AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದುವೆಯಿಂದ ಏನೂ ಬದಲಾವಣೆ ಆಗುವುದಿಲ್ಲ’; ವಿವಾಹದ ಬಗ್ಗೆ ತಾಪ್ಸೀ ಪನ್ನು ತಾತ್ಸಾರ

ಮಾಜಿ ಬ್ಯಾಡ್​ಮಿಂಟನ್​​ ಆಟಗಾರ ಮಥಾಯಸ್​ ಬೋ​ ಜತೆ ತಾಪ್ಸೀ ಪನ್ನು ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ.

‘ಮದುವೆಯಿಂದ ಏನೂ ಬದಲಾವಣೆ ಆಗುವುದಿಲ್ಲ’; ವಿವಾಹದ ಬಗ್ಗೆ ತಾಪ್ಸೀ ಪನ್ನು ತಾತ್ಸಾರ
TV9 Web
| Edited By: |

Updated on: Dec 31, 2021 | 1:43 PM

Share

ಮದುವೆ ಬಗ್ಗೆ ಎಲ್ಲರೂ ನಾನಾ ಕನಸು ಕಂಡಿರುತ್ತಾರೆ. ಇನ್ನೂ ಕೆಲವರು ಈ ಬಗ್ಗೆ ತಾತ್ಸಾರ ಮನಸ್ಥಿತಿ ಹೊಂದಿರುತ್ತಾರೆ. ಸೆಲೆಬ್ರಿಟಿ ವಲಯದಲ್ಲೂ ಈ ಎರಡೂ ವರ್ಗದವರು ಇದ್ದಾರೆ. ಕೆಲವರು ಮದುವೆ ಆಗೋಕೆ ಉತ್ಸುಕರಾಗಿದ್ದರೆ, ಇನ್ನೂ ಕೆಲವರು ವಿವಾಹವನ್ನು ಮುಂದೂಡುತ್ತ ಬರುತ್ತಿದ್ದಾರೆ. ಖ್ಯಾತ ನಟಿ ತಾಪ್ಸೀ ಪನ್ನು ಎರಡನೇ ವರ್ಗಕ್ಕೆ ಸೇರುತ್ತಾರೆ. ಅವರಿಗೆ ಮದುವೆ ಆಗೋಕೆ ಯಾವುದೇ ಆತುರ ಇಲ್ಲ. ಮದುವೆ ಆದ ನಂತರ ಏನೂ ಬದಲಾಗುವುದಿಲ್ಲ ಎಂಬುದು ಅವರ ಅಭಿಪ್ರಾಯ. ಈ ವಿಚಾರದ ಬಗ್ಗೆ ಮುಕ್ತವಾಗಿಯೇ ಅವರು ಮಾತನಾಡಿದ್ದಾರೆ.

ಮಾಜಿ ಬ್ಯಾಡ್​ಮಿಂಟನ್​​ ಆಟಗಾರ ಮಥಾಯಸ್​ ಬೋ​ ಜತೆ ತಾಪ್ಸೀ ಪನ್ನು ಡೇಟಿಂಗ್​ ನಡೆಸುತ್ತಿದ್ದಾರೆ . ಈ ವಿಚಾರದ ಬಗ್ಗೆ ಕೆಲವು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಅನೇಕ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ, ಇವರ ಮದುವೆ ಯಾವಾಗ? ಆ ಪ್ರಶ್ನೆಗೆ ಅವರು ಕೊಡುವ ಉತ್ತರ ಹೀಗಿದೆ.

‘ನನಗೆ ಮದುವೆ ಆಗೋಕೆ ಆತುರ ಇಲ್ಲ. ನನಗೆ ಮಾಡಬೇಕಾದ ಕೆಲಸಗಳು ಹಲವು ಇವೆ. ಅವುಗಳನ್ನು ಪೂರ್ಣಗೊಳಿಸಬೇಕಿದೆ. ಆ ಬಳಿಕ ಮದುವೆ ಬಗ್ಗೆ ಆಲೋಚಿಸುತ್ತೇನೆ’ ಎಂದಿದ್ದಾರೆ ತಾಪ್ಸೀ ಪನ್ನು. ವಿವಾಹ ಆದ ಬಳಿಕ ಜೀವನದಲ್ಲಿ ಹೆಚ್ಚೇನು ಬದಲಾವಣೆ ಆಗುವುದಿಲ್ಲ ಎಂಬುದು ತಾಪ್ಸೀ ಅಭಿಪ್ರಾಯ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರದಲ್ಲಿ ನನ್ನ ಬದುಕಿನಲ್ಲಿ ಹೆಚ್ಚೇನು ಬದಲಾವಣೆ ಆಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಈ ಕಾರಣಕ್ಕೆ ನನಗೆ ಮದುವೆ ಆಗೋಕೆ ಹೆಚ್ಚೇನು ಆತುರವಿಲ್ಲ’ ಎಂದಿದ್ದಾರೆ ಅವರು.

ಇತ್ತೀಚೆಗೆ ಮದುವೆ ಬಗ್ಗೆ ಅವರು ಮಾತನಾಡಿದ್ದರು. ‘ನನ್ನ ಕುಟುಂಬದವರಿಗೆ ಒಪ್ಪಿಗೆ ಇಲ್ಲದ ಹುಡುಗನನ್ನು ನಾನು ಮದುವೆ ಆಗುವುದಿಲ್ಲ.  ಮದುವೆ ಆಗುವ ಸಾಧ್ಯತೆ ಇದ್ದರೆ ಮಾತ್ರ ಅಂತಹ ವ್ಯಕ್ತಿ ಮೇಲೆ ನಾನು ಸಮಯ ಹಾಗೂ ಶಕ್ತಿಯನ್ನು ವ್ಯಯಿಸಬೇಕು. ಟೈಮ್​ ಪಾಸ್​ ಮಾಡೋಕೆ ನಂಗೆ ಇಷ್ಟವಿಲ್ಲ. ಒಂದೊಮ್ಮೆ ಮದುವೆ ಆಗುವ ಸಾಧ್ಯತೆ ಕಡಿಮೆ ಇದ್ದರೆ ನಾನು ಅಂಥವರನ್ನು ಹೋಗೋಕೆ ಬಿಡುತ್ತೇನೆ. ಡೇಟ್​ ಮಾಡುವ ಹುಡುಗನಿಗೆ ಮದುವೆ ಆಗುವ ಗುಣ ಇರಲೇಬೇಕು’ ಎಂದು ಅವು ಹೇಳಿಕೊಂಡಿದ್ದರು.  

ಇದನ್ನೂ ಓದಿ: ಹೆಂಡತಿ ಜತೆ ಗಂಡನ ಬಲವಂತದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂಬ ಕೋರ್ಟ್​ ಆದೇಶಕ್ಕೆ ತಾಪ್ಸೀ ಪನ್ನು ಖಡಕ್​ ಪ್ರತಿಕ್ರಿಯೆ