ಜ್ಯೂ.ಎನ್ಟಿಆರ್ಗೂ ಕಾಡಿತ್ತು ಖಿನ್ನತೆ; ಸೋಲು ಕಲಿಸಿದ ಪಾಠದ ಬಗ್ಗೆ ‘ತಾರಕ್’ ಮಾತು
ಚಿತ್ರರಂಗದಲ್ಲಿ ಇರುವ ಸಾಕಷ್ಟು ಮಂದಿಗೆ ಖಿನ್ನತೆ ಕಾಡಿದ ಉದಾಹರಣೆ ಇದೆ. ಕೆಲವರು ಈ ಬಗ್ಗೆ ಹೇಳಿಕೊಳ್ಳಲು ಹಿಂಜರಿಕೆ ಮಾಡಿದರೆ, ಇನ್ನೂ ಕೆಲವರು ಈ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ.
ಜೀವನದಲ್ಲಿ ಯಶಸ್ಸನ್ನು ಮಾತ್ರ ಕಾಣೋಕೆ ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಇರುವ ಪ್ರತಿಯೊಬ್ಬರಿಗೂ ಇದು ಅನ್ವಯ ಆಗುತ್ತದೆ. ಹಿಟ್ ಸಿನಿಮಾ ನೀಡಿದ ಅನೇಕ ನಟರು ನಂತರ ಹೀನಾಯ ಸೋಲು ಕಂಡ ಉದಾಹರಣೆ ಇದೆ. ಈ ರೀತಿಯ ಸೋಲುಗಳಿಂದ ಸಾಕಷ್ಟು ನಟ-ನಟಿಯರು, ನಿರ್ದೇಶಕರು-ನಿರ್ಮಾಪಕರು ಖಿನ್ನತೆಗೆ ಒಳಗಾದ ಉದಾಹರಣೆ ಇದೆ. ಟಾಲಿವುಡ್ನ ಸ್ಟಾರ್ ನಟ ಜ್ಯೂ.ಎನ್ಟಿಆರ್ಗೂ (Jr. Ntr) ಇದೇ ರೀತಿ ಖಿನ್ನತೆ ಕಾಡಿತ್ತು. ಈಗ ಅವರು ಡಿಪ್ರೆಷನ್ ಬಗ್ಗೆ ಹೇಳಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಇರುವ ಸಾಕಷ್ಟು ಮಂದಿಗೆ ಖಿನ್ನತೆ ಕಾಡಿದ ಉದಾಹರಣೆ ಇದೆ. ಕೆಲವರು ಈ ಬಗ್ಗೆ ಹೇಳಿಕೊಳ್ಳಲು ಹಿಂಜರಿಕೆ ಮಾಡಿದರೆ, ಇನ್ನೂ ಕೆಲವರು ಈ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ. ದೀಪಿಕಾ ಪಡುಕೋಣೆ, ದ್ಯಾನಿಶ್ ಸೇಠ್ ಸೇರಿ ಅನೇಕರು ಡಿಪ್ರೆಷನ್ ತೊಂದರೆ ಎದುರಿಸಿದ್ದರು. ಟಾಲಿವುಡ್ನ ತಾರಕ್ಗೂ ಇದೇ ಸಮಸ್ಯೆ ಕಾಡಿತ್ತು ಎಂಬ ವಿಚಾರದ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಜ್ಯೂ.ಎನ್ಟಿಆರ್ ಬಾಲ ನಟನಾಗಿ 1991ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. 2001ರಲ್ಲಿ ಹೀರೋ ಆಗಿ ಬಣ್ಣದ ಬದುಕು ಆರಂಭಿಸಿದರು. ‘ಸ್ಟುಡೆಂಟ್ ನಂ.1’ ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡರು. ಆಗ ಅವರಿಗೆ ಕೇವಲ 18 ವರ್ಷ. ಆದರೆ, ಆ ನಂತರದಲ್ಲಿ ಕೆಲ ಸೋಲುಗಳನ್ನು ಕೂಡ ಅವರು ಕಂಡರು. ಕೆಲ ಚಿತ್ರಗಳು ಮಕಾಡೆ ಮಲಗಿತು. ಈ ವೇಳೆ ಜ್ಯೂ.ಎನ್ಟಿಆರ್ ಖಿನ್ನತೆಗೆ ಒಳಗಾಗಿದ್ದರಂತೆ.
‘ಸೋಲನ್ನು ಕಂಡಾಗ ನಾನು ಅದನ್ನು ಕಠಿಣವಾಗಿ ತೆಗೆದುಕೊಂಡೆ. ಹಲವು ಸಿನಿಮಾಗಳು ಸೋತವು. ಆಗ ನಾನು ಖಿನ್ನತೆಗೆ ಒಳಗಾಗಿದ್ದೆ. ಸಿನಿಮಾ ಸೋತಿತಲ್ಲ ಎನ್ನುವ ಕಾರಣಕ್ಕೆ ನಾನು ಡಿಪ್ರೆಷನ್ಗೆ ಒಳಗಾಗಿಲ್ಲ. ಆದರೆ, ಓರ್ವ ನಟನಾಗಿ ನನ್ನ ಬಗ್ಗೆ ನಾನು ಗೊಂದಲಕ್ಕೆ ಒಳಗಾದೆ. ನಾನು ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ ಜ್ಯೂ. ಎನ್ಟಿಆರ್.
‘ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ರಾಜಮೌಳಿ ಸಾಂತ್ವನ ಹೇಳಿದರು. ಅವರು ನನಗೆ ಬಲ ತುಂಬಿದರು. ನನ್ನನ್ನು ಆತ್ಮಾವಲೋಕನ ಮಾಡಿಕೊಳ್ಳಲು ಸಹಾಯ ಮಾಡಿದರು’ ಎಂದಿದ್ದಾರೆ ಜ್ಯೂ.ಎನ್ಟಿಆರ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ಜ್ಯೂ.ಎನ್ಟಿಆರ್ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಈ ವೇಳೆ ಜ್ಯೂ.ಎನ್ಟಿಆರ್ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Jr NTR: ಆರ್ಆರ್ಆರ್ ಪತ್ರಿಕಾಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡಿದ ಜೂ. ಎನ್ಟಿಆರ್
2026ಕ್ಕೆ ತೆರೆಗೆ ಬರಲಿದೆ ರಾಜಮೌಳಿ ಮುಂದಿನ ಸಿನಿಮಾ; ಮಾಹಿತಿ ಹಂಚಿಕೊಂಡ ಜ್ಯೂ.ಎನ್ಟಿಆರ್