ಕೊರೊನಾ ವೈರಸ್ ಕಾರಣದಿಂದ ಕಳೆದ ವರ್ಷ ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ಗೆ ಬ್ರೇಕ್ ಹಾಕಲಾಗಿತ್ತು. ಈ ಬಾರಿ ಮತ್ತೆ ಕೊರೊನಾ ಪ್ರಕರಣ ಹೆಚ್ಚಿದೆ. ಹೀಗಾಗಿ ಈ ವರ್ಷದ ಫಿಲ್ಮ್ ಫೆಸ್ಟಿವಲ್ ನಡೆಯುತ್ತದೆಯೋ ಅಥವಾ ಇಲ್ಲವೂ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿದ್ದಾರೆ. ‘ಚಲನ ಚಿತ್ರೋತ್ಸವದ ಸಲಹಾ ಸಮಿತಿಯಲ್ಲಿ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಇದ್ದಾರೆ. ಇದರ ಜತೆಗೆ ಅನೇಕ ನುರಿತರು ತಂಡದಲ್ಲಿ ಇದ್ದಾರೆ. ಫೆಬ್ರವರಿ ಮೂರನೇ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಫಿಲ್ಮ್ ಫೆಸ್ಟ್ ಆಯೋಜನೆ ಮಾಡುವ ಪ್ಲಾನ್ ಇದೆ’ ಎಂದಿದ್ದಾರೆ. ಇದರ ಜತೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಹೊಗಳಿದ್ದಾರೆ.
ಪುನೀತ್ ರಾಜ್ಕುಮಾರ್ ಹೇಳಿದ ವಿಶೇಷ ಸಾಲುಗಳನ್ನು ನೆನಪಿಸಿಕೊಂಡ ಯೂಟ್ಯೂಬ್ ಸಂಸ್ಥೆ