Ananya Panday: ಒಂದೇ ಒಂದು ಫೋಟೋದಿಂದ ಪ್ರೀತಿ ವಿಚಾರ ಒಪ್ಪಿಕೊಂಡ್ರಾ ಅನನ್ಯಾ ಪಾಂಡೆ?
‘ದಡಕ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಇಶಾನ್. ಮೊದಲ ಸಿನಿಮಾದಲ್ಲೇ ಅವರಿಗೆ ಯಶಸ್ಸು ಸಿಕ್ಕಿತ್ತು. ಈಗ ಅವರು ಅನನ್ಯಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday ) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದರು. ಈ ಪ್ರಕರಣದಲ್ಲಿ ಅನನ್ಯಾ ಹೆಸರು ತಳುಕು ಹಾಕಿಕೊಂಡಿತ್ತು. ಆರ್ಯನ್ ಹಾಗೂ ಅನನ್ಯಾ ಮಧ್ಯೆ ಡ್ರಗ್ ವಿಚಾರದಲ್ಲಿ ಚರ್ಚೆ ನಡೆದಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಈಗ ಅನನ್ಯಾ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಪೋಸ್ಟ್ ಮಾಡಿದ ಒಂದೇ ಫೋಟೋದಿಂದ ಅವರ ಪ್ರೀತಿ ವಿಚಾರ ಖಚಿತವಾಗಿದೆ.
ಹೊಸ ವರ್ಷ ಸ್ವಾಗತಿಸೋಕೆ ಎಲ್ಲರೂ ರೆಡಿ ಆಗಿದ್ದಾರೆ. ಬಾಲಿವುಡ್ನ ಸ್ಟಾರ್ ನಟ-ನಟಿಯರು ವಿದೇಶಕ್ಕೆ ಹಾರಿದ್ದಾರೆ. ಅಲ್ಲಿ ಹೊಸ ವರ್ಷ ಆಚರಿಸಿಕೊಳ್ಳಲು ಪ್ಲ್ಯಾನ್ ರೂಪಿಸಿದ್ದಾರೆ. ನಟಿ ಅನನ್ಯಾ ಪಾಂಡೆ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಹೊಸ ವರ್ಷ ಆಚರಿಸಿಕೊಳ್ಳೋಕೆ ಪ್ರವಾಸ ತೆರಳಿದ್ದಾರೆ. ಅನನ್ಯಾ ಜತೆ ಬಾಯ್ಫ್ರೆಂಡ್ ಕೂಡ ತೆರಳಿದ್ದಾರೆ. ಹಾಗಾದರೆ ಅನನ್ಯಾ ಪ್ರಿಯಕರ ಯಾರು? ಇಶಾನ್ ಕಟ್ಟರ್.
View this post on Instagram
‘ದಡಕ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಇಶಾನ್. ಮೊದಲ ಸಿನಿಮಾದಲ್ಲೇ ಅವರಿಗೆ ಯಶಸ್ಸು ಸಿಕ್ಕಿತ್ತು. ಈಗ ಅವರು ಅನನ್ಯಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷ್ಯ ಒದಗಿಸುವ ಫೋಟೋ ಒಂದು ದೊರೆತಿದೆ.
ಅನನ್ಯಾ ಕಾಡಿನ ಮಧ್ಯೆ ಇರುವ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ರೆಸಾರ್ಟ್ನಲ್ಲಿ ನಿಂತು ಆಗಸದ ಫೋಟೋವನ್ನು ಕ್ಲಿಕ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇದೇ ಫೋಟೋವನ್ನು ಇಶಾನ್ ಕೂಡ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಇವರ ನಡುವೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಖಚಿತವಾಗಿದೆ. ಸದ್ಯ, ಎರಡೂ ಫೋಟೋಗಳನ್ನು ಅಕ್ಕಪಕ್ಕ ಇಟ್ಟು ಹೋಲಿಕೆ ಮಾಡಿ ನೋಡಲಾಗುತ್ತಿದೆ.
ಬಾಲಿವುಡ್ನ ಖ್ಯಾತ ನಟ ಚಂಕಿ ಪಾಂಡೆ ಅವರ ಪುತ್ರಿಯೇ ಅನನ್ಯಾ ಪಾಂಡೆ. ನೂರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಚಂಕಿ ಪಾಂಡೆ ಅವರಿಗೆ ಸಲ್ಲುತ್ತದೆ. ಆದರೆ ಅವರ ಮಗಳು ಅನನ್ಯಾ ಈಗ ತಾನೇ ಬಾಲಿವುಡ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಿನ್ನೂ ಅವರಿಗೆ 22ರ ಪ್ರಾಯ. 2019ರಲ್ಲಿ ತೆರೆಕಂಡ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟ ಅವರಿಗೆ ಮೊದಲ ಸಿನಿಮಾದಲ್ಲೇ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು. ‘ಪತಿ ಪತ್ನಿ ಔರ್ ವೋ’, ‘ಖಾಲಿ ಪೀಲಿ’ ಸಿನಿಮಾದಲ್ಲಿ ಅವರು ನಟಿಸಿದರು. ಸದ್ಯ ವಿಜಯ್ ದೇವರಕೊಂಡ ಜೊತೆ ‘ಲೈಗರ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ಸಿನಿಮಾದಿಂದ ಅನನ್ಯಾ ಪಾಂಡೆ ಔಟ್? ಡ್ರಗ್ಸ್ ಕೇಸ್ ಬೆನ್ನಲ್ಲೇ ಇನ್ನೊಂದು ಗಾಸಿಪ್
Ananya Panday: ಬಿಕಿನಿ ಚಿತ್ರಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ಅನನ್ಯಾ ಪಾಂಡೆ
Published On - 7:14 pm, Fri, 31 December 21