಪೈಕಿ ನಟಿ ಶಮಿತಾ ಶೆಟ್ಟಿ (Shamita Shetty) ಅನೇಕ ಕಾರಣಗಳಿಂದಾಗಿ ಗಮನ ಸೆಳೆಯುತ್ತಿದ್ದಾರೆ. ಸ್ಟಾರ್​ ಕಲಾವಿದೆ ಶಿಲ್ಪಾ ಶೆಟ್ಟಿಯ (Shilpa Shetty) ಸಹೋದರಿ ಎಂಬ ಕಾರಣಕ್ಕೆ ಶಮಿತಾ ಮೇಲೆ ಪ್ರೇಕ್ಷಕರ ಗಮನ ಕೇಂದ್ರೀಕೃತವಾಗಿದೆ. ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಸ್ಪರ್ಧಿಸಿ ನಂತರ ‘ಬಿಗ್​ ಬಾಸ್​ 15’ಕ್ಕೆ ಎಂಟ್ರಿ ನೀಡುವ ಅವಕಾಶ ಪಡೆದ ಅವರು ಈಗ ಸಲ್ಮಾನ್​ ಖಾನ್​ ಜೊತೆಗೆ ಕಿರಿಕ್​ ಮಾಡಿಕೊಂಡಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಈ ವಾರಾಂತ್ಯದ ಎಪಿಸೋಡ್​ನಲ್ಲಿ ಸಲ್ಮಾನ್​ ಖಾನ್​ ಅವರು ಎಲ್ಲ ಸ್ಪರ್ಧಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಹಲವು ವರ್ಷಗಳಿಂದಲೂ ಸಲ್ಮಾನ್​ ಖಾನ್​ ಅವರು ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಅವರು ನಿರೂಪಣೆ ಮಾಡುತ್ತಾರೆ. ಅದೇ ರೀತಿ ಅವರು ಸ್ಪರ್ಧಿಗಳ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ ಉದಾಹರಣೆ ಕೂಡ ಇದೆ. ಆದರೆ ಅವರು ಶಮಿತಾ ಶೆಟ್ಟಿ ಮೇಲೆ ಈ ರೀತಿ ಗರಂ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಎಷ್ಟರಮಟ್ಟಿಗೆ ಅಂದರೆ, ವಾಗ್ವಾದ ಮಾಡುವ ಭರದಲ್ಲಿ ಅವರು ಅಶ್ಲೀಲ ಪದವನ್ನೂ ಹೇಳಿಬಿಟ್ಟಿದ್ದಾರೆ!

ಈ ವಾರ ಸ್ಪರ್ಧಿಗಳಿಗೆ ಮುಖ್ಯವಾದ ಒಂದು ಟಾಸ್ಕ್​ ನೀಡಲಾಗಿತ್ತು. ಆದರೆ ಅದನ್ನು ಬಿಗ್​ ಬಾಸ್​ ಮನೆಯ ಸದಸ್ಯರು ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ. ಅದರಿಂದ ಸಲ್ಮಾನ್​ ಖಾನ್​ಗೆ ಕೋಪ ಬಂದಿದೆ. ಈ ಕುರಿತು ಮಾತನಾಡುವಾಗ ಶಮಿತಾ ಶೆಟ್ಟಿ ಅವರು ತಮ್ಮ ಧ್ವನಿ ಏರಿಸಿ ಮಾತನಾಡಿದರು. ‘ನೀವು ನನ್ನ ಶ್ರಮವನ್ನು ಪ್ರಶ್ನೆ ಮಾಡುತ್ತಿದ್ದೀರಿ.. ನಾನೆಷ್ಟು ಕಷ್ಟಪಟ್ಟಿದ್ದೇನೆ ಅಂತ ನೀವು ನೋಡಬಹುದು’ ಎಂದು ಸಲ್ಲು ಜೊತೆ ಶಮಿತಾ ಶೆಟ್ಟಿ ಜಗಳ ಶುರು ಮಾಡಿದರು.

View this post on Instagram

A post shared by ColorsTV (@colorstv)

ಇದರಿಂದ ಸಲ್ಮಾನ್​ ಖಾನ್​ ಕೋಪ ನೆತ್ತಿಗೇರಿತು. ವಾದ ಮಾಡಬೇಡಿ ಎಂದು ಸಲ್ಲು ಎಚ್ಚರಿಕೆ ನೀಡಿದರು. ಅದಕ್ಕೆ ಶಮಿತಾ ಬೆಲೆ ಕೊಡಲಿಲ್ಲ. ಮತ್ತೆ ತಮ್ಮ ವಾದವನ್ನು ಮುಂದುವರಿಸಿದರು. ಆಗ ಸಲ್ಮಾನ್​ ಖಾನ್​ ತಾಳ್ಮೆ ಕಳೆದುಕೊಂಡರು. ‘ನೀವು ಕಷ್ಟಪಟ್ಟಿಲ್ಲ ಅಂತ ನಾನು ಹೇಳಿದ್ದೇನಾ? ಪದೇಪದೇ ಹೀಗೇಕೆ ಮಾಡುತ್ತಿದ್ದೀರಿ? ವಾಟ್​ ದ ಫ*** ಶಮಿತಾ’ ಎಂದು ಸಲ್ಮಾನ್​ ಖಾನ್​ ಖಡಕ್​ ಆಗಿ ಉತ್ತರ ನೀಡಿದರು. ಆಗ ಎಲ್ಲರ ಎದುರಲ್ಲಿ ಶಮಿತಾ ಅಳಲು ಪ್ರಾರಂಭಿದರು.

ಇದನ್ನೂ ಓದಿ:

ನನ್ನ ಜೀವನದಲ್ಲಿ ಎಂದಿಗೂ ಹೀಗೆ ಆಗಿರಲಿಲ್ಲ ಎಂದು ಎಲ್ಲರ ಎದುರು ಕಣ್ಣೀರು ಹಾಕಿದ ಶಿಲ್ಪಾ ಶೆಟ್ಟಿ

13 ಕೋಟಿ ರೂ. ಮನೆ, 17 ಲಕ್ಷದ ವಾಚ್​, 3 ಕೋಟಿ ಕಾರು.. ಅಬ್ಬಬ್ಬಾ ಸಲ್ಲುಗೆ ಸಿಕ್ಕ ಬರ್ತ್​ಡೇ ಗಿಫ್ಟ್​ ಇನ್ನೂ ಹಲವು

Follow us on

Related Stories

Most Read Stories

Click on your DTH Provider to Add TV9 Kannada