ಪರಭಾಷೆಗಳಿಂದ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಬಂತು ಬೇಡಿಕೆ
ಆಂಧ್ರಪ್ರದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಆಗುತ್ತಾ ಇದೆ. ಇದು ದೊಡ್ಡ ಸಾಧನೆ ಅನ್ನಿಸುತ್ತಿದೆ. ಬೆಂಗಳೂರು, ಮೈಸೂರು ಮತ್ತು ಕರಾವಳಿಯಲ್ಲಿ ಚಿತ್ರ ಹೌಸ್ಫುಲ್ ಪ್ರದರ್ಶನ ಆಗುತ್ತಾ ಇದೆ ಎಂದರು ರಿಷಬ್ ಶೆಟ್ಟಿ.
‘ಗರುಡ ಗಮನ ವೃಷಭ ವಾಹನ’ ಸಿನಿಮಾ ಯಶಸ್ಸು ಕಂಡಿದೆ. ಹೀಗಾಗಿ ರಾಜ್ಯ ಪ್ರವಾಸ ಆರಂಭಿಸಿದೆ. ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಕೂಳಿತು ಚಿತ್ರತಂಡ ಸಿನಿಮಾದ ಕ್ಲೈಮ್ಯಾಕ್ಸ್ ವೀಕ್ಷಣೆ ಮಾಡಿದೆ. ಸಿನಿಮಾ ಮುಗಿದ ನಂತರ ನೂರಾರು ಪ್ರೇಕ್ಷಕರು ನಟ ನಿರ್ದೇಶಕ ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಈ ವೇಳೆ ಚಿತ್ರತಂಡ ಪರಭಾಷೆಯಿಂದ ಸಿನಿಮಾಗೆ ಬೇಡಿಕೆ ಬರುತ್ತಿರುವ ವಿಚಾರವನ್ನು ಬಹಿರಂಗ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಬ್ ಶೆಟ್ಟಿ, ‘ಎರಡನೇ ವಾರದಲ್ಲಿ ಥಿಯೇಟರ್ಗಳ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ವಿತರಕರು ಚಿತ್ರ ರಿಲೀಸ್ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಆಗುತ್ತಾ ಇದೆ. ಇದು ದೊಡ್ಡ ಸಾಧನೆ ಅನಿಸುತ್ತಿದೆ. ಬೆಂಗಳೂರು, ಮೈಸೂರು ಮತ್ತು ಕರಾವಳಿಯಲ್ಲಿ ಚಿತ್ರ ಹೌಸ್ಫುಲ್ ಪ್ರದರ್ಶನ ಆಗುತ್ತಾ ಇದೆ. ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ವಿಭಿನ್ನ ರೀತಿಯ ಚಿತ್ರವನ್ನು ಇಷ್ಟಪಡುತ್ತಾರೆ’ ಎಂಬುದು ಸಾಬೀತಾಗಿದೆ ಎಂದಿದ್ದಾರೆ.
‘ಬೇರೆ ಬೇರೆ ಭಾಷೆಗಳಿಂದ ಡಬ್ಬಿಂಗ್ ರೈಟ್ಸ್ ಹಾಗೂ ರಿಮೇಕ್ಗೆ ಬೇಡಿಕೆ ಬರುತ್ತಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ಮಾತುಕತೆ ನಡೆಯಲಿದೆ. ನಾವು ಬಹಳಷ್ಟು ಕಷ್ಟಪಟ್ಟು ಚಿತ್ರವನ್ನು ತಯಾರು ಮಾಡಿದ್ದೇವೆ. ಕೆಲ ವ್ಯಕ್ತಿಗಳು ಮೊಬೈಲ್ನಲ್ಲಿ ಶೂಟಿಂಗ್ ಮಾಡಿ ಪೈರಸಿ ಮಾಡಿ ಮಾಡಿಬಿಟ್ಟಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನವೇ ನಾವು ಕಾನೂನು ರೀತಿಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಪೈರಸಿ ಚಿತ್ರಗಳನ್ನು ನೋಡಬೇಡಿ. ಥಿಯೇಟರ್ಗೆ ಬಂದು ಶ್ರಮಕ್ಕೆ ಬೆಂಬಲ ಕೊಡಿ’ ಎಂದು ರಾಜ್ ಬಿ. ಶೆಟ್ಟಿ ಮನವಿ ಮಾಡಿದರು.
‘ಮುಂದಿನ ಪ್ರಾಜೆಕ್ಟ್ ಬಗ್ಗೆ ಸದ್ಯ ಯಾವುದೇ ಯೋಚನೆ ಇಲ್ಲ. ತಿರುಗಾಟ ಮುಗಿಸಿ 15 ದಿನ ರಿಲೀಫ್ ಮಾಡಿಕೊಳ್ಳಬೇಕಾಗಿದೆ. ಮಂಗಳೂರಿನಲ್ಲಿ ಗೆಳೆಯರ ಜೊತೆ ವಾಲಿಬಾಲ್ ಆಡುತ್ತೇನೆ’ ಎಂದು ರಾಜ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ‘ಪುನೀತ್ ರಾಜ್ಕುಮಾರ್ ಇಲ್ಲ ಅನ್ನೋದನ್ನ ನನಗೆ ನಂಬೋಕೆ ಆಗ್ತಿಲ್ಲ’: ರಿಷಬ್ ಶೆಟ್ಟಿ
‘ರಿಷಬ್ಗೆ ಹೀರೋಯಿನ್ ಕೊಡಬೇಡಿ ಅಂತ ಅವರ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ರು’: ರಾಜ್ ಬಿ. ಶೆಟ್ಟಿ