ಗುಟ್ಟಾಗಿ ಮದುವೆ ಆದ ಸೀರಿಯಲ್​ ನಟ; ಫೋಟೋ ವೈರಲ್​ ಆದ ಬಳಿಕ ಅಚ್ಚರಿಪಟ್ಟ ಫ್ಯಾನ್ಸ್​

Mohit Raina Marriage: 2005ರಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಮೋಹಿತ್​ ರೈನಾ ಅವರು ಈಗ ಹೊಸ ಜೀವನ ಆರಂಭಿಸಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಗುಟ್ಟಾಗಿ ಮದುವೆ ಆದ ಸೀರಿಯಲ್​ ನಟ; ಫೋಟೋ ವೈರಲ್​ ಆದ ಬಳಿಕ ಅಚ್ಚರಿಪಟ್ಟ ಫ್ಯಾನ್ಸ್​
ಮೋಹಿತ್​ ರೈನಾ-ಅದಿತಿ ಮದುವೆ
Follow us
TV9 Web
| Updated By: ಮದನ್​ ಕುಮಾರ್​

Updated on: Jan 01, 2022 | 7:02 PM

2021 ಮುಗಿದು 2022ರ ಹೊಸ ವರ್ಷ ಆರಂಭ ಆಗಿದೆ. 2021ರಲ್ಲಿ ಅನೇಕ ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗುಟ್ಟಾಗಿ ಮದುವೆ ಆದವರ ಸಂಖ್ಯೆಯೇ ಹೆಚ್ಚು. ಪ್ರಣೀತಾ ಸುಭಾಷ್​​, ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಸೇರಿದಂತೆ ಅನೇಕರು ಗೌಪ್ಯವಾಗಿಯೇ ಹಸೆಮಣೆ ಆಗಿದರು.​ ಅವರ ಸಾಲಿಗೆ ಕಿರುತೆರೆ ನಟ ಮೋಹಿತ್​ ರೈನಾ ಕೂಡ ಸೇರ್ಪಡೆ ಆಗಿದ್ದಾರೆ. ಇಡೀ ಜಗತ್ತು ವರ್ಷಾಂತ್ಯದ ಪಾರ್ಟಿಯಲ್ಲಿ ಮುಳುಗಿರುವಾಗ ಮೋಹಿತ್​ ರೈನಾ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಹೌದು, ಡಿ.31ರಂದು ಅವರ ವಿವಾಹ ನೆರವೇರಿದೆ. ಗೆಳತಿ ಅದಿತಿ ಜತೆ ಅವರು ಹಸೆಮಣೆ ಏರಿದ್ದಾರೆ. ಮೋಹಿತ್​ ರೈನಾ-ಅದಿತಿಯ ಮದುವೆ ಫೋಟೋಗಳು ಈಗ ವೈರಲ್​ ಆಗಿವೆ.

ಸೆಲೆಬ್ರಿಟಿಗಳ ಮದುವೆ ಬಗ್ಗೆ ಸಣ್ಣ ಸುಳಿವು ಸಿಕ್ಕರೂ ದೊಡ್ಡ ಸುದ್ದಿ ಆಗುತ್ತದೆ. ಪ್ರೀತಿ-ಪ್ರೇಮ, ಡೇಟಿಂಗ್​ ವಿಷಯ ಕೂಡ ಬಹುಬೇಗ ವೈರಲ್​ ಆಗುತ್ತದೆ. ಆದರೆ ಮೋಹಿತ್​ ರೈನಾ ಅವರು ತಾವು ಪ್ರೀತಿಸುತ್ತಿದ್ದ ವಿಚಾರವನ್ನೇ ಗುಟ್ಟಾಗಿ ಇಟ್ಟಿದ್ದರು. ಅವರು ಮದುವೆ ಆಗುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಕೇವಲ ಆಪ್ತರ ಸಮ್ಮುಖದಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಮದುವೆಯ ಫೋಟೋಗಳನ್ನು ಇಂದು (ಜ.1) ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೋಹಿತ್​-ಅದಿತಿಯ ಮದುವೆ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಮೆಂಟ್​ಗಳ ಮೂಲಕ ನವ ದಂಪತಿಗೆ ಎಲ್ಲರೂ ಶುಭ ಕೋರಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಮೋಹಿತ್​ ರೈನಾ ಹೆಚ್ಚು ಫೇಮಸ್​. ‘ದೇವೋಂಕೆ ದೇವ್​ ಮಹಾದೇವ್​’ ಸೀರಿಯಲ್​ನಲ್ಲಿ ಅವರು ಶಿವನ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು. ಈಗ ಅವರು ಮದುವೆ ಆಗಿರುವುದರಿಂದ ‘ಶಿವನಿಗೆ ಪಾರ್ವತಿ ಸಿಕ್ಕಳು’ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಹಿಂದಿ ಸೀರಿಯಲ್​ ಮಾತ್ರವಲ್ಲದೇ ಸಿನಿಮಾಗಳಲ್ಲೂ ಮೋಹಿತ್​ ರೈನಾ ನಟಿಸಿದ್ದಾರೆ. ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಸಿನಿಮಾದಿಂದ ಅವರಿಗೆ ಸಖತ್​ ಜನಪ್ರಿಯತೆ ಸಿಕ್ಕಿತು. ನಂತರ ಅವರಿಗೆ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬೇಡಿಕೆ ಹೆಚ್ಚಿತು. ಕೆಲವು ವೆಬ್​ ಸೀರಿಸ್​ಗಳಲ್ಲಿ ಅವರು ನಟಿಸಿದ್ದಾರೆ. ಈ ವರ್ಷ ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾದ ‘ಮುಂಬೈ ಡೈರೀಸ್​ 26/11’ ವೆಬ್​ ಸರಣಿಯಲ್ಲಿ ಡಾಕ್ಟರ್​ ಪಾತ್ರ ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ.

2005ರಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಮೋಹಿತ್​ ರೈನಾ ಅವರು ಈಗ ಹೊಸ ಜೀವನ ಆರಂಭಿಸಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮೋಹಿತ್​ ರೈನಾ ಮತ್ತು ಅದಿತಿ ಅವರು ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ:

‘ಮದುವೆಯಿಂದ ಏನೂ ಬದಲಾವಣೆ ಆಗುವುದಿಲ್ಲ’; ವಿವಾಹದ ಬಗ್ಗೆ ತಾಪ್ಸೀ ಪನ್ನು ತಾತ್ಸಾರ

Year Ender 2021: ಈ ವರ್ಷ ಭಾರೀ ಸುದ್ದಿ ಮಾಡಿದ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ