13 ಕೋಟಿ ರೂ. ಮನೆ, 17 ಲಕ್ಷದ ವಾಚ್​, 3 ಕೋಟಿ ಕಾರು.. ಅಬ್ಬಬ್ಬಾ ಸಲ್ಲುಗೆ ಸಿಕ್ಕ ಬರ್ತ್​ಡೇ ಗಿಫ್ಟ್​ ಇನ್ನೂ ಹಲವು

13 ಕೋಟಿ ರೂ. ಮನೆ, 17 ಲಕ್ಷದ ವಾಚ್​, 3 ಕೋಟಿ ಕಾರು.. ಅಬ್ಬಬ್ಬಾ ಸಲ್ಲುಗೆ ಸಿಕ್ಕ ಬರ್ತ್​ಡೇ ಗಿಫ್ಟ್​ ಇನ್ನೂ ಹಲವು
ಸಲ್ಮಾನ್​ ಖಾನ್

Salman Khan Birthday Gifts: ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ಸಲ್ಮಾನ್​ ಖಾನ್​ ಭರ್ಜರಿ ಸಂಭಾವನೆ ಪಡೆಯುತ್ತಾರೆ. ಅದರ ಜತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆ ಸಿಕ್ಕಿರುವುದು ಅವರ ಹುಟ್ಟುಹಬ್ಬದ ಕಳೆ ಹೆಚ್ಚಿಸಿದೆ.

TV9kannada Web Team

| Edited By: Madan Kumar

Dec 30, 2021 | 1:38 PM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಇರುವ ಸ್ಟಾರ್​ಗಿರಿ ಸಣ್ಣದೇನಲ್ಲ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ರೀತಿ ಅವರು ಅಪಾರ ಸ್ನೇಹಿತರನ್ನೂ ಸಂಪಾದಿಸಿದ್ದಾರೆ. ಇತ್ತೀಚೆಗೆ ಸಲ್ಮಾನ್​ ಖಾನ್​ ಬರ್ತ್​ಡೇ (ಡಿ.27) ಆಚರಿಸಿಕೊಂಡರು. ಆ ಪ್ರಯುಕ್ತ ತಮ್ಮ ಎಲ್ಲ ಗೆಳೆಯರನ್ನು ಕರೆದು ದೊಡ್ಡ ಪಾರ್ಟಿ ನೀಡಿದರು. ಪನ್ವೇಲ್​ ಫಾರ್ಮ್​ಹೌಸ್​ನಲ್ಲಿ ನಡೆದ ಆ ಪಾರ್ಟಿಗೆ ಬಂದವರೆಲ್ಲ ದುಬಾರಿ ಉಡುಗೊರೆಗಳನ್ನು (Birthday Gifts) ನೀಡಿದ್ದಾರೆ. ಕೋಟ್ಯಂತರ ರೂ. ಬೆಲೆ ಬಾಳುವ ಬಂಗಲೆ, ಲಕ್ಷಾಂತರ ರೂಪಾಯಿಯ ವಾಚ್​, ಆಭರಣ ಮುಂತಾದ ಗಿಫ್ಟ್​ ಸಲ್ಲುಗೆ ಸಿಕ್ಕಿದೆ. ಹಾಗಾದರೆ ಈ ಉಡುಗೊರೆಗಳನ್ನು ಕೊಟ್ಟವರು ಯಾರು? ಇಲ್ಲಿದೆ ಪೂರ್ತಿ ವಿವರ..

ಸಲ್ಮಾನ್​ ಖಾನ್​ ಅವರ ತಂದೆ ಸಲೀಮ್​ ಖಾನ್​ ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟನಾಗಿ, ಚಿತ್ರಕಥೆ ಬರಹಗಾರನಾಗಿ, ನಿರ್ಮಾಪಕನಾಗಿ ಅವರು ಕೆಲಸ ಮಾಡಿದ್ದಾರೆ. ಮಗನ ಜನ್ಮದಿನದ ಪ್ರಯಕ್ತ ಅವರು ಬರೋಬ್ಬರಿ 13 ಕೋಟಿ ರೂಪಾಯಿ ಬೆಲೆಬಾಳುವ ಫ್ಲಾಟ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಸಲ್ಲು ಸಹೋದರಿ ಅರ್ಪಿತಾ ಖಾನ್​ ಅವರು 17 ಲಕ್ಷ ರೂ. ಬೆಲೆಯ ವಾಚ್​ ನೀಡಿದ್ದಾರೆ. ಸಹೋದರ ಸೊಹೈಲ್​ ಖಾನ್​ 25 ಲಕ್ಷ ರೂ. ಬೆಲೆಯ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇನ್ನೋರ್ವ ಸಹೋದರ ಅರ್ಬಾಜ್​ ಖಾನ್​ ಅವರು ಆಡಿ ಆರ್​ಎಸ್​ ಕ್ಯೂ8 ಕಾರನ್ನು ನೀಡಿದ್ದು, ಅದರ ಬೆಲೆ ಅಂದಾಜು 3 ಕೋಟಿ ರೂ. ಎನ್ನಲಾಗಿದೆ.

ಅದೇ ರೀತಿ, ಸಲ್ಮಾನ್​ ಖಾನ್​ ಅವರ ಸ್ನೇಹಿತರು ಕೂಡ ಬಗೆಬಗೆಯ ಉಡುಗೊರೆ ನೀಡಿದ್ದಾರೆ ಎಂದು ವರದಿ ಆಗಿದೆ. ಕತ್ರಿನಾ ಕೈಫ್​ 3 ಲಕ್ಷ ರೂ. ಚಿನ್ನದ ಬ್ರೇಸ್ಲೆಟ್​, ಜಾಕ್ವಲಿನ್​ ಫರ್ನಾಂಡಿಸ್​ ಅವರು 12 ಲಕ್ಷ ರೂ. ಬೆಲೆಯ ವಾಚ್​ ನೀಡಿದ್ದಾರೆ. ಸಂಜಯ್​ ದತ್​ ಅವರು 8 ಲಕ್ಷ ರೂ. ಡೈಮಂಡ್​ ಬ್ರೇಸ್ಲೆಟ್​, ಅನಿಲ್​ ಕಪೂರ್​ ಅವರು 27 ಲಕ್ಷ ರೂ. ಬೆಲೆಯ ಲೆದರ್​ ಜಾಕೆಟ್​, ಶಿಲ್ಪಾ ಶೆಟ್ಟಿ 17 ಲಕ್ಷ ರೂಪಾಯಿಯ ಬ್ರೇಸ್ಲೆಟ್​ ಕೊಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಈ ವಿಚಾರಗಳ ಬಗ್ಗೆ ಸಲ್ಮಾನ್​ ಖಾನ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾಗಳಿಂದ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬಿಗ್​ ಬಾಸ್​ ನಿರೂಪಣೆಗಾಗಿಯೂ ಅವರಿಗೆ ಕೈ ತುಂಬ ಹಣ ಸಿಗುತ್ತದೆ. ಜಾಹೀರಾತುಗಳಲ್ಲಿ ನಟಿಸಿದ್ದಕ್ಕೂ ಭರ್ಜರಿ ಸಂಭಾವನೆ ಪಡೆಯುತ್ತಾರೆ. ಅದರ ಜತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆ ಸಿಕ್ಕಿರುವುದು ಸಲ್ಲು ಹುಟ್ಟುಹಬ್ಬದ ಕಳೆ ಹೆಚ್ಚಿಸಿದೆ.

ಇದನ್ನೂ ಓದಿ:

ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಸಲ್ಮಾನ್​ ಖಾನ್​ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada