Salman Khan: ಐಷಾರಾಮಿ ಕಾರು ಬಿಟ್ಟು ಆಟೋ ಓಡಿಸಿದ ಸಲ್ಮಾನ್ ಖಾನ್; ಇಲ್ಲಿದೆ ವಿಡಿಯೋ
ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿರುವ ಪನ್ವೇಲ್ನಲ್ಲಿ ಸಲ್ಮಾನ್ ಖಾನ್ ಅವರು ಫಾರ್ಮ್ಹೌಸ್ ಹೊಂದಿದ್ದಾರೆ. ಶೂಟಿಂಗ್ ಇಲ್ಲದಿರುವಾಗ ಅವರು ಹೆಚ್ಚಾಗಿ ತಮ್ಮ ಫಾರ್ಮ್ಹೌಸ್ನಲ್ಲಿಯೇ ಕಾಲ ಕಳೆಯುತ್ತಾರೆ.
ಸೆಲೆಬ್ರಿಟಿಗಳಿಗೆ ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರುಗಳ ಕ್ರೇಜ್ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅವರು ದುಬಾರಿ ಕಾರು ಖರೀದಿಸಿ ಸುತ್ತಾಟ ನಡೆಸೋದು ಸಾಮಾನ್ಯ. ಈ ರೀತಿ ತಿರುಗಾಟ ನಡೆಸಿದ ಫೋಟೋ ಹಾಗೂ ವಿಡಿಯೋಗಳನ್ನು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ ಉದಾಹರಣೆ ಸಾಕಷ್ಟಿದೆ. ಈಗ ಸಲ್ಮಾನ್ ಖಾನ್ (Salman Khan) ಕೂಡ ಇದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹಾಗಂತ ಅವರು ಯಾವುದೋ ಐಷಾರಾಮಿ ಕಾರನ್ನು ಡ್ರೈವ್ ಮಾಡಿಲ್ಲ. ಬದಲಿಗೆ ಆಟೋ ಓಡಿಸಿ ಸುದ್ದಿಯಾಗಿದ್ದಾರೆ. ಸದ್ಯ, ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿರುವ ಪನ್ವೇಲ್ನಲ್ಲಿ ಸಲ್ಮಾನ್ ಖಾನ್ ಅವರು ಫಾರ್ಮ್ಹೌಸ್ ಹೊಂದಿದ್ದಾರೆ. ಶೂಟಿಂಗ್ ಇಲ್ಲದಿರುವಾಗ ಅವರು ಹೆಚ್ಚಾಗಿ ತಮ್ಮ ಫಾರ್ಮ್ಹೌಸ್ನಲ್ಲಿಯೇ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಸಲ್ಲು ತಮ್ಮ ಜನ್ಮದಿನವನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು. ಸೆಲೆಬ್ರಿಟಿಗಳು ದಂಡು ಇಲ್ಲಿ ಜಮಾಯಿಸಿತ್ತು. ಬರ್ತ್ಡೇ ಮುಗಿದು ಕೆಲ ದಿನ ಕಳೆದರೂ ಸಲ್ಮಾನ್ ಖಾನ್ ಪನ್ವೇಲ್ನಲ್ಲಿಯೇ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈಗ ಅಲ್ಲಿಯೇ ಸಲ್ಲು ಆಟೋ ಓಡಿಸಿದ್ದಾರೆ.
ಸಲ್ಮಾನ್ ಖಾನ್ ಅವರು ಸ್ಥಳೀಯ ಆಟೋ ಡ್ರೈವರ್ ಬಳಿಯಿಂದ ಆಟೋ ಪಡೆದುಕೊಂಡು ಓಡಿಸಿದ್ದಾರೆ. ಈ ವೇಳೆ ಅವರು ಸಖತ್ ಆಗಿ ಭಾರೀ ಖುಷಿಯಾಗಿದ್ದಂತೆ ಕಂಡು ಬಂತು. ಸಲ್ಮಾನ್ ಖಾನ್ ಅಭಿಮಾನಿಗಳು ಖುಷಿಯಿಂದ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
View this post on Instagram
ಹುಟ್ಟುಹಬ್ಬದ ಹೊಸ್ತಿಲಲ್ಲೇ ಕಡಿದಿತ್ತು ಹಾವು
ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಅವರಿಗೆ ಹಾವು ಕಚ್ಚಿತ್ತು. ಫಾರ್ಮ್ಹೌಸ್ನಲ್ಲಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದ ಕೂಡಲೇ ಅಭಿಮಾನಿಗಳು ಆತಂಕಗೊಂಡಿದ್ದರು. ಭಾನುವಾರ (ಡಿ.26) ಮುಂಜಾನೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಹಾವು ಹೆಚ್ಚು ವಿಷಪೂರಿತ ಆಗಿರಲಿಲ್ಲ. ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಎಲ್ಲರೊಡನೆ ಸೇರಿ ಬರ್ತ್ಡೇ ಆಚರಿಸಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಜನ್ಮದಿನ ಸಂಭ್ರಮ; 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸ್ಟಾರ್ ನಟ
Salman Khan: ‘ಪವನ ಪುತ್ರ ಭಾಯಿಜಾನ್’; ಸಲ್ಮಾನ್ ಖಾನ್ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗ
Published On - 3:50 pm, Wed, 29 December 21